ಸಂವಿಧಾನ ರಾಷ್ಟ್ರದ ಕಾನೂನಿಗೆ ಅಡಿಪಾಯ: ವನಿತಾ ಮಧು

KannadaprabhaNewsNetwork |  
Published : Sep 16, 2024, 01:53 AM IST
15 ಬೀರೂರು 1ಅಂತರಾಷ್ಟಿçಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಬೀರೂರಿನ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗಳು ಗೌರವ ಸಲ್ಲಿಸಿದರು.ಪುರಸಭೆ ಅಧ್ಯಕ್ಷೆ ವನಿತಮಧು, ಎಂ.ಪಿ.ಸುದರ್ಶನ್, ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರು, ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನ ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ. ಅಂತಹ ಸಂವಿಧಾನವನ್ನು ಗೌರವಿಸ ಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ಪುರಸಭೆ ಅಧ್ಯಕ್ಷೆ ಟಿ.ಎನ್.ವನಿತಾ ಮಧು ಹೇಳಿದರು.

ಕನ್ನಡಪ್ರಭ ವಾರ್ತೆ, ಬೀರೂರು

ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನ ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ. ಅಂತಹ ಸಂವಿಧಾನವನ್ನು ಗೌರವಿಸ ಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ಪುರಸಭೆ ಅಧ್ಯಕ್ಷೆ ಟಿ.ಎನ್.ವನಿತಾ ಮಧು ಹೇಳಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣದ ಕೆಎಸ್ ಆರ್ ಟಿಸಿ ಮುಂಭಾಗದಅಂಬೇಡ್ಕರ್ ಪುತ್ಥಳಿಗೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಯೊಂದಿಗೆ ಗೌರವ ಸಲ್ಲಿಸಿ ಮಾತನಾಡಿದರು. ದೇಶದ ಏಕತೆ, ಸಮಗ್ರತೆ, ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ರಾಷ್ಟ್ರಕ್ಕೆ ಸಂವಿಧಾನ ಅರ್ಪಣೆಗೊಂಡಿರುತ್ತದೆ. ದೇಶದ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆ ಸ್ವಾತಂತ್ರ‍್ಯ, ಸ್ಥಾನ-ಮಾನ ಸಮಾನತೆಯ ಅವಕಾಶ ಲಭಿಸಿದೆ ಎಂದರು.ಸಂವಿಧಾನ ರಾಷ್ಟ್ರದ ಕಾನೂನಿಗೆ ಅಡಿಪಾಯ. ಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮಾನವ ಸರಪಳಿಯಂತಹ ವಿನೂತನ ಕಾರ್ಯಕ್ರಮದ ಮೂಲಕ ಒಗ್ಗಟ್ಟಿನ ಸಂದೇಶ ಸಾರಲು ಸಂವಿಧಾನಕ್ಕೆ ಗೌರವ ಸಲ್ಲಿಸಲು ಮುಖ್ಯ ಆಶಯಕ್ಕೆ ನಾವೆಲ್ಲರೂ ಸಾಕ್ಷಿಕರಿಸಿದ್ದೇವೆ ಎಂದರು.ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್ ಮಾತನಾಡಿ, ಸಂವಿಧಾನದ ಮೂಲ ಆಶಯ ಮತ್ತು ಕಾನೂನು ಅಂಶಗಳನ್ನು ಶೇ.75 ಭಾಗದಷ್ಟು ಮಂದಿ ತಿಳಿದುಕೊಳ್ಳದೇ ಇರುವುದರಿಂದ ಸರ್ಕಾರ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ. ಆ ಮೂಲಕ ವಿದ್ಯಾರ್ಥಿ-ಯುವ ಸಮುದಾಯಗಳಿಗೆ ಸಂವಿಧಾನ ಓದುವ, ಚರ್ಚಿಸುವ, ವಿಚಾರ ಸಂಕಿರಣ ಆಯೋಜಿಸಿ ಪುರಸಭೆ ಯುವಕರನ್ನು ಉತ್ತೇಜಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ ಎಂದರು.ಪುರಸಭೆ ಸದಸ್ಯ ಎಂ.ಪಿ.ಸುದರ್ಶನ್ ಮಾತನಾಡಿ, ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ, ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಜತೆಗೆ ಅವರ ಸಾಧನೆ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆ ಎಂದರು.ದಿನಾಚರಣೆಯ ಬೀರೂರು ಭಾಗದ ನೋಡಲ್ ಅಧಿಕಾರಿಯಾದ ತರೀಕೆರೆ ಅಲ್ಪಸಂಖ್ಯಾತರ ತಾಲೂಕು ವಿಸ್ತರಣಾಧಿಕಾರಿ ಬಿ.ಕೆ. ಬೇಬಿ ಮಾತನಾಡಿ, ಸರ್ಕಾರ ಇಂತಹ ವಿಶಿಷ್ಟ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿ ಪ್ರಜೆಗೆ ಸಂವಿಧಾನದಡಿ ನೀಡಿರುವ ಹಕ್ಕುಗಳನ್ನು ಪಡೆಯಲು ತೋರುವಷ್ಟೇ ಆಸಕ್ತಿಯನ್ನು ಕರ್ತವ್ಯಗಳ ನಿರ್ವಹಣೆಗೂ ನೀಡಬೇಕು ಎಂದರು.ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಭಾನುವಾರ ಏಕಕಾಲದಲ್ಲಿ ಸಂಭ್ರಮದಿಂದ ಆಚರಿಸಿದ್ದು,. ಈ ಬಾರಿ ವಿಶೇಷವಾಗಿ ಮಾನವ ಸರಪಳಿಯೊಂದಿಗೆ ವಿವಿಧ ಸಂಘ ಸಂಸ್ಥೆಗಳು ಸಾಥ್ ನೀಡುವ ಮೂಲಕ ಯಶಸ್ವಿ ಗೊಳಿಸಿದರು. ಪಟ್ಟಣದ ಬಿ.ಎಚ್. ರಸ್ತೆಯ ಕೆ.ಇಬಿ ಮುಂಭಾಗದಿಂದ ತರಳಬಾಳು ಕಲ್ಯಾಣಮಂದಿರದವರೆಗೆ ಶಾಲಾ ಮಕ್ಕಳು , ಸ್ತ್ರೀಶಕ್ತಿ ಸಂಘದ ಮಹಿಳೆಯರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಲೋಕೇಕೆಶಪ್ಪ, ಬಿ.ಆರ್.ಮೋಹನ್ ಕುಮಾರ್, ಬಿ.ಕೆ.ಶಶಿಧರ್, ಜ್ಯೋತಿವೆಂಕಟೇಶ್, ಸಹನವೆಂಕಟೇಶ್, ಲಕ್ಷ್ಮಣ್, ಮಾನಿಕ್ ಭಾಷ, ಜಿಮ್ ರಾಜು, ಶಾರದ ರುದ್ರಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ. ಲಕ್ಷ್ಮಣ್, ನೂರುದ್ದೀನ್ ಸೇರಿದಂತೆ ಪುರಸಭಾ ಸದಸ್ಯರು, ಸಿಬ್ಬಂದಿ ಇದ್ದರು.15 ಬೀರೂರು 1ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀರೂರಿನ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಗೌರವ ಸಲ್ಲಿಸಿದರು. ಪುರಸಭೆ ಅಧ್ಯಕ್ಷೆ ವನಿತಾಮಧು, ಎಂ.ಪಿ.ಸುದರ್ಶನ್, ಮತ್ತಿತರಿದ್ದರು.15 ಬೀರೂರು 2ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಪುತ್ಥಳಿಗೆ ಪುರಸಭೆಯಿಂದ ವಿಶಿಷ್ಟ ಅಲಂಕಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ : ಜಿ.ಟಿ.ದೇವೇಗೌಡ
ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ