ಕನ್ನಡಪ್ರಭ ವಾರ್ತೆ ಕಲಬುರಗಿ
ಭಾನುವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳಿಗೆ ‘ಪರಂಪರೆ ತಾಣಗಳ ಸಂರಕ್ಷಣೆ ತರಬೇತಿ’ ಕುರಿತು ಉಪನ್ಯಾಸ ನೀಡಿದರು.
ಪಾರಂಪರಿಕ ತಾಣಗಳ ಸಂರಕ್ಷಣೆಯು ವಾಸ್ತುಶಿಲ್ಪದಲ್ಲಿ ವಿಶೇಷತೆಯ ಉದಯೋನ್ಮುಖ ಕ್ಷೇತ್ರವಾಗಿದೆ ಹಾಗೂ ವಿವಿಧ ಪಾರಂಪರಿಕ ತಾಣಗಳನ್ನು ಗುರುತಿಸುವಲ್ಲಿ ಮತ್ತು ಸಂರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಒಳಗೊಂಡಿರುವ ಸೂಕ್ಷ್ಮವಾದ ವಿಚಾರಗಳನ್ನು ಹೇಳಿದರು.ಪುನಃಸ್ಥಾಪನೆ ಚಟುವಟಿಕೆಗಳನ್ನು ಕೈಗೊಳ್ಳುವ ವಾಸ್ತುಶಿಲ್ಪಿಗಳು ಈ ರಚನೆಗಳ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸೌಂದರ್ಯದ ಮಹತ್ವವನ್ನು ಮೊದಲು ಖಚಿತಪಡಿಸಿಕೊಳ್ಳಬೇಕು ಹಾಗೂ ನೈಸರ್ಗಿಕ ಪರಂಪರೆಯ ತಾಣಗಳನ್ನು ಅದರ ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕು ಎಂದರು.
ಪಾರಂಪರಿಕ ತಾಣಗಳ ಸಂರಕ್ಷಣಾ ಕ್ಷೇತ್ರದಲ್ಲಿ ಇತ್ತೀಚಿನ ಪ್ರಗತಿಯೆಂದರೆ ಇದರಲ್ಲಿ ಕೃತಕ ಬುದ್ಧಿಮತ್ತೆಯ ಆಗಮನವಾಗಿದೆ ಸಂರಕ್ಷಣಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ವಾಸ್ತುಶಿಲ್ಪಿಗಳು ಪಾರಂಪರಿಕ ತಾಣಗಳ ಮೂಲ ಸ್ವರೂಪಗಳನ್ನು ಮರುಸೃಷ್ಟಿಸಲು ಇದನ್ನೇ ಬಳಸುತ್ತಿದ್ದಾರೆಂದರು.ಆರ್ಕಿಟೆಕ್ಚರ್ ವಿಭಾಗದ ಡೀನ್ ಡಾ. ಶ್ರೀಲಕ್ಷ್ಮಿ ಕೌತಾಳ, ಹಿರಿಯ ಅಧ್ಯಾಪಕ ಡಾ. ಸುರೇಶ ಪಾಟೀಲ್, ಪ್ರೊ. ಫರೀದಾ ತಬಸ್ಸುಮ್, ಪ್ರೊ. ಗೌತಮ್ ಬಿರಾದಾರ್ ಇದ್ದರು.