ರಾಮನಗರ: ಕೆರೆಗಳಲ್ಲಿ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಯ ಜತೆಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಬಹುದಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು ಹೇಳಿದರು.
ಕೆರೆಗಳ ಸಂರಕ್ಷಣೆ ಮಾಡುವುದರಿಂದ ಅಂತರ್ಜಲ ವೃದ್ಧಿ ಜತೆಗೆ ವಿವಿಧ ಅನುಕೂಲಗಳು ದೊರೆಯುತ್ತವೆ. ಈ ನಿಟ್ಟಿನಲ್ಲಿ ಟಯೋಡ ಗೋಸಾಯಿ ಕಂಪೆನಿ ಪ್ರತಿ ವರ್ಷವೂ ಒಂದು ಕೆರೆಯಲ್ಲಿ ಹೂಳು ತೆಗೆಯುವುದು ಕೆರೆಯ ಏರಿ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಕೆರೆ ಸಂರಕ್ಷಣೆ ಮತ್ತು ನೀರು ಸಂಗ್ರಹಣೆಗೆ ಒತ್ತು ನೀಡುತ್ತಿದೆ. ಇದರಿಂದ ಜಾನುವಾರುಗಳಿಗೆ ಮತ್ತು ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಜತೆಗೆ ಕೊಳವೆಬಾವಿಗಳಲ್ಲಿ ಜಲ ಮರುಪೂರಣ ಹೆಚ್ಚಾಗಲಿದೆ ಎಂದರು.
ಅಂತರ್ಜಲ ಮಟ್ಟ ಕುಸಿಯುವುದನ್ನು ತಡೆಯಲು ಹಾಗೂ ರೈತರಿಗೆ ಅನುಕೂಲ ಕಲ್ಪಿಸಲು ಕೆರೆಯ ಹೂಳು ತೆಗೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು ಕೆರೆಯಲ್ಲಿ ನೀರು ತುಂಬಿ ಅಂತರ್ಜಲ ವೃದ್ಧಿಯಾಗಲಿದೆ. ಕೆರೆಗಳಲ್ಲಿ ತೆಗೆದ ಗೋಡುಮಣ್ಣನ್ನು ರೈತರಿಗೆ ನೀಡಲಾಗುತ್ತಿದ್ದು ಭೂಮಿಗಳನ್ನು ಫಲವತ್ತಾಗಿ ಮಾರ್ಪಸಲು ಅವಕಾಶವಿದೆ. ಕಂಪೆನಿ ಇಂತಹ ಒಳ್ಳೆಯ ಕಾರ್ಯಕ್ಕೆ ಹಣ ಸದ್ವಿನಿಯೋಗಪಡಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯಲ್ಲಿ ಟಯೋಡಾ ಗೋಸಾಯಿ ಸಂಸ್ಥೆ ವತಿಯಿಂದ ಈಗಾಗಲೇ ಗಾಣಕಲ್, ಮುತ್ತರಾಯನಪುರ ಹಾಗೂ ಕೆಂಪಯ್ಯನಪಾಳ್ಯ ಗ್ರಾಮಗಳಿಗೆ ಹೈಮಾಸ್ಕ್ ಲೈಟ್ ಸ್ಥಾಪಿಸಿದೆ. ಕಳೆದ ವರ್ಷ ರೈತರಿಗೆ ೫ ಸಾವಿರ ತೆಂಗಿನ ಸಸಿ ವಿತರಿಸಿ ಗ್ರಾಮಿಣಾಭಿವೃದ್ಧಿಗೆ ಸಹಕರಿಸಿದೆ ಕಂಪೆನಿಯ ಸೇವಾ ಕಾರ್ಯಕ್ಕೆ ಗ್ರಾಮಸ್ಥರು ಚಿರಋಣಿಯಾಗಿದ್ದಾರೆ ಎಂದು ಗಾಣಕಲ್ ನಟರಾಜ್ ಹೇಳಿದರು.
ಈ ವೇಳೆ ಟಯೋಡಾ ಗೋಸಾಯಿ ಕಂಪೆನಿ ಉಪವ್ಯವಸ್ಥಾಪಕ ಮಂಜುನಾಥ್, ಮಾನವ ಸಂಪನ್ಮೂಲ(ಹೆಚ್.ಆರ್) ಅಧಿಕಾರಿ ನಾಗಮಣಿ, ದಯಾನಂದ, ಮುಖಂಡರಾದ ಯತಿರಾಜು, ಮಹದೇವಯ್ಯ, ಬ್ಯಾಟಪ್ಪ ಗೋವಿಂದರಾಜು, ಸತೀಶ್.ವಿ, ನವೀನ್, ಮಹೇಶ್, ಅಂಜನ್ ಮುಂತಾದವರು ಇದ್ದರು.14ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಕೆಂಪದ್ಯಾಪನಹಳ್ಳಿಯಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಗಣ್ಯರು ಪೂಜೆ ಸಲ್ಲಿಸಿದರು.