ಗಾಂಧಿ ಬಗ್ಗೆ ನಿರಂತರ ಅಪಪ್ರಚಾರ ಸಲ್ಲ

KannadaprabhaNewsNetwork |  
Published : Feb 04, 2026, 01:15 AM IST
-0 | Kannada Prabha

ಸಾರಾಂಶ

ಗಾಂಧೀಜಿ ವಿಚಾರಧಾರೆಗಳನ್ನು ಕೊಲ್ಲುವ ಪ್ರಯತ್ನ ನಡೆಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಬೆಂಗಳೂರು ಗಾಂಧಿ ಭವನದ ಅಧ್ಯಕ್ಷ ನಾಡೋಜ ವೋಡೆ.ಪಿ.ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು ಇಡೀ ವಿಶ್ವ ಮಹಾತ್ಮಗಾಂಧಿಯವರನ್ನು ಸತ್ಯ ಮತ್ತು ಅಹಿಂಸೆಯ ಪ್ರತಿರೂಪವಾಗಿ ನೋಡುತ್ತಿದೆ. ಆದರೆ ನಮ್ಮದೇಶದಲ್ಲಿ ಕೆಲ ಸೋಷಿಯಲ್ ಮೀಡಿಯಾಗಳು ಗಾಂಧಿಯ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಾ, ಗಾಂಧೀಜಿ ವಿಚಾರಧಾರೆಗಳನ್ನು ಕೊಲ್ಲುವ ಪ್ರಯತ್ನ ನಡೆಸುತ್ತಿರುವುದು ವಿಷಾದ. ದ ಸಂಗತಿಯಾಗಿದೆ ಎಂದು ಬೆಂಗಳೂರು ಗಾಂಧಿ ಭವನದ ಅಧ್ಯಕ್ಷ ನಾಡೋಜ ವೋಡೆ.ಪಿ.ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ. ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನೀಕೇತನದ ಎಚ್.ಎಂ.ಗಂಗಾಧರಯ್ಯ ಆರ್ಟ್ಸ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ, ಮಹಾತ್ಮಗಾಂಧಿ ಆತ್ಮಕಥನ ನನ್ನ ಸತ್ಯಾನ್ವೇಷಣೆ ಮಹಾ ಕೃತಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಾಂಧಿವಾದಿ ಎಂ.ಬಸವಯ್ಯ ವಿರಚಿತ ಸತ್ಯಾನ್ವೇಷಣೆ ಹಾಗೂ ಫಾತಕ ಲೋಕದಿಂದ ಗಾಂಧಿಯಾನದೆಡೆಗೆ ಕೃತಿಗಳನ್ನು ಬಿಡುಡಗೆ ಮಾಡಿ ಮಾತನಾಡಿದರು. ಯುವಜನರು ಸಹ ಏಕಾಗ್ರತೆಯ ಕೊರತೆಯಿಂದ ಸತ್ಯ, ಸುಳ್ಳುಗಳ ವಿಮರ್ಶೆ ಮಾಡದೆ ನಡೆದು ಕೊಳ್ಳುತ್ತಿದ್ದಾರೆ. ಇಂತಹ ಯುವಜನರಿಗೆ ಎಂ.ಬಸವಯ್ಯಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಕೃತಿ ಗಾಂಧಿ ಬದುಕಿನ ವಿವಿಧ ಮಜಲುಗಳನ್ನು ತೋರಿಸಲಿದೆ ಎಂದರು. ಗಾಂಧೀಜಿಯ ಆತ್ಮಚರಿತ್ರೆ ಮೈ ಎಕ್ಸ್ ಪೆರಿಮೆಂಟ್ ಆಫ್‌ಟ್ರೂಥ್ ನಂತಹ ಮತ್ತೊಂದು ಕೃತಿ ಇದುವರೆಗೂ ಬಂದಿಲ್ಲ. ಗಾಂಧಿಯ ವಿಚಾರಧಾರೆಗಳಿಗೆ ಎಂದಿಗೂ ಸಾವಿಲ್ಲ. ಇಡೀ ಪ್ರಪಂಚವೇ ಗಾಂಧಿ ಮಾರ್ಗದಲ್ಲಿ ನಡೆಯಲು ಉತ್ಸುಕವಾಗಿದೆ ಎಂದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಗಾಂಧೀಜಿಯನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಂ.ಬಸವಯ್ಯಅವರ ಬರೆದಿರುವ ಸತ್ಯಾನ್ವೇಷಣೆ ಹಾಗೂ ಡಾ.ಎಚ್.ಎಸ್.ಸುರೇಶ್‌ ಅವರು ಬರೆದಿರುವ ಘಾತಕ ಲೋಕದಿಂದ ಗಾಂಧಿಯಾನದೆಡೆಗೆ ಎರಡು ಪುಸ್ತಕಗಳನ್ನು ಜಿಲ್ಲೆಯ ಪ್ರತಿ ಶಾಲಾ, ಕಾಲೇಜುಗಳ ಗ್ರಂಥಾಲಯಗಳಲ್ಲಿ ದೊರೆಯುವಂತೆ ಮಾಡಲಿದ್ದೇವೆ. ಅಲ್ಲದೆ ಜಿಲ್ಲಾ ಕಾರಾಗೃಹದ ಖೈದಿಗಳಿಗೂ ನೀಡಲಾಗುವುದು. ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಯುವಜನರು ಪಾಲ್ಗೊಳ್ಳುವಂತೆ ಮಾಡಲಾಗುವುದು. ಯುವಜನರನ್ನು ಗಾಂಧೀಜಿ ಸಂದೇಶದ ರಾಯಭಾರಿಗಳಾಗಿ ಕೆಲಸ ಮಾಡಬೇಕಾಗಿದೆ ಎಂದರು. ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ಗಾಂಧಿಯನ್ನು ಮುಂದಿನ ಪೀಳಿಗೆಗೆ ಪರಿಚಿಯಿಸುವ ನಿಟ್ಟಿನಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಎಂ.ಬಸವಯ್ಯನವರ ಪಾತ್ರ ದೊಡ್ಡದು, ಇಳಿ ವಯಸ್ಸಿನಲ್ಲಿಯೂ ಇಂತಹ ಮೇರುಕೃತಿಯನ್ನು ರಚಿಸಿದ್ದಾರೆ. ಗಾಂಧಿ ಸ್ಮಾರಕ ನಿಧಿಯಿಂದ 200 ಪುಸ್ತಕಗಳನ್ನು ಕೊಂಡು, ಅದನ್ನು ಫೆ.11 ರಿಂದ ಮಂಡ್ಯದಲ್ಲಿ ನಡೆಯುವ 78ನೇ ಸವೋರ್ದಯ ಮೇಳದಲ್ಲಿ ಹಂಚಲಾಗುವುದು. ಸಮಾಜಮುಖಿಯಾಗಿ ಚಿಂತಿಸದ ಸದ್‌ ಗೃಹಸ್ಥನಾಗಿರಲು ಸಾಧ್ಯವಿಲ್ಲ ಎಂಬ ಗಾಂಧಿಯ ಮಾತುಗಳು ನಮಗೆಲ್ಲರಿಗೂ ಅನ್ವಯಿಸುತ್ತದೆ ಎಂದರು. ಗಾಂಧಿ ಭವನದ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಮೊಬೈಲ್‌ನಲ್ಲಿ ಮುಳುಗಿರುವ ನಮ್ಮ ಯುವಜನರಿಗೆ ಗಾಂಧಿ ಜೀವನಚರಿತ್ರೆ ಓದಲು ಸಮಯ ಇಲ್ಲದಂತಾಗಿದೆ. ಎಐ ನಂತಹ ತಂತ್ರಜ್ಞಾನದಿಂದ ಕೃಷಿ ಕೆಲಸಕ್ಕೂ ರೋಬೋಟಿಕ್‌ಗಳು ಬಂದಿರುವ ಕಾಲದಲ್ಲಿ, ವಿದ್ಯಾವಂತ ಯುವಜನರಿಗೆ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತು, ಗಾಂಧಿ ನೆನಪಾಗುತ್ತಾರೆ ಎಂದು ಭವಿಷ್ಯದಲ್ಲಿ ಉಂಟಾಗಬಹುದಾದ ನಿರುದ್ಯೋಗ ಸಮಸ್ಯೆಯನ್ನು ಗಂಭೀರತೆ ಕುರಿತು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಸವಯ್ಯ ವಹಿಸಿದ್ದರು. ವೇದಿಕೆಯಲ್ಲಿ ಪರಿಸರವಾದಿ ಸಿ.ಯತಿರಾಜು, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಭಾಗ್ಯಮ್ಮ ಬಸವಯ್ಯ, ಉಪನ್ಯಾಸಕರಾದ ಗೋವಿಂದಯ್ಯ, ಸುಮಂಗಲ ಜೇಮ್ಸ್, ಪ್ರೊ.ಸಿದ್ದಿಬಾಬು, ಚಿದಾನಂದಸ್ವಾಮಿ.ಜಿ,ಬಿಂದುಶ್ರೀ, ಸುರೇಶ್ ಮತ್ತಿತರರು ಉಪಸ್ಥಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

33 ಅಂಕ ನೀಡಿಕೆ ಬಗ್ಗೆ ಬರಗೂರು ಅಸಮಾಧಾನ
ರೇಷ್ಮೆನಗರಿ ರಾಮನಗರ ಕ್ಲೀನ್ ಸಿಟಿ ಮಾಡುವ ಸಂಕಲ್ಪ