ಕಾರ್ಯಕರ್ತರ ಕಡೆಗಣನೆಯಿಂದ ಕಾಂಗ್ರೆಸ್ ಪಕ್ಷ ಕುಂಠಿತ: ಖಡಕಡಿ ಫೀರ್ ಸಾಹೇಬ್

KannadaprabhaNewsNetwork | Published : Jan 20, 2024 2:04 AM

ಸಾರಾಂಶ

ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಸಹಕಾರ ದೊರಕದೆ ಕಾಂಗ್ರೆಸ್‌ ಪಕ್ಷ ಹಾಸನದಲ್ಲಿ ಕುಂಠಿತವಾಗಿದೆ ಎಂದು ಕೆಪಿಸಿಸಿ ಸದಸ್ಯರಾದ ಖಡಕಡಿ ಫೀರ್ ಸಾಹೇಬ್ ಹಾಗೂ ರಾಜ್ಯ ಸೇವಾದಳದ ಮರ್ಕುಲಿ ಗೋಪಾಲೇಗೌಡ ಬೇಸರ ವ್ಯಕ್ತಪಡಿಸಿದರು.

ಬೇಸರ । ಮರ್ಕುಲಿ ಗೋಪಾಲೇಗೌಡ । ಲೋಕಸಭೆ ಚುನಾವಣಾ ಅಭ್ಯರ್ಥಿ ಘೋಷಿಸಲು ವಿಫಲಕನ್ನಡಪ್ರಭ ವಾರ್ತೆ ಹಾಸನ

ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಸಹಕಾರ ದೊರಕದೆ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ಕುಂಠಿತವಾಗಿದೆ ಎಂದು ಕೆಪಿಸಿಸಿ ಸದಸ್ಯರಾದ ಖಡಕಡಿ ಫೀರ್ ಸಾಹೇಬ್ ಹಾಗೂ ರಾಜ್ಯ ಸೇವಾದಳದ ಮರ್ಕುಲಿ ಗೋಪಾಲೇಗೌಡ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಮುಂಬರುವ ಲೋಕಸಭಾ ಚುನಾವಣೆ ಅಭ್ಯರ್ಥಿಗಾಗಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಹಿರಿಯ ಕಾಂಗ್ರೆಸ್ಸಿಗರು ಮತ್ತು ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳು ಎಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ ಒಮ್ಮತದ ಅಭ್ಯರ್ಥಿಯನ್ನು ಘೋಷಿಸಲು ಜಿಲ್ಲಾ ಸಚಿವರು ವಿಫಲರಾಗಿದ್ದು ಕಾಂಗ್ರೆಸ್ ಸಂಘಟನೆಯ ಶಕ್ತಿ ಕುಂದುತ್ತಿರುವುದು ಎಲ್ಲರಿಗೆ ತಿಳಿದ ವಿಷಯವೇ, ಒಬ್ಬ ಹಿಂದುಳಿದ ಜನಾಂಗದ ಅಧ್ಯಕ್ಷರನ್ನು ನೇಮಿಸಿದರು. ಅವರಿಗೆ ಪೂರ್ಣ ಪ್ರಮಾಣದ ಸಹಕಾರ ದೊರಕದ ಸಂಘಟನೆಯಲ್ಲಿ ಕುಂಠಿತವಾಗುತ್ತಿದೆ, ಇದರ ಪರಿಣಾಮ ವಿಧಾನಸಭೆಯ ಸೋಲು ಜಿಲ್ಲೆಯಲ್ಲಿ ಸಾಕ್ಷಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಗೆ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವ ಅಧ್ಯಕ್ಷರು ಬೇಕಾಗಿದ್ದಾರೆ. ಜಿಲ್ಲೆಯ ಮಂತ್ರಿಗಳಿಗೆ ಸರಿಯಾದ ಮಾಹಿತಿ ನೀಡದೆ ಅವರನ್ನು ತಪ್ಪುದಾರಿಗೆ ಎಳೆದು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಸೋಲಿಸಿ. ಮಂತ್ರಿ ಪದವಿಗೆ ಕುತ್ತು ತರುವಂತಹ ಕೆಲಸ ಕಾಣದ ಕೈಗಳು ಮಾಡುತ್ತಿವೆ. ಮಂತ್ರಿಗಳಿಗೆ ಎಚ್ಚರ ವಹಿಸಿ ೮ ತಿಂಗಳಿಂದಲೂ ಯಾವ ತಾಲೂಕಿಗೂ ಮಂತ್ರಿಗಳನ್ನು ಕರೆದುಕೊಂಡು ಹೋಗದೆ ಹಾಗೂ ವಿಧಾನಸಭೆ ಚುನಾವಣೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡದೆ ಸ್ವಪ್ರತಿಷ್ಠೆಗಾಗಿ ವರ್ಗಾವಣೆ ದಂಧೆ, ನಿಷ್ಠಾವಂತ ಅಧಿಕಾರಿಗಳಿಗೆ ಕಿರುಕುಳ ಕೊಡುವುದೇ ಮುಖ್ಯ ಉದ್ದೇಶದಿಂದ ಕಾರ್ಯಕರ್ತರ ಮನಸ್ಸಿಗೆ ಘಾಸಿ ಆಗಿದೆ ಎಂದು ತಮ್ಮ ನೋವನ್ನು ಹೊರ ಹಾಕಿದರು.

ಜಿಲ್ಲಾ ಮಂತ್ರಿಗಳು ಜಿಲ್ಲೆಗೆ ಬಂದಾಗ ಮಾತ್ರ ಕಾಣಿಕೊಳ್ಳುವ ನಾಯಕರು, ಮಂತ್ರಿಗಳು ಚುನಾವಣೆ ನಂತರ ಕಾಣೆಯಾಗುತ್ತಾರೆ, ಇನ್ನಾದರೂ ಕೆಲವು ಹೊಗಳುಭಟ್ಟ ರಾಜಕಾರಣಿಗಳನ್ನು ದೂರವಿಟ್ಟು ನಿಷ್ಠಾವಂತ ಕರ್ಯಕರ್ತರನ್ನು ಗುರುತಿಸಿ ವರ್ಗಾವಣೆಯ ಅರ್ಜಿ ಹಿಡಿದುಕೊಂಡು ಬರುವ ದುಷ್ಟ ರಾಜಕಾರಣಿಗಳನ್ನು ದೂರವಿಡಬೇಕೆಂದು ಜಿಲ್ಲಾ ಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಕಾರ್ಯಕರ್ತರನ್ನು ಹುರಿದುಂಬಿಸಲು ಜಿಲ್ಲಾ ಮಂತ್ರಿಗಳು ವಿಧಾನಸಭೆಯಲ್ಲಿ ಸೋತ ಅಭ್ಯರ್ಥಿಗಳನ್ನು ಹಿರಿಯ ಕಾಂಗ್ರೆಸ್ ನಾಯಕರಾದ ಶಿವರಾಮ್ ರವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿಯನ್ನು ಸೂಚಿಸಿ ಗೆಲ್ಲಿಸಬೇಕು ಎಂದು ತಿಳಿಸಿದರು.

ಸೋತ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನು ಘೋಷಿಸಿದರೆ ಪಕ್ಷಕ್ಕೆ ಹಾನಿಯಾಗುವುದು ಖಂಡಿತ, ವಿಧಾನಸಭೆಯಲ್ಲಿ ಸೋತ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ತಾಲೂಕಿನಲ್ಲೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.

ರಾಜ್ಯ ಸೇವಾದಳದ ಮರ್ಕುಲಿ ಗೋಪಾಲೇಗೌಡ, ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಮೀರ್ ಜಾನ್, ಟಿಪ್ಪು ತೌಕಾಲ್ ಸಂಘದ ಅಧ್ಯಕ್ಷ ಶಫಿ, ಶೇಖರಪ್ಪ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಕೆಪಿಸಿಸಿ ಸದಸ್ಯರಾದ ಖಡಕಡಿ ಫೀರ್ ಸಾಹೇಬ್ ಹಾಗೂ ರಾಜ್ಯ ಸೇವಾದಳದ ಮರ್ಕುಲಿ ಗೋಪಾಲೇಗೌಡ ಮಾತನಾಡಿದರು.

Share this article