ವರ್ಷ ಪೂರೈಸಿದ ನಗರಸಭೆ ಅಧ್ಯಕ್ಷ ಶೇಷಾದ್ರಿಗೆ ಅಭಿನಂದನೆ

KannadaprabhaNewsNetwork |  
Published : Jan 23, 2026, 02:00 AM IST
21ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೆ.ಶೇಷಾದ್ರಿ ಅವರನ್ನು ಮುಖಂಡರು ಅಭಿನಂದಿಸಿದರು. | Kannada Prabha

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಕೋರಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನ ಸೆಳೆದಿರುವುದಾಗಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಕೋರಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನ ಸೆಳೆದಿರುವುದಾಗಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಅಂಗವಾಗಿ ಸದಸ್ಯರು, ಅಧಿಕಾರಿಗಳು, ಎಲ್ಲ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ನಗರದಲ್ಲಿ ಇನ್ನೂ ಶೇ.52ರಷ್ಟು ಯುಜಿಡಿ ಆಗಿಲ್ಲ. ಇದಕ್ಕೆ 200 ಕೋಟಿ ರು.ಗಳ ಅನುದಾನ ಅಗತ್ಯವಿದೆ. ನಗರದ ಜನರಿಗೆ ಕೊಟ್ಟ ಮಾತಿನಂತೆ ಜಿಲ್ಲಾ ಕೇಂದ್ರ ಅಭಿವೃದ್ಧಿ ಮಾಡಬೇಕಿದೆ. ಯಾರಬ್ ನಗರ, ವಿವೇಕಾನಂದನಗರ, ಅರ್ಚಕರಹಳ್ಳಿ ಸೇರಿದಂತೆ ವಿಸ್ತರಣಾ ವಾರ್ಡ್ ಗಳ ಅಭಿವೃದ್ಧಿಗೆ 500 ಕೋಟಿ ಅನುದಾನದ ಅಗತ್ಯವಿದೆ.‌ ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ. ಜೊತೆಗೆ ಸಾರ್ವಜನಿಕರು, ಮುಖಂಡರ ಸಹಕಾರ ಅಗತ್ಯ ಎಂದರು.

ನಗರಸಭೆ ಅರೆ ಸರ್ಕಾರವಾಗಿ ಕೆಲಸ‌ ಮಾಡಬೇಕು. ಅದನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವಲ್ಲಿ ಸದಸ್ಯರು, ಅಧಿಕಾರಿಗಳ ಪಾತ್ರ ಪ್ರಮುಖವಾದುದು. ಹಾಗಾಗಿ ಮುಂದಿರುವ ಸವಾಲುಗಳನ್ನು ಹಂತಹಂತವಾಗಿ ಬಗೆಹರಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ. ನಗರಗಳು ಯೋಜನೆಗಳ ರೀತಿಯಲ್ಲಿ ಅಭಿವೃದ್ದಿ ಹೊಂದಬೇಕಾದರೆ ಜನಪ್ರತಿನಿಧಿಗಳಿಗೆ ದೂರದೃಷ್ಟಿತ್ವ ಇರಬೇಕಿದೆ. ಆದರೆ, ರಾಜ್ಯದ ಬಹುಪಾಲು ನಗರಸಭೆ ಮತ್ತು ಪುರಸಭೆಗಳಲ್ಲಿ ಕೆಲ ಚುನಾಯಿತ ಪ್ರತಿನಿಧಿಗಳಲ್ಲಿ ದೂರದೃಷ್ಟಿತ್ವದ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ, ರಾಮನಗರ ನಗರಸಭೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದ ಹಲವು ಜನಪರ ಕಾರ್ಯಕ್ರಮಗಳು ಜನಮನದಲ್ಲಿ ಉಳಿದಿವೆ ಎಂದರು.

ನಾನು ಮೊದಲ ಬಾರಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಜನರು ಏಕೋ ಒಪ್ಪಿರಲಿಲ್ಲ. ಜನರು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಅವರ ನೆರವಿಗೆ ನಿಲ್ಲಲು, ಜನರ ಬಯಕೆಯಂತೆ ನಗರಸಭೆಗೆ ಎರಡನೇ ಬಾರಿಗೆ ಅಧ್ಯಕ್ಷನಾದೆ. ಸಾವಿರಾರು ಜನರು ಪಕ್ಷಾತೀತವಾಗಿ ಶುಭ ಕೋರಿದರು. ಆ ಮೂಲಕ ನನಗೆ ಹೆಚ್ಚಿನ ಜವಬ್ದಾರಿ ವಹಿಸಿದರು ಎಂದು ಶೇಷಾದ್ರಿ ಹೇಳಿದರು‌.

ಈ ವೇಳೆ ನಗರಸಭೆ ಸದಸ್ಯರು, ಅಧಿಕಾರಿಗಳು, ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತ ಮುಖಂಡರು, ವಿವಿಧ ಇಲಾಖಾ ಅಧಿಕಾರಿಗಳು ಕೆ.ಶೇಷಾದ್ರಿ ಅವರಿಗೆ ಶುಭ ಕೋರಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಅವರ ನಿವಾಸದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಅಭಿಮಾನಿಗಳಿಂದ ಅಭಿನಂದನೆ‌ ಸ್ವೀಕರಿಸಿದರು. ಸಂಗೀತ ಸಂಜೆ ಕಾರ್ಯಕ್ರಮ ಮುದ ನೀಡಿತು.

ಕೋಟ್‌............

ರಾಮನಗರ ಕ್ಷೇತ್ರದಲ್ಲಿ ನಾನು ಎಂದೂ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡಲ್ಲ. ಸಿ.ಎಂ.ಲಿಂಗಪ್ಪ ಅವರು ರಾಜಕೀಯ ಗುರುಗಳಾದರು. ಗಾಡ್ ಪಾಧರ್ ಯಾರೂ ಇಲ್ಲದೆ ಜನರ ಜೊತೆಯಲ್ಲಿದ್ದುಕೊಂಡು ರಾಜಕಾರಣ ಮಾಡಿಕೊಂಡು‌ ಬಂದವನು. ನನಗೆ ಮತ್ತಷ್ಟು ಜನರ ನೈತಿಕ ಶಕ್ತಿ ಬೇಕಿದೆ.

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

21ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೆ.ಶೇಷಾದ್ರಿ ಅವರನ್ನು ಮುಖಂಡರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಟ್ಕಾ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ
ಭ್ರಷ್ಟಾಚಾರದಲ್ಲಿ ಮುಳುಗಿದೆ ಕಾಂಗ್ರೆಸ್ ಸರ್ಕಾರ