ಗ್ಯಾರಂಟಿಗಳಿಂದ ಜನರಿಗೆ ಶಕ್ತಿ ಕೊಟ್ಟ ಕಾಂಗ್ರೆಸ್‌: ಸಂಸದ ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Mar 06, 2025, 12:34 AM IST
ಪೋಟೊ5ಕೆಎಸಟಿ1: ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆಯನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ತಂದವರು ಈಗಿನ ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ. ಈಗ ಆ ಕೆರೆಗಳಿಂದ ಸಾವಿರಾರು ರೈತರಿಗೆ ಅನೂಕೂಲವಾಗುತ್ತಿದೆ. ಕೆಕೆಆರ್‌ಡಿಬಿ ವತಿಯಿಂದ ಕುಷ್ಟಗಿ ತಾಲೂಕಿಗೆ ₹ 130 ಕೋಟಿ ಹಣ ಬಿಡುಗಡೆಯಾಗಲಿದೆ.

ಕುಷ್ಟಗಿ:

ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್‌ ಜನರಿಗೆ ಶಕ್ತಿ ಕೊಟ್ಟಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ಹನುಮನಾಳದಲ್ಲಿ ನಡೆದ ಹನುಮನಾಳ ಹೋಬಳಿ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಯತ್ತ ಸಾಗಿಸುತ್ತಿದೆ ಎಂದರು.

ದೇಶದಲ್ಲಿ ನರೇಗಾ ಯೋಜನೆ, ಡ್ಯಾಂ ಕಟ್ಟಿದ್ದು ನಮ್ಮ ಪಕ್ಷ. ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿದಿಲ್ಲ. ಅವರ ಸಾಧನೆಗಳು ಶೂನ್ಯವಾಗಿವೆ ಎಂದ ಹಿಟ್ನಾಳ, ನರೇಗಾ ಯೋಜನೆಯಿಂದ ಗುಳೆ ಹೋಗುವುದು ಕಡಿಮೆಯಾಗುತ್ತಿದೆ. ಪ್ರತಿ ಗ್ರಾಮವು ಅಭಿವೃದ್ಧಿ ಗ್ರಾಮವಾಗಬೇಕು ಎಂಬುದು ಪಕ್ಷದ ಕನಸಾಗಿದೆ ಎಂದರು.

ಕುಷ್ಟಗಿ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ತಂದವರು ಈಗಿನ ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ. ಈಗ ಆ ಕೆರೆಗಳಿಂದ ಸಾವಿರಾರು ರೈತರಿಗೆ ಅನೂಕೂಲವಾಗುತ್ತಿದೆ. ಕೆಕೆಆರ್‌ಡಿಬಿ ವತಿಯಿಂದ ಕುಷ್ಟಗಿ ತಾಲೂಕಿಗೆ ₹ 130 ಕೋಟಿ ಹಣ ಬಿಡುಗಡೆಯಾಗಲಿದೆ. ಇದರಿಂದ ಅಭಿವೃದ್ದಿಗೆ ವೇಗ ದೊರೆಯಲಿದೆ ಎಂದು ಹೇಳಿದರು.

ದಿಶಾ ಸಮಿತಿ ಸದಸ್ಯ ದೊಡ್ಡಬಸವನಗೌಡ ಬಯ್ಯಾಪುರ ಮಾತನಾಡಿ, ತಾಲೂಕಿಗೆ ಹೆಚ್ಚು ಒತ್ತು ನೀಡುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಲಾಡ್ಲೇಮಷಾಕ ದೋಟಿಹಾಳ, ನೇಮಣ್ಣ ಮೇಲಸಕ್ರಿ, ಕಲ್ಲಪ್ಪ ತಳವಾರ, ಗ್ರಾಪಂ ಅಧ್ಯಕ್ಷೆ ಸುಜಾತ ಚಿಕ್ಕನಾಳ, ಗ್ಯಾರಂಟಿ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್, ಕೆ.ಬಿ. ತಳವಾರ, ಪ್ರಕಾಶ ರಾಠೋಡ, ವಸಂತ ಮೇಲಿನಮನಿ, ಸುರೇಶ ಕುಂಟನಗೌಡ್ರ, ಈರಣ್ಣ ಬಾದಾಮಿ, ಉಮಾದೇವಿ ಪೊಲೀಸ್‌ಪಾಟೀಲ, ಶೋಭಾ ಪುರತಗೇರಿ, ಪದ್ಮಾವತಿ ಬಸ್ತಿ, ಶಿವಯ್ಯ ಹಿರೇಮಠ, ಭುವನೇಶ್ವರಿ ಮೊಟಗಿ, ತಿಪ್ಪವ್ವ ತಳವಾರ, ಯಮನೂರಪ್ಪ ಅಬ್ಬಿಗೇರಿ, ಮಲ್ಲಪ್ಪ ಭಂಡಾರಿ, ಬಸವಂತಪ್ಪ ಕುರುಬನಾಳ ಸೇರಿದಂತೆ ಇತರರು ನೂರಾರು ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ