ಅಜ್ಜಂಪುರ: ಸಂವಿಧಾನದ ಸಾಕ್ಷರತೆ ಬೆಳೆಸಬೇಕು. ಆಗ ಮಾತ್ರ ಸಂವಿಧಾನದ ಮೂಲ ಉದ್ದೇಶ ಸಫಲವಾಗುತ್ತದೆ ಎಂದು ಡಾಕ್ಟರ್ ಎಂಎಲ್ ಆನಂದ್ ಹೇಳಿದರು.
ತಾಲೂಕು ಪಂಚಾಯಿತಿ ವಿಜಯಕುಮಾರ್ ಮಾತನಾಡಿ, ಡಾಕ್ಟರ್ ಬಿಆರ್ ಅಂಬೇಡ್ಕರ್ ರವರು ಸಂವಿಧಾನದ ಪಿತಾಮಹ ಎಂದು ಹೇಳಿದರು ಇದರಿಂದ ಶಿಕ್ಷಣ ರಾಜಕೀಯ ಆರ್ಥಿಕ ಮತ್ತು ಮತದಾನದ ಹಕ್ಕು ಸಮಾನತೆಯಿಂದ ಇರುವುದನ್ನು ತಿಳಿಸಿರುತ್ತಾರೆ ಇದನ್ನು ಎಲ್ಲರೂ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಅಧ್ಯಾಯನ ಮಾಡಿ ನ್ಯಾಯ ನೀತಿ ಎತ್ತಿಹಿಡಿದು ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದರು.
ತಹಸೀಲ್ದಾರ್ ವಿನಾಯಕ ಸಾಗರ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಸರ್ವರನ್ನು ಸೇರಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂವಿಧಾನದ ದಿನಾಚರಣೆ ಅಂಗವಾಗಿ ನಡೆಸಿದ ಚಿತ್ರಕಲೆ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿದರು.ಪ್ರಧಾನ ಉಪನ್ಯಾಸಕರು ಉಪನ್ಯಾಸ ಕುರಿತು ಮಕ್ಕಳಲ್ಲಿ ಶಿಸ್ತು ಪ್ರಜ್ಞೆಯನ್ನು ಪರೀಕ್ಷಿಸಲು ಕೇಳಿದ ಐದು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ತಕ್ಷಣವೇ ಉತ್ತರಿಸಿ ಕಾರ್ಯಕ್ರಮದಲ್ಲಿ ಮೆರುಗು ತಂದರು. ಆ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಪುಸ್ತಕಗಳನ್ನು ವಿತರಿಸಿದರು.
ಪಟ್ಟಣ ಪಂಚಾಯಿತಿ ಸಿಒಟಿಜಿ ರಮೇಶ್, ತಾಲೂಕು ಸರ್ಕಾರಿ ನೌಕರರ ಅಧ್ಯಕ್ಷ ಪುಟ್ಟಸ್ವಾಮಿ, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಸದಸ್ಯ ತೀರ್ಥ ಪ್ರಸಾದ್, ಸಮಾಜ ಕಲ್ಯಾಣ ಅಧಿಕಾರಿ ಲಿಂಗರಾಜ್, ಕಾಂತೇಶ್ ಇದ್ದರು.ಶಿಕ್ಷಕರು ನಿರೂಪಣೆ ಮಾಡಿದರು ರಂಗ ಪಯಣದ ಭಕ್ತನಕ ನೆರೆ ಸತೀಶ್ ಮಧುಮಾಲತಿ ಹಾಗೂ ಸಂಗಡಿಗರು ನಾಡಗೀತೆ, ರೈತ ಗೀತೆಯನ್ನು ಹಾಡಿದರು.