ಜೀವಜಲ ಸಂರಕ್ಷಣೆ ಎಲ್ಲರ ಕರ್ತವ್ಯ: ಶಾಸಕ ದೇವೇಂದ್ರಪ್ಪ

KannadaprabhaNewsNetwork |  
Published : Nov 20, 2024, 12:33 AM IST
    19 ಜೆ.ಜಿ.ಎಲ್.1) ಜಗಳೂರು ತಾಲ್ಲೂಕಿನ ಭರಮಸಮುದ್ರ ಕೆರೆಗೆ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಹೆಚ್.ಪಿ.ರಾಜೇಶ್  ಸೇರಿದಂತೆ ಇತರರು ಭಾಗಿನ ಅರ್ಪಿಸಿದರು. | Kannada Prabha

ಸಾರಾಂಶ

ಮಳೆರಾಯನ ಕೃಪೆ ಜೊತೆಗೆ ಸಿರಿಗೆರೆ ಶ್ರೀಗಳ ಆಶಿರ್ವಾದದಿಂದ 57 ಕೆರೆಗಳ ನೀರು ತುಂಬಿಸುವ ಯೋಜನೆಗಳಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ಹಲವು ಕೆರೆಗಳು ತುಂಬಿ ಹರಿಯುತ್ತಿವೆ. ಜೀವ ಜಲದಂತಿರುವ ನೀರನ್ನು ಸಂರಕ್ಷಿಸುವ ಕೆಲಸ ಎಲ್ಲರೂ ಮಾಡಬೇಕಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಭರಮಸಮುದ್ರ ಕೆರೆಗೆ ಬಾಗಿನ । ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ₹60 ಲಕ್ಷ ಭರವಸೆ

- - - ಕನ್ನಡಪ್ರಭ ವಾರ್ತೆ ಜಗಳೂರು

ಮಳೆರಾಯನ ಕೃಪೆ ಜೊತೆಗೆ ಸಿರಿಗೆರೆ ಶ್ರೀಗಳ ಆಶಿರ್ವಾದದಿಂದ 57 ಕೆರೆಗಳ ನೀರು ತುಂಬಿಸುವ ಯೋಜನೆಗಳಿಂದಾಗಿ ಈ ಬಾರಿ ಕ್ಷೇತ್ರದಲ್ಲಿ ಹಲವು ಕೆರೆಗಳು ತುಂಬಿ ಹರಿಯುತ್ತಿವೆ. ಜೀವ ಜಲದಂತಿರುವ ನೀರನ್ನು ಸಂರಕ್ಷಿಸುವ ಕೆಲಸ ಎಲ್ಲರೂ ಮಾಡಬೇಕಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಭರಮಸಮುದ್ರ ಕೆರೆಗೆ ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತರಳುಬಾಳು ಶ್ರೀಗಳ ಆಶೀರ್ವಾದದಿಂದ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರ ಸ್ವಾಮಿ ಅವಧಿಯಲ್ಲಿ ಶಾಸಕರಾಗಿದ್ದ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ ಅವರು 57 ಕೆರೆ ನೀರು ತುಂಬಿಸುವ ಯೋಜನೆಗೆ ಶ್ರಮಿಸಿದ್ದರು. ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ₹200 ಕೋಟಿ ಅನುದಾನ ನಿಗದಿಯಾಗಿದೆ. ಗ್ರಾಮದೇವತೆ ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ₹60 ಲಕ್ಷ ಮುಜುರಾಯಿ ಇಲಾಖೆಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ನನ್ನ ಅವಧಿಯಲ್ಲಿ ಮೂರು ಶಾಶ್ವತ ಯೋಜನೆಗಳು ರೂಪಿಸಿದ್ದೆ. ಇಂದು ಅವು ಸಫಲತೆ ಕಂಡಿವೆ. ಜಲಮೂಲ ಹರಿದು ಮುಂದೆ ಬರದ ನಾಡು ಹೋಗಿ, ಬಂಗಾರದ ನಾಡು ಆಗಲಿದೆ. ಭರಮಸಮುದ್ರ ಕೆರೆಯಿಂದ ತಿಮ್ಮಲಾಪುರ ಗ್ರಾಮಕ್ಕೆ ಹೋಗಲು ಡಾಂಬಾರು ರಸ್ತೆ ನಿರ್ಮಾಣ ಮಾಡಲಾಗಿತ್ತು. ಇತಿಹಾಸದಲ್ಲಿ ರಸ್ತೆ ಕಾಣದ ಅನೇಕ ಕುಗ್ರಾಮಗಳಿಗೆ ರಸ್ತೆಯನ್ನು ನಿರ್ಮಿಸಿದ್ದೇನೆ ಎಂದರು.

ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ, ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ಕಿರಣ್, ಲಕ್ಷ್ಮೀ ಮಹಾಂತೇಶ್, ಬಸವರಾಜ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರುದ್ರಪ್ಪ, ಗ್ರಾಮದ ಮುಖಂಡರು ಅಶೋಕ್ ರೆಡ್ಡಿ, ಪ್ರತಾಪ್ ರೆಡ್ಡಿ, ಅಜ್ಜಪ್ಪ ನಾಡಿಗರ್, ಮಾಜಿ ಜಿ.ಪಂ. ಸದಸ್ಯೆ ನಾಗರತ್ನಮ್ಮ, ತಾಪಂ ಮಾಜಿ ಸದಸ್ಯ ಸೂರಲಿಂಗಪ್ಪ, ಶಾಮಣ್ಣ, ಸುರೇಶ್ ರೆಡ್ಡಿ, ಗುರುಸಿದ್ದಪ್ಪ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರಪ್ಪ, ರೈತ ಸಂಘದ ಕಾರ್ಯದರ್ಶಿ ಕುಮಾರ್ ಇತರರು ಇದ್ದರು.

- - - -19ಜೆಜಿಎಲ್1:

ಜಗಳೂರು ತಾಲೂಕಿನ ಭರಮಸಮುದ್ರ ಕೆರೆಗೆ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಸೇರಿದಂತೆ ಇತರರು ಬಾಗಿನ ಅರ್ಪಿಸಿದರು.

PREV

Recommended Stories

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು
ಚೈತಾಲಿ ಹತ್ಯೆ ಖಂಡಿಸಿ ಪ್ರತಿಭಟನೆ