ಸಚಿವ ಶಿವಾನಂದ್ ಪಾಟೀಲ್ ನೀಡಿರುವ ಹೇಳಿಕೆಗೆ ಕಿಡಿ
ಕಾಂಗ್ರೆಸ್ ಪಕ್ಷದವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ, ಅವರ ಜಾಗದಲ್ಲಿ ನಾನು ಇದ್ದಿದ್ದರೆ ಎನ್ ಕೌಂಟರ್ ಮಾಡಿ ತೋರಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಶಿವಾನಂದ್ ಪಾಟೀಲ್ ನೀಡಿರುವ ಹೇಳಿಕೆಗೆ ಕಿಡಿ ಕಾರಿದರು.ಬ್ರದರ್ಸ್ ಬೇಜಾರಾಗ್ತಾರೆಂದು ಆರೋಪಿಗಳ ಹೆಸರು ಹೇಳಲು ಸಿದ್ಧರಿರಲಿಲ್ಲ. ಕಾಲೇಜಲ್ಲಿ ಹಾಡಹಗಲೇ ಚುಚ್ಚಿ ಚುಚ್ಚಿ ಕೊಲ್ತಾನೆ, ಇವರ ಮನೆಯಲ್ಲಿ ಅಂತಹ ಪ್ರಕರಣವಾಗಿದ್ರೆ ಅನುಭವಕ್ಕೆ ಬರುತ್ತಿತ್ತು, ಸತ್ತಿರೋದು ಕಂಡವರ ಮನೆ ಹೆಣ್ಣು ಮಕ್ಕಳು ಅಲ್ವಾ, ಕಂಡವರ ಮನೆ ಹೆಣ್ಣು ಮಕ್ಕಳು ತಾನೇ ಲವ್ ಜಿಹಾದ್ ಗೆ ಬಲಿಯಾಗಿರೋದು, ಹಾಡಹಗಲೇ ಕಾದು ಕೂತು ಹೊಂಚು ಹಾಕಿ ಕೊಲ್ತಾನೆ. ಆದರೆ, ಇವ್ರಿಗೆ ಆಕಸ್ಮಿಕ ಪ್ರಕರಣ. ಜನ ಕ್ಯಾಕರಿಸಿ ಉಗಿಯೋಕೆ ಶುರು ಮಾಡಿದ್ದರಿಂದ ಈಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ ಎಂದರು.ಕರೋಡ್ ಪತಿ:
ರೈತ ಆಲೂಗೆಡ್ಡೆ ಹಾಕಿ ಆಲೂಗಡ್ಡೆ ಮಾತ್ರ ಬೆಳೆದ, ನಿಮಗೆ ಆಲೂಗಡ್ಡೆ ಹಾಕಿ ಚಿನ್ನ ಬೆಳೆಯುವ ಕಲೆ ಗೊತ್ತಿದೆ. ನೀವು ಮಹಾನ್ ಖದೀಮರು, ನಿಮ್ಮ ಆಸ್ತಿಯನ್ನು ನೀವು ನಿಮ್ಮ ಪಕ್ಷದ ಬಡ ಕಾರ್ಯಕರ್ತರಿಗೆ ಹಂಚಿ ಎಂದರು.