- ರಾಜ್ಯ ಸರ್ಕಾರಕ್ಕೆ ಜಿಲ್ಲಾ ಕ್ರೀಡಾ ಕರಾಟೆ ಶಿಕ್ಷಕರ ಸಂಘದ ಬಾಷಾ ಸಾಬ್ ಒತ್ತಾಯ - - -
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕರಾಟೆ ತರಬೇತಿ ನೀಡುವ ನೋಂದಾಯಿತ ಕರಾಟೆ ತರಬೇತುದಾರರಿಗೆ ಶಿಕ್ಷಕರೆಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟನೆಗಾಗಿ ತಮ್ಮ ಸಂಸ್ಥೆ ಸ್ಥಾಪನೆಯಾಗಿದೆ ಎಂದರು.
ದಾವಣಗೆರೆಯ ನುರಿತ ಹಾಗೂ ನೋಂದಾಯಿತ ಕಾರ್ಯನಿರತ ಕರಾಟೆ ಶಿಕ್ಷಕರು ಸೇರಿದಂತೆ ಕರಾಟೆ ಶಿಕ್ಷಕರು, ಕರಾಟೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ, ಯುವಜನರ ಒಳಿತಿಗಾಗಿ ಕರಾಟೆ ಶಿಕ್ಷಕರನ್ನು ಒಗ್ಗೂಡಿಸಲು ಕರಾಟೆ ಶಿಕ್ಷಕರ ಸಂಘವನ್ನು ನೋಂದಾಯಿಸಿ, ಸಂಘಟನೆ ಆರಂಭಿಸಿದ್ದೇವೆ. ಸಂಘವು ಈಗಾಗಲೇ ರಾಜ್ಯಮಟ್ಟದಲ್ಲಿ ಕರಾಟೆ ತರಬೇತುದಾರರು, ವಿದ್ಯಾರ್ಥಿಗಳ ಒಳತಿಗಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ರಾಜ್ಯ ಕರಾಟೆ ಶಿಕ್ಷಕರ ಸಂಘದಿಂದ ಅನುಮೋದನೆ ಪಡೆದಿದೆ ಎಂದು ತಿಳಿಸಿದರು.ಸಂಘವನ್ನು ಜಿಲ್ಲೆಯ ಎಲ್ಲ ಶಿಕ್ಷಕರನ್ನು ಒಗ್ಗೂಡಿಸಿಕೊಂಡು, ಸಾರ್ವಜನಿಕರ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಬರುವ ಪಿಎಂ ಶ್ರೀ ಮತ್ತು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಸ್ವಯಂ ಕೌಶಲ್ಯ ಮತ್ತು ಅನುದಾನಿತ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯಂತಹ ಯೋಜನೆಗಳನ್ನು ಸಂಘದಿಂದ ಯಶಸ್ವಿಯಾಗಿ ನಡೆಸಿಕೊಡುವುದು ಮತ್ತು ಪ್ರತಿ ಸರ್ಕಾರಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ಕಾಯಂ ಶಿಕ್ಷಕರಾಗಿ ನೇಮಿಸಿ, ನಿರಂತರ ಸೇವೆಗೆ ಅವಕಾಶ ನಮ್ಮ ಒತ್ತಾಯವಾಗಿದೆ ಎಂದರು.
- - -
- - -
ದಾವಣಗೆರೆಯಲ್ಲಿ ಗುರುವಾರ ದಾವಣಗೆರೆ ಜಿಲ್ಲಾ ಕ್ರೀಡಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಾಷಾ ಸಾಬ್, ಪ್ರಧಾನ ಕಾರ್ಯದರ್ಶಿ ಸಂಜಯ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.