ಹಲಗೂರು: ಸಮೀಪದ ಹಲಗನದೊಡ್ಡಿ ಗ್ರಾಮದ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಹುಲಿಗಳ ದಿನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕಾಡಿನ ಸಂರಕ್ಷಣೆ ಹಾಗೂ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
ನಮ್ಮ ಸುತ್ತಮುತ್ತಲಿರುವ ಕಾಡು ಮತ್ತು ಅದರಲ್ಲಿ ವಾಸವಿರುವ ಕಾಡು ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಮತ್ತು ಮಾನವನ ಜೀವನದ ನಡುವೆ ಒಂದು ಬಾಂಧವ್ಯವಿದೆ. ಪರಿಸರದ ಸಂರಕ್ಷಣೆಗಾಗಿ ನಿಮ್ಮ ಮನೆ ಸುತ್ತ ಮುತ್ತ ಗಿಡಮರಗಳನ್ನು ಬೆಳೆಸಬೇಕು ಎಂದು ಹೇಳಿದರು.
ಹೊಲ- ಗದ್ದೆಗಳಲ್ಲಿ ಗಿಡಗಳನ್ನು ನೆಟ್ಟು ಮರವನ್ನು ಬೆಳೆಸಿದರೆ ಉತ್ತಮ ಆಮ್ಲಜನಕ ದೊರಕುತ್ತದೆ. ಆದ್ದರಿಂದ ನಮ್ಮ ಆರೋಗ್ಯವು ಸಮೃದ್ಧಿಯಾಗಲು ಸಹಕಾರಿಯಾಗಲಿದೆ. ಇದರ ಜೊತೆಗೆ ಕಾಡುಪ್ರಾಣಿಗಳ ಸಂರಕ್ಷಣೆ ಬಹಳ ಮುಖ್ಯ ಎಂದರು.ಶಾಲಾ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್ ಅವರನ್ನು ಸಿದ್ದರಾಮ ಪೂಜಾರಿ ಮತ್ತು ಮನೋದಯ ಸಂಸ್ಥೆ ಮಹೇಶ್ ಹಾಗೂ ವಿ.ತೇಜಸ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.