2028ರ ಚುನಾವಣೆಗೆ ಕಾಂಗ್ರೆಸ್ ಯುವ ಘಟಕ ಸಿದ್ಧತೆ: ಎಚ್.ಎಸ್.ಮಂಜುನಾಥ

KannadaprabhaNewsNetwork |  
Published : Jun 16, 2025, 03:09 AM IST
(ಫೋಟೋ 15ಬಿಕೆಟಿ9ಬಾಗಲಕೋಟೆ ನಗರದ ಖಾಸಗಿ ಹೊಟೇಲನಲ್ಲಿ ನಡೆದ ಕಾಂಗ್ರೆಸ್ ಯುವ ಘಟಕದ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಭವ್ಯ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಆಡಳಿತ ನೀಡುತ್ತದೆ. ಪಕ್ಷದ ಸಂಘಟನೆ ಚುರುಕುಗೊಳಿಸಲಾಗುತ್ತಿದೆ. ಮುಂಬರುವ 2028ರ ಚುನಾವಣೆಗೆ ಕಾಂಗ್ರೆಸ್ ಯುವ ಘಟಕ ಸಿದ್ಧತೆ ಆರಂಭಿಸಿದೆ ಎಂದು ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭವ್ಯ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಆಡಳಿತ ನೀಡುತ್ತದೆ. ಪಕ್ಷದ ಸಂಘಟನೆ ಚುರುಕುಗೊಳಿಸಲಾಗುತ್ತಿದೆ. ಮುಂಬರುವ 2028ರ ಚುನಾವಣೆಗೆ ಕಾಂಗ್ರೆಸ್ ಯುವ ಘಟಕ ಸಿದ್ಧತೆ ಆರಂಭಿಸಿದೆ ಎಂದು ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷದಲ್ಲಿ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಕೋಟ್ಯಂತರ ಜನರಿಗೆ ತಲುಪಿದೆ. ಅಲ್ಲದೆ ಅಭಿವೃದ್ಧಿ ಕಾರ್ಯಗಳಿಗೂ ಮನ್ನಣೆ ನೀಡಿದೆ ಎಂದರು.

ಮುಂಬರುವ 2028ರ ಚುನಾವಣೆಗೆ ಈಗಿನಿಂದಲೇ ಸಜ್ಜಾಗುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಪ್ರವಾಸ ಆರಂಭಿಸಿದ್ದು, ಬೀದರ್, ಕಲಬುರ್ಗಿ, ವಿಜಯಪುರ ಮೂಲಕ ಬಾಗಲಕೋಟೆ ಸೇರಿದಂತೆ ಹಂತ ಹಂತವಾಗಿ ಎಲ್ಲೆಡೆ ಭೇಟಿ ನೀಡಿ ಯುವಕರಲ್ಲಿ ಹುರುಪು, ಉತ್ಸಾಹ ತುಂಬಬೇಕಿದೆ. ಬೇರು ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಸಬೇಕಿದೆ. ಬ್ಲಾಕ್, ವಿಧಾನಸಭೆ, ಜಿಲ್ಲೆ, ಸೇರಿದಂತೆ ರಾಜ್ಯಮಟ್ಟದ ಪದಾಕಾರಿಗಳು ಪ್ರತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಆಡಳಿತ ನಡೆಸಿ 11 ವರ್ಷ ಪೂರೈಸಿದ್ದು, ಕೆಲಸ ಕಾರ್ಯಗಳು ಶೂನ್ಯವಾಗಿವೆ. ಕೊಟ್ಟ ಮಾತಿನಂತೆ ಜನತೆಗೆ ಹೊಟ್ಟೆ ತುಂಬಿಸುವ ಕೆಲಸ ನಡೆದಿಲ್ಲ. ಯಾವುದೇ ಯೋಜನೆಗಳು ಫಲಾನುಭವಿಗಳ ಮನೆಗೆ ತಲುಪಿಲ್ಲ. ನೋಟ್ಬ್ಯಾನ್, ಜನಧನ್ ಹೀಗೆ ಜನತೆಗೆ ಹೊರೆಯಾಗುವ ಕೆಲಸಗಳನ್ನೇ ಕೇಂದ್ರ ಸರ್ಕಾರ ಮಾಡಿದೆ ಎಂದು ಹರಿಹಾಯ್ದರು.ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪೂರ, ವಿಜಯ ಮುಚಖಂಡಿ ಇತರರು ಇದ್ದರು.

=======ಜಿಪಂ, ತಾಪಂ ಚುನಾವಣೆ ತಯಾರಿ ನಡೆಸಿ:

ಬೆಳಗ್ಗೆ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥಗೌಡ, ಬೂತ್ ಮಟ್ಟದ ಸಂಘಟನಾ ಬಲವರ್ಧನೆ ಕುರಿತು ಚಟುವಟಿಕೆ ನಡೆಸಬೇಕು. ಯುವ ಜನತೆಗೆ ಪಕ್ಷದ ಧ್ಯೇಯ ಮತ್ತು ನಿಲುವುಗಳನ್ನು ತಲುಪಿಸುವ ಪ್ರಯತ್ನ ಮಾಡಬೇಕು. ತಾಲೂಕು ಮತ್ತು ಜಿಲ್ಲಾ ಪಂಚಾಯತಿಯ ಚುನಾವಣೆಯ ತಯಾರಿ ಮಾಡಬೇಕು, ಸ್ಥಳೀಯ ಸಮಸ್ಯೆಗಳ ಬಗ್ಗೆ ಯುವ ಮುಖಂಡರಿಂದ ಸ್ಪಷ್ಟ ಅಭಿಪ್ರಾಯ ಸಂಗ್ರಹಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ, ಉಸ್ತುವಾರಿ ಎನ್.ಎಚ್.ಭಂಡಾರಿ, ರಾಜ್ಯ ಉಪಾಧ್ಯಕ್ಷ ಅಬ್ದುಲ ದೇಸಾಯಿ, ದೀಪಕ ಶಿವಣ್ಣ, ಜಿಲ್ಲಾಧ್ಯಕ್ಷ ಶಿವಕುಮಾರ ದಾನಕ್ಕನ್ನವರ, ಮುಖಂಡರಾದ ಮಹೇಶ ಜಾಲವಾದಿ ಮಂಜುನಾಥ ಮುಚಖಂಡಿ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ