ಡಂಬಳ: ಸರ್ಕಾರಿ ಸಂಸ್ಥೆಗಳನ್ನು ಕಟ್ಟುವ ಮೂಲಕ ಸದೃಢ ರಾಷ್ಟ್ರ ನಿರ್ಮಿಸಿದ ಶ್ರೇಯಸ್ಸು ಕಾಂಗ್ರೆಸ್‌ನದ್ದಾಗಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಲು ಶ್ರಮಿಸುವೆ ಎಂದು ಗದಗ- ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡದೇ ಖಾಸಗಿ ಕಂಪನಿಗಳ ಸಾಲ ಮನ್ನಾ ಮಾಡುತ್ತಿರುವುದನ್ನು ನೋಡಿದರೆ ದೇಶವನ್ನು ಖಾಸಗಿ ಕಂಪನಿಯವರ ಕೈಯಲ್ಲಿ ನೀಡಲು ಹೊರಟಿರುವಂತೆ ಕಾಣುತ್ತಿದೆ. ಇವರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಟಿ. ಈಶ್ವರ ಮಾತನಾಡಿ, ಬೆಲೆ ಏರಿಕೆ, ನಿರುದ್ಯೋಗ, ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಇವುಗಳನ್ನು ಮರೆಮಾಚಲು ಜಾತಿ, ಧರ್ಮದ ಆಧಾರದ ಮೇಲೆ ಬಿಜೆಪಿ ಮತ ಕೇಳುತ್ತಿದೆ, ಯುವಕರ ದಾರಿ ತಪ್ಪಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲದ ಬಿಜೆಪಿ ನಾಯಕರು ಆಡಳಿತದಲ್ಲಿ ಸಮಾನತೆ ತರಲು ಸಾಧ್ಯವಿಲ್ಲ. ಈ ಕಾರಣದಿಂದ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವಿ.ಆರ್. ಗುಡಿಸಾಗರ, ವಿ.ಟಿ. ಮೇಟಿ, ಡಿ.ಡಿ. ಮೋರನಾಳ, ಮಹೇಶ ಗಡಗಿ, ಜಾಕೀರ ಮೂಲಿಮನಿ, ಡಂಬಳ ಗ್ರಾಪಂ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ, ಉಪಾಧ್ಯಕ್ಷೆ ಲಕ್ಷ್ಮವ್ವ ಕಾಶಭೋವಿ, ಶೋಭಾ ಮೇಟಿ, ಹುಲಿಗೆವ್ವ ಪಾಟೀಲ, ಮಹಾದೇವಕ್ಕ ಕೊಳ್ಳಾರ, ಶೇಖವ್ವ ಪಲ್ಲೇದ, ವಾಸಪ್ಪ ಕಾಶಭೋವಿ, ಮರಿತೇಮಪ್ಪ ಆದಮ್ಮನವರ, ಸೋಮಣ್ಣ ಗುಡ್ಡದ, ನಾಗೇಶಬಟ್ಟ ಧರ್ಮಾಧಿಕಾರಿ, ರಾಮನಗೌಡ ಹಿರೇಗೌಡರ, ಸಿದ್ದಣ್ಣ ನಂಜಪ್ಪನವರ, ಎಸ್.ಪಿ. ಮುತ್ತಿನಪೆಂಡಿಮಠ, ಗವಿಸಿದ್ದಪ್ಪ ಬಿಸನಳ್ಳಿ, ಮಲ್ಲಿಕಾರ್ಜುನ ಖಾರಪುಡಿ, ಸುರೇಶ ಗಡಗಿ, ಮುತ್ತಣ್ಣ ಕೊಂತಿಕಲ್ಲ, ಮುದಿಯಪ್ಪ ಗದಗಿನ, ನಿಂಗಪ್ಪ ಪಲ್ಲೇದ, ಹಾಲಪ್ಪ ಡೊಳ್ಳಿನ, ಬಸರಡ್ಡಿ ಬಂಡಿಹಾಳ, ಬಸೀರಹಮ್ಮದ ತಾಂಬೋಟಿ, ಶರಣು ಬಂಡಿಹಾಳ, ಬಾಬು ಮೂಲಮನಿ, ಬಾಬುಸಾಬ ಸರಕವಾಸ, ರಂಗಪ್ಪ ಜೊಂಡಿ ಇದ್ದರು.