ಆನಂದಪುರ: ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ವಿಸ್ತರಣೆಯ ಮೇಲೆ ಹಾಗೂ ನಾಶವಾಗುತ್ತಿರುವ ಆವಾಸಸ್ಥನಗಳನ್ನು ಪುನಶ್ಚೇತನಗೊಳಿಸಿ ಮುಂದುವರಿಯಬಲ್ಲ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ನಮ್ಮ ಗಮನವನ್ನು ಕೇಂದ್ರಿಕರಿಸುವುದು ಅವಶ್ಯಕವಾಗಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಎಲ್.ಎಸ್.ಶಶಿಧರ್ ಹೇಳಿದರು.
ಪರಿಸರ ವ್ಯವಸ್ಥೆ ಹಾಗೂ ಜೈವಿಕ ವೈವಿಧ್ಯತೆ ಇವುಗಳಿಂದ ಕೃಷಿ ಹಾಗೂ ಪಶು ಸಂಗೋಪನೆ ಇವೆರಡು ನೇರವಾಗಿ ಪ್ರಭಾವಿತವಾಗುತ್ತದೆ. ನಮ್ಮ ದೇಶ ತನ್ನ ಪ್ರಜೆಗಳೆಲ್ಲರೂ ಆಹಾರ ಮತ್ತು ಪೌಷ್ಟಿಕತೆಯನ್ನು ಒದಗಿಸುವಲ್ಲಿ ಆತ್ಮನಿರ್ಭರವಾಗಲು ಮತ್ತು ಮುಂದಿನ ದಶಕಗಳಲ್ಲಿ ಸಂಭವಿಸಬಹುದಾಗ ನೈಸರ್ಗಿಕ ಹಾಗೂ ಮಾನವ ನಿರ್ಮಿತ ದುರಂತಗಳ ಸಮಯದಲ್ಲಿಯೂ ಆಹಾರ ಸಂರಕ್ಷಣೆಯನ್ನು ನೀಡಲು ಸಫಲವಾಗಿದೆ ಎಂದು ಹೇಳಿದರು.ನಾವಿನ್ನೂ ಅಭಿವೃದ್ಧಿ ಹೊಂದುತ್ತಿರುವ ಹಂತದಲ್ಲಿದ್ದೇವೆ. ಭಾರತದ ಜನಸಂಖ್ಯೆಯ ದೊಡ್ಡ ಭಾಗ ಬಡತನದ ರೇಖೆಯ ಕೆಳಗೆ ಇದೆ. ಉತ್ತಮ ಮತ್ತು ಪೌಷ್ಟಿಕ ಆಹಾರದ ಲಭ್ಯತೆಯಲ್ಲಿ ಅಸಮಾನತೆ ಈಗಲೂ ಬಹಳ ಇದೆ. ನಮ್ಮ ಕೃಷಿ ಪದ್ಧತಿಯಲ್ಲಿ ಅತಿಯಾದ ನೀರು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ತೀವ್ರ ವ್ಯವಸಾಯ ಪದ್ಧತಿಗಳಿಂದಾಗಿ ಕೃಷಿ ಉತ್ಪಾದಕತೆಯ ಮೇಲೆ ಅತೀವ ಒತ್ತಡವುಂಟಾಗಿದೆ. ವ್ಯವಸಾಯ ಖರ್ಚು ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ ಹಾಗೂ ಅದರಿಂದ ಬರುವ ಆದಾಯ ಕುಂಠಿತವಾಗುತ್ತಿದೆ ಎಂದರು.ಈ ವಿಶ್ವವಿದ್ಯಾಲಯವು ತನ್ನ ಸಂಶೋಧನೆ ಹಾಗೂ ಶಿಕ್ಷಣದ ಚಟುವಟಿಕೆಗಳಲ್ಲಿ ಇಂತಹ ಸವಾಲಾಗುವ ಸಮಸ್ಯೆಗಳ ಬಗ್ಗೆ ಗಮನವನ್ನು ಕೇಂದ್ರಿಕರಿಸಿದೆಯೆಂದು ತಿಳಿದು ನನಗೆ ಸಂತೋಷವಾಗಿದೆ. ಮೊದಲನೆದಾಗಿ ಇದು ಕೃಷಿ, ತೋಟಗಾರಿಕೆ ಹಾಗೂ ಅರಣ್ಯಶಾಸ್ತ್ರಗಳನ್ನೊಳಗೊಂಡ ಒಂದು ಸಮಗ್ರ ವಿಶ್ವವಿದ್ಯಾಲಯವಾಗಿದೆ. ಸುಸ್ಥಿರ ಜೀವನಕ್ಕೆ ಈ ಮೂರು ವಿಜ್ಞಾನಗಳ ಕೊಡುಗೆ ಅವಶ್ಯಕವಾಗಿದೆ. ಕೃಷಿ, ಅರಣ್ಯ ಹಾಗೂ ಆಹಾರಧಾನ್ಯಗಳು, ಹಣ್ಣು ತರಕಾರಿಗಳು ಸೇರಿದಂತೆ ಬೆಳೆಗಳ ಆವರ್ತನೆ ಇವುಗಳಿಂದ ಭೂಮಿಯ ಕ್ಷಮತೆಯನ್ನು ಉತ್ತಮಗೊಳಿಸುವುದರ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಜಗದೀಶ್ ಸ್ವಾಗತ ಭಾಷಣ ಮಾಡಿ, ಸಂಕ್ಷಿಪ್ತ ವರದಿ ಸಲ್ಲಿಸಿದರು.ಕೃಷಿ ಸದೃಢವಾಗಿದ್ದರೆ ದೇಶ ಸದೃಢ: ರಾಜ್ಯಪಾಲಕನ್ನಡಪ್ರಭ ವಾರ್ತೆ ಆನಂದಪುರ
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ ದೇಶದ ಬೆನ್ನೆಲಯಬಾಗಿದ್ದು, ಈ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಜ್ಞಾನದಿಂದ ಎತ್ತರಕ್ಕೆ ಬೆಳೆಯಬೇಕು. ಹೆಚ್ಚುತ್ತಿರುವ ಜನಸಂಖ್ಯೆ, ನೈಸರ್ಗಿಕ ಸಂಪನ್ಮೂಲಗಳ ಕೊರತೆ ಹಿನ್ನೆಲೆಯಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಕೌಶಲ್ಯ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಹೊಸ ಹೊಸ ಸಂಶೋಧನೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕೃಷಿ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ, ಸ್ಮಾರ್ಟ್ ಅಗ್ರಿಕಲ್ಚರ್ ಕಡೆ ಗಮನ ಹರಿಸಬೇಕಿದೆ ಎಂದರು.
ಆನಂದಪುರ : ಘಟಿಕೋತ್ಸವದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ. ಅವರಿಗೆ ಒಟ್ಟು 31 ಚಿನ್ನದ ಪದಕಗಳನ್ನು ನೀಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ 793 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ 176 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿಗಳು ಪಿ.ಎಚ್.ಡಿ. ಪದವಿ ಪಡೆದುಕೊಂಡರು.
ಚಿನ್ನದ ಪದಕ ವಿಜೇತರು :
ಸ್ನಾತಕ ಪದವಿ ಚಿನ್ನದ ಪದಕ ವಿಜೇತರು: ಲಹರಿ, ಸಚಿನ್ , ಲೇಖನ ತಲಾ 2 ಮತ್ತು ಜೆ.ಕೆ.ಅಭಿಷೇಕ್ , ಎಸ್.ಡಿ.ಕಮಲಶ್ರೀ , ಎಸ್.ಚಂದನ, ನಂದಿತಾ ಸಿನ್ಹಾ, ಬಿ.ಯು.ಮಂಜುಶ್ರೀ , ಬಿ.ಎಂ.ಅಲೇಕ್ಯ , ಎಚ್.ಎಂ.ಅನಿಲ್, ಜ್ಯೋತಿ ಈ ತೊಂಡಿ, ಸಿಂಚನ, ಮಾಧರ್ಯ ಗೌಡ, ಸಲ್ಮಾ, ಬಿ.ಸ್ವಾತಿ ತಲಾ ಒಂದು ಪದಕ ಒಟ್ಟು 18 ಚಿನ್ನದ ಪದಕ ಪಡೆದುಕೊಂಡರು.
ಶಿವಮೊಗ್ಗ ರವೀಂದ್ರ ನಗರದ ಗಣಪತಿ ದೇವಸ್ಥಾನದ ಅಡುಗೆ ಭಟ್ಟ ಸುರೇಶ್-ಸುಧಾ ದಂಪತಿ ಪುತ್ರಿ ಎನ್.ಎಸ್.ಸಂಜೀತಾ ಅವರು 2022-23ನೇ ಸಾಲಿನ ನಾಲ್ಕು ಪದಕಕ್ಕೆ ಮುತ್ತಿಟ್ಟರು. ಕಾಶಿಪುರದ ಸಂಜೀತಾ ಅವರು ಬೆಂಗಳೂರಿನ ಜಿಕೆವಿಕೆಯ ಚಿಂತಾಮಣಿ ಕ್ಯಾಂಪಸ್‌ನಲ್ಲಿ ಕೃಷಿ ಕೀಟ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಮುಂದೆ ಪಿಎಚ್‌ಡಿ ಮಾಡುವ ಗುರಿ ಹೊಂದಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡುವ ಗುರಿ ಹೊಂದಿದ್ದಾರೆ. ಕೃಷಿಕರ ಮಗಳಿಗೆ ಮೂರು ಚಿನ್ನದ ಪದಕ: