ಕಾಂಗ್ರೆಸಿಗರು ಉರ್ದು ಭಾಷಾ ಪ್ರೇಮಿಗಳು: ಸಿದ್ದಲಿಂಗ ಸ್ವಾಮೀಜಿ

KannadaprabhaNewsNetwork |  
Published : Oct 04, 2026, 02:00 AM IST
 ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗ ಸ್ವಾಮೀಜಿ  | Kannada Prabha

ಸಾರಾಂಶ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಣೆಗೆ ಸರ್ಕಾರ ಮುಂದಾಗಿರುವುದಕ್ಕೆ ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕಲಬುರಗಿವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಣೆಗೆ ಸರ್ಕಾರ ಮುಂದಾಗಿರುವುದಕ್ಕೆ ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ಹೊರಹಾಕಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡಲ್ಲಿ ಕನ್ನಡವೇ ಪ್ರಧಾನ, ಹೀಗಿರುವಾಗ ವಿಧಾನಸೌಧ ಮೆಟ್ಟಿಲ ಮೇಲೆ ಉರ್ದು ಹಬ್ಬ ಯಾಕೆ ಬೇಕು? ಯಾವ ಪ್ರತಿಷ್ಠೆಗೋಸ್ಕರ ಬೇಕು? ಇದು ಕಾಂಗ್ರೆಸ್‌ ಪಕ್ಷದ ಅತಿಯಾದ ಮುಸ್ಲಿಂ ತುಷ್ಟೀಕರಣ ಎಂದು ರಾಜ್ಯ ಸರ್ಕಾರದ ವಿರುದ್ಧ ಸ್ವಾಮೀಜಿ ಕಿಡಿ ಕಾರಿದರು.ಕಾಂಗ್ರೆಸ್ ಪಾರ್ಟಿ ಉರ್ದು ಲಾಂಗ್ವೇಜ್ ಲವ್ವರ್ಸ್ ಪಾರ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಉರ್ದು ಭಾಷೆಯ ಮೇಲೆ ಪ್ರೀತಿ ಜಾಸ್ತಿ ಇದೆ, ಇವರು ಕನ್ನಡಕ್ಕಿಂತಲೂ ಹೆಚ್ಚು ಉರ್ದು ಭಾಷೆಗೆ ಪ್ರಾತಿನಿಧ್ಯ ಕೊಡುತ್ತಿದ್ದಾರೆ. ಉರ್ದು ಪ್ರೇಮಿ ಸರ್ಕಾರ, ಮುಸ್ಲಿಂ ಓಟಿಗಾಗಿ ತುಷ್ಠಿಕರಣ ಮಾಡುತ್ತಿದ್ದಾರೆ ಎಂದು ದೂರಿದರು.ಖರ್ಗೆ ಅವರು ಸಹ ಉರ್ದು ಭಾಷೆಗೆ 2ನೇ ಅವಕಾಶವಿದೆ ಎಂದು ಹೇಳಿದ್ದಾರೆ, ಕಲಬುರಗಿಯಲ್ಲಿಯೂ ಸಹ ಕೆಲವು ಕಡೆ ಉರ್ದು ಬೋರ್ಡ್‌ ಹಾಕಿದ್ದಾರೆ. ಇವತ್ತು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡುತ್ತಾರೆ , ನಾಳೆ ವಿಧಾನಸೌಧಕ್ಕೂ ಉರ್ದು ಭಾಷೆಯ ಬೋರ್ಡ್‌ ಹಾಕಬಹುದು. ಮುಸ್ಲಿಂ ಓಲೈಕೆಗಾಗಿ ಈ ನಿರ್ಧಾರ ಮಾಡಿದ್ದಾರೆ. ಹಾಗಾದಲ್ಲಿ ಮುಸ್ಲಿಂ ಸಮಾಜದವರು ಕರ್ನಾಟಕದಲ್ಲಿದ್ದು ಕನ್ನಡ ಯಾವಾಗ ಕಲಿಯುವುದು ? ಎಂದು ಸಿದ್ದಲಿಂಗಸ್ವಾಮೀಜಿ ಪ್ರಶ್ನಿಸಿದರು.ನಾಳೆ ರಾಜ್ಯದಲ್ಲಿ ಎಲ್ಲ ವ್ಯವಹಾರ ಉರ್ದು ಭಾಷೆಯಲ್ಲಿಯೇ ಆಗುತ್ತದೆ. ಹೀಗಾದ್ರೆ ಕರ್ನಾಟಕದಲ್ಲಿ ಕನ್ನಡ ಹೇಗೆ ಬೆಳೆಯಬೇಕು ? ಓಟಿಗಾಗಿ ಉರ್ದು ಪ್ರೇಮಿಗಳಾಗುತ್ತಿದ್ದಾರೆ, ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರವೇ ಹೀಗೆಲ್ಲಾ ಉರ್ದು ಭಾಷೆಯ ಓಲೈಕೆಗೆ ಮುಂದಾಗಿರುವುದು ದುರಂತ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ಧಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರುರಾಜ್ಯ ಸರ್ಕಾರದಿಂದ ರೈತರಿಗೆ 2,500 ರು. ಘೋಷಣೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದಲಿಂಗ ಸ್ವಾಮೀಜಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿಗಳದ್ದು ಸಾವಿರಾರು ಕೋಟಿ ಆಸ್ತಿ ಇದೆ. ನಿಮಗೆ ಓಟ್ ಹಾಕಿ ಗೆಲ್ಲಿಸಿರುವ ರೈತರಿಗೆ ಬರಿ 2,500 ರು. ಭಿಕ್ಷೆ ರೂಪದಲ್ಲಿ ಘೋಷಣೆ ಮಾಡಿದ್ದಿರಿ? ಪ್ರತಿ ಎಕರೆಗೆ 50 ಸಾವಿರ ರು. ಹಣ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಕಳೆದ ವರ್ಷ ಅತಿವೃಷ್ಟಿ, ಈ ವರ್ಷ ಭೀಕರ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ನೀವಾದ್ರೆ ನಿಮ್ಮ ಸಂಬಳ ಹೆಚ್ಚು ಮಾಡಿಕೊಳ್ಳುತ್ತೀರಿ. ಹೊಸ ಹೊಸ ಕಾರ್ ಖರೀದಿ ಮಾಡ್ತಿರಿ, ಮನೆಗಳನ್ನು ನವೀಕರಣ ಮಾಡಿಸುತ್ತೀರಿ. ಅದಕ್ಕೆಲ್ಲಾ ನಿಮಗೆ ದುಡ್ಡು ಇರುತ್ತದೆ. ಆದ್ರೆ ನಮ್ಮ ರೈತರಿಗಾದ್ರೆ 2,500 ರುಪಾಯಿ ಘೋಷಣೆ ಮಾಡುತ್ತೀರಿ. ರೈತರ ಕಣ್ಣೀರಿನ ಶಾಪದಿಂದ ಕಾಂಗ್ರೆಸ್ ಕೊಚ್ಚಿ ಹೋಗುವುದು ಖಚಿತ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.ಜೇವರ್ಗಿಯಲ್ಲಿ ಆಡಳಿತ ಹದಗೆಟ್ಟಿದೆ. ಶಾಸಕರು ಸಚಿವರಾದ ಮೇಲೆ ಜೇವರ್ಗಿಗೆ ಬರುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಜನರ ಸುಲಿಗೆ ಮಾಡುತ್ತಿದ್ದಾರೆ. ಇವನ್ನೆಲ್ಲ ವಿರೋಧಿಸಿ ಶೀಘ್ರ ಹೋರಾಟ ನಡೆಸಲಾಗುತ್ತದೆ ಎಂಜು ಸ್ವಾಮೀಜಿ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಕನೂರ ಪರ ಜೋಶಿ ಪ್ರಚಾರ
ಮಹದಾಯಿ ಅನುಮತಿ, 5 ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಿ