ರಾಮನಗರ: ನಗರ ಸವಾಲು ನಿಧಿ (ಅರ್ಬನ್ ಚಾಲೆಂಜ್ ಫಂಡ್ ) ಯೋಜನೆ ಅಡಿಯಲ್ಲಿ ಬಿಡದಿ ಪಟ್ಟಣದ ಹಳೇ ಪುರಸಭೆ ಕಚೇರಿ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಸಿಲ್ಕ್ ಫಾರಂ ಹೌಸ್ ಆವರಣದಲ್ಲಿ ಶಾಪಿಂಗ್ ಮಾಲ್ ನಿರ್ಮಿಸಲು ಬಿಡದಿ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
12 ಎಕರೆ ಜಾಗದಲ್ಲಿ ಕ್ರೀಡಾಂಗಣ:
ಪಟ್ಟಣದ ಸಿಲ್ಕ್ ಫಾರಂ ಸಮೀಪವಿರುವ ರೇಷ್ಮೆ ಇಲಾಖೆಗೆ ಸೇರಿದ 12 ಎಕರೆ ಜಾಗವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸುಪರ್ದಿಗೆ ಹಸ್ತಾಂತರಿಸಲಾಗುತ್ತಿದ್ದು ಈಗಾಗಲೇ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ಸದರಿ ಜಾಗದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ತನ್ನ ಸಿಎಸ್ಆರ್ ನಿಧಿಯಡಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಮುಂದೆ ಬಂದಿದೆ ಎಂಬ ವಿಷಯವನ್ನು ಶಾಸಕರು ಸಭೆಯ ಗಮನಕ್ಕೆ ತಂದರು.ಈ ವೇಳೆ ವಿಪಕ್ಷ ನಾಯಕ ಸಿ.ಉಮೇಶ್ ಅವರು ನೂತನ ಕ್ರೀಡಾಂಗಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿರವರ ಹೆಸರಿಡುವಂತೆ ಮನವಿ ಮಾಡಿದಾಗ ಶಾಸಕರು ಅದಕ್ಕೆ ಸಮ್ಮತಿಸಿದರು. ಇದನ್ನು ಎಲ್ಲಾ ಸದಸ್ಯರು ಮೇಜು ಕುಟ್ಟುವ ಮೂಲಕ ಸ್ವಾಗತಿಸಿ ಶಾಸಕರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.
ಕಚೇರಿಯಲ್ಲಿ ಮದ್ಯಾಹ್ನದ ನಂತರ ಯಾವ ಅಧಿಕಾರಿಗಳೂ ಇರುವುದಿಲ್ಲ. ಮೂಮೆಂಟ್ ರಿಜಿಸ್ಟರ್ ಯಾರೂ ನಿರ್ವಹಣೆ ಮಾಡುತ್ತಿಲ್ಲ. ಎಂಜಿನಿಯರ್ ಶ್ಯಾಮ್ ರವರು ಸದಸ್ಯರ ಕೆರೆ ಸ್ವೀಕರಿಸುವುದಿಲ್ಲ. ಅವರು ಎಲ್ಲಿದ್ದಾರೆಂದು ಮುಖ್ಯಾಧಿಕಾರಿಗಳಿಗೂ ತಿಳಿದಿರುವುದಿಲ್ಲ. ಕೆಲವರು ಮೊಂಡು ಬಿದ್ದಿದ್ದಾರೆ ವರ್ಗಾವಣೆ ಮಾಡಿಸಿ, ಇಲ್ಲವಾದಲ್ಲಿ ಪುರಸಭೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಕಾಂಗ್ರೆಸ್ ಸದಸ್ಯರಾದ ನವೀನ್ ಮತ್ತು ಎನ್.ಕುಮಾರ್ ಗಮನ ಸೆಳೆದರು.
ವಿದ್ಯುತ್ ದೀಪಗಳ ನಿರ್ವಹಣೆಗಾಗಿ ವಾಹನ ಅಗತ್ಯವಿದೆ ಎಂದು ಸದಸ್ಯ ನವೀನ್ ಬೇಡಿಕೆ ಇಟ್ಟಾಗ, ತೆರಿಗೆ ಹಣವನ್ನು ಸದ್ಬಳಕೆ ಮಾಡಿ ಸರಿಯಾಗಿ ನಿರ್ವಹಿಸಿ ಉಳಿಯುವ ಹಣದಲ್ಲಿ ವಾಹನ ಖರೀದಿಸಿ ಎಂದು ಶಾಸಕರು ಸಲಹೆ ನೀಡಿದರು.
ಇದಕ್ಕೆ ಸದಸ್ಯ ಎನ್.ಕುಮಾರ್ ದ್ವನಿಗೂಡಿಸಿ ಶ್ಯಾಮ್ ಅವರಿಗೆ ಸದಸ್ಯರ ಬಗ್ಗೆ ಗೌರವವೇ ಇಲ್ಲ. ವಾರ್ಡಿನಲ್ಲಿ ಯಾವುದೇ ಕೆಲಸ ಮಾಡುವಾಗ ಸದಸ್ಯರನ್ನು ಕೇಳುವುದೇ ಇಲ್ಲ ಎಂದರು. ಈ ವೇಳೆ ಎಂಜಿನಿಯರ್ ಶ್ಯಾಮ್ , ಸಭೆಗೆ ವಾಟರ್ ಮೆನ್ ನನ್ನು ಕರೆದು ಸಮಾಜಾಯಿಷಿ ನೀಡಲು ಮುಂದಾದಾಗ ಸದಸ್ಯ ಬಿ.ಜಿ.ಲೋಹಿತ್ ಕುಮಾರ್ ರವರು ವಾಟರ್ ಬಾಯ್ ಕರೆದು ಉತ್ತರಿಸುತ್ತಿದ್ದಾರೆ. ಶ್ಯಾಮ್ ರವರು ಎಂಜಿನಿಯರ್ ಕೆಲಸ ಬಿಟ್ಟು ಬೇರೆಲ್ಲಾ ಕೆಲಸ ಮಾಡುತ್ತಿದ್ದಾರೆ. ರಿಪೇರಿ ಮಾಡಿರುವ ಬಿಲ್ ಮತ್ತು ದಾಖಲೆಗಳನ್ನು ತೋರಿಸಿ ಎಂದು ಒತ್ತಾಯಿಸಿದರು.
ಬಾಕ್ಸ್ ...............
ರಾಮನಗರ: ವಿರೋಧ ಪಕ್ಷದವರಿಗಿಂತ ಆಡಳಿತ ಪಕ್ಷದ ಸದಸ್ಯರ ಸಮಸ್ಯೆಗಳೇ ಹೆಚ್ಚಾಗಿವೆ. ನೀವು ಅಧಿಕಾರದಿಂದ ಕೆಳಗಿಳಿದು ನಮಗೆ ಅವಕಾಶ ಕೊಡಿ ಆಡಳಿತ ಮಾಡಿ ತೋರಿಸುತ್ತೇವೆ ಎಂದು ವಿಪಕ್ಷ ನಾಯಕ ಸಿ.ಉಮೇಶ್ ಆಡಳಿತ ಪಕ್ಷದ ಸದಸ್ಯರ ಕಾಲೆಳೆದ ಪ್ರಸಂಗ ಸಾಮಾನ್ಯಸಭೆಯಲ್ಲಿ ನಡೆಯಿತು.
ಅಧಿಕಾರಿಗಳಿಗೆ ಶಾಸಕರ ಭಯವೇ ಇಲ್ಲ. ಇನ್ನು ಸದಸ್ಯರಿಗೆ ಬೆಲೆ ಇದೆಯೇ ಎಂದು ಸದಸ್ಯ ಎಚ್.ನಾಗರಾಜು ಅಸಮಾಧಾನ ವ್ಯಕ್ತಪಡಿಸಿದರು. ಆಗಲೂ ಸಿ.ಉಮೇಶ್, ನಿಮಗೆ ಆಡಳಿತ ನಡೆಸಿ ಅನುಭವ ಇಲ್ಲ. ನೀವು ಅಧಿಕಾರದಿಂದ ಕೆಳಗಿಳಿದು ನಮಗೆ ಅವಕಾಶ ಕೊಡಿ ಆಡಳಿತ ಮಾಡಿ ತೋರಿಸುತ್ತೇವೆ ಎಂದು ಕಾಲೆಳೆದಾಗ ಸದಸ್ಯರೆಲ್ಲರು ನಗೆಗಡಲಲ್ಲಿ ತೇಲಿದರು.
25ಕೆಆರ್ ಎಂಎನ್ 4.ಜೆಪಿಜಿಬಿಡದಿ ಪುರಸಭೆ ಸಾಮಾನ್ಯಸಭೆಯಲ್ಲಿ ಶಾಸಕ ಬಾಲಕೃಷ್ಣ ಅವರನ್ನು ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಉಪಾಧ್ಯಕ್ಷೆ ಆಯಿಷಾ, ವಿಪಕ್ಷ ನಾಯಕ ಸಿ.ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ್ ಹಾಗೂ ಸದಸ್ಯರು ಅಭಿನಂದಿಸಿದರು.