)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಡಳಿಯಿಂದ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ ವಿದ್ಯಾರ್ಥಿ ವೇತನ, ಹೆರಿಗೆ ಭತ್ಯೆ, ಮರಣ ಪರಿಹಾರ ಸೇರಿದಂತೆ ಕಟ್ಟಡ ಕಾರ್ಮಿಕರಿಗಾಗಿ ನೀಡಲಾಗುವ ಸೌಲಭ್ಯಗಳಿಗಾಗಿ ನಿಧಿ ಸಂಗ್ರಹಿಸಲಾಗಿದೆ. ಆದರೆ, ಈ ಹಣವನ್ನು ಸಸಿ ನೆಡುವ ಕಾರ್ಯಕ್ಕೆ ಬಳಸುತ್ತಿರುವುದು ಸರಿಯಾದ ಕ್ರಮವಲ್ಲ. ಬಿಡಿಎದಲ್ಲೇ ನೂರಾರು ಕೋಟಿ ರು. ಹಣವಿದೆ ಅದನ್ನೇ ಬಳಸಿಕೊಳ್ಳಬಹುದಿತ್ತು ಎಂದು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಮಿಕರಿಗೆ ತಲಾ 750 ರು. ಗೌರವಧನವನ್ನು ನೀಡಲಾಗುವುದೆಂದು ಕಾರ್ಮಿಕ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಇದರಲ್ಲಿ ಬೋಗಸ್ ಕಾರ್ಮಿಕರ ಪಟ್ಟಿಯನ್ನು ಸೃಷ್ಟಿಸಿ ನೈಜ ಕಾರ್ಮಿಕರ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಳ್ಳುವ ಬಗ್ಗೆ ಕಾರ್ಮಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಹಣವನ್ನು ದುರುಪಯೋಗ ಮಾಡಿಕೊಳ್ಳದೇ ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಮಹಾಂತೇಶ್ ಕೋರಿದ್ದಾರೆ.ಕಾರ್ಮಿಕರಿಗೆ ಪಾವತಿ: ಈ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತ ಪಿ. ಮಣಿವಣ್ಣನ್, ಸಸಿ ನೆಡುವ ಕಾರ್ಯಕ್ರಮದಲ್ಲಿ ಕಾರ್ಮಿಕರು ಭಾಗಿಯಾಗುತ್ತಾರೆ. ಈ ಕಾರ್ಯಕ್ಕಾಗಿ ಅವರಿಗೆ ಅರ್ಧ ದಿನದ ಸಂಭಾವನೆ ನೀಡಲಾಗುತ್ತದೆ. ಅದರಲ್ಲಿ ಅರ್ಧ ಹಣ ಕಾರ್ಮಿಕರ ಸಂಭಾವನೆಗೆ ವಿನಿಯೋಗಿಸಲಾಗುತ್ತದೆ. ಉಳಿಕೆ ಹಣವನ್ನು ತಿಂಡಿ ಮತ್ತು ಊಟಕ್ಕೆ ವಿನಿಯೋಗಿಸಲಾಗುತ್ತದೆ. ಸಸಿ ನೆಡುವ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚವನ್ನು ಬಿಡಿಎ ಭರಿಸುತ್ತಿದೆ ಎಂದು ಹೇಳಿದರು.