ಗ್ರಾಹಕರು ತಪ್ಪದೇ ರಶೀದಿ ಪಡೆದುಕೊಳ್ಳಬೇಕು: ನ್ಯಾಯಾಧೀಶ ಮೋಹನ ಬಾಡಗಂಡಿ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ಯಾವುದೇ ವಸ್ತುಗಳನ್ನು ಖರಿದಿಸಬೇಕಾದರೆ ಗ್ರಾಹಕರು ಆಯಾ ವಸ್ತುಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ ತೆಗೆಕೊಳ್ಳುವ ಮೂಲಕ ತಪ್ಪದೇ ಅಂಗಡಿಕಾರರಿಂದ ರಶೀದಿಯನ್ನು ಪಡೆಯಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಗ್ರಾಹಕರು ಯಾವುದೇ ವಸ್ತುವನ್ನು ಖರೀದಿ ಮಾಡಿದ ಕುರಿತು ರಶೀದಿ ಪಡೆದು ಇಟ್ಟುಕೊಂಡರೆ ಸರ್ಕಾರಕ್ಕೆ ತೆರಿಗೆ ಸಂದಾಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮೋಹನ ಬಾಡಗಂಡಿ ಹೇಳಿದರು.

ಐವಾನ್ ಶಾಹಿ-ಅತಿಥಿ ಗೃಹದ ಸಭಾಂಗಣದಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಮತ್ತು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ, ಕಲಬುರಗಿ ಇವರ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು “ಇ-ಕಾಮರ್ಸ್‌ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ” ಎಂಬ ಘೋಷ ವಾಕ್ಯದೊಂದಿಗೆ ಉದ್ಪಾಟಿಸಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ್ ನವಲೆ ಮಾತನಾಡಿ, ವ್ಯಾಪರಸ್ಥರು ಹಣಕ್ಕಾಗಿ ಮೋಸ ಮಾಡುತ್ತಿರುವ ಕಾರಣ ಅವರ ಮೋಸದ ಜಾಹೀರಾತುಗಳಿಗೆ ನಂಬಬಾರದೆಂದು ಗ್ರಾಹಕರಿಗೆ ತಿಳಿಸಿದರು ವಸ್ತುಗಳು ಖರೀದಿ ಮಾಡುವಾಗ ಗ್ರಾಹಕರು ಗುಣಮಟ್ಟದ ಉತ್ಪಾದನೆಗಳು ಖರೀದಿಸಬೇಕೆಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಾಲತಿ ಗುರಣ್ಣ(ರೇಷ್ಮಿ) ಮಾತನಾಡಿ, ಡಿಜಿಟಲ್ ಯುಗದಲ್ಲಿ ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ಗಮನಿಸಬೇಕು ಪ್ರತಿಯೊಂದು ವಸ್ತು ಖರೀದಿಸಿದಾಗ ಕಡ್ಡಾಯವಾಗಿ ರಶೀದಿ ಪಡೆಯಬೇಕೆಂದು ಹಾಗೂ ಒಖP ದರಕ್ಕಿಂತ ಹೆಚ್ಚಿನ ದರ ಪಾವತಿಸಬಾರದೆಂದರು.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ ಅವರು ವಿದ್ಯಾರ್ಥಿಗಳು ಸೌಂದರ್ಯವರ್ದಕ ವಸ್ತುಗಳ ಬಗ್ಗೆ ಜಾಗೂರುಕತೆ ವಹಿಸಿ ಜಾಹೀರಾತುಗಳಿಗೆ ಮೋಸ ಹೋಗಬಾರದೆಂದು ತಿಳಿಸಿದರು.

ಶ್ರೀ ಬಸವೇಶ್ವರ ರೂರಲ್ ಡೆವಲಪ್‍ಮೆಂಟ್ ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರಾದ ಬಾಪುಗೌಡ ಪಾಟೀಲ್ ಮಹಾತ್ಮಾ ಗಾಂಧೀಜಿ ಹಿತರಕ್ಷಣಾ ವೇದಿಕೆ(ರಿ) ಪ್ರದಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರು ಹಾಗೂ ನ್ಯಾಯವಾದಿಗಳಾದ ವೈಜನಾಥ ಝಳಕಿ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಬಗ್ಗೆ ಗ್ರಾಹಕರಿಗೆ ವಿಶೇಷ ಉಪನ್ಯಾಸ ನೀಡಿದರು.

ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ್ ಜಿ. ಗುಣಕಿ ಸ್ವಾಗತಿಸಿದರು. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಅಂಕಿತಾಧಿಕಾರಿ ಡಾ. ಅರ್ಚನಾ ಕಮಲಾಪೂರಕರ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಶಿವಪುತ್ತರ ಅಲ್ಲಾಪುರ,ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅಧಿಕಾರಿಗಳು ಸಾರ್ವಜನಿಕರು ಗ್ರಾಹಕರು ಉಪಸ್ಥಿತರಿದ್ದರು.

Share this article