- ಬಿಲ್ ಇದ್ದರೆ ಕೇಸ್ ಹೂಡಬಹುದು: ಸಲಹೆ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗ್ರಾಹಕ ಎಚ್ಚರದಿಂದಿದ್ದರೆ, ವಸ್ತುಗಳನ್ನು ಖರೀದಿಸುವಾಗಿ ಮೋಸ ತಪ್ಪಲಿದೆ ಎಂದು ಪ್ರಧಾನಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಟಿ. ದೀಪು ಸಲಹೆ ನೀಡಿದರು.
ಪ್ರತಿ ದಿನ ಯಾವುದಾದರೂ ವಸ್ತು ಖರೀದಿಸುವ ಮೂಲಕ ಜನರು ಗ್ರಾಹಕರಾಗುತ್ತಿದ್ದಾರೆ. ವಸ್ತು ಖರೀದಿಸುವ ಮುನ್ನ ವಸ್ತುವಿನ ಬೆಲೆ, ಅವಧಿ, ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಮಾಹಿತಿ ಪಡೆಯಬೇಕು ಎಂದರು.
ತಹಸೀಲ್ದಾರ್ ಎಂ.ಎಸ್. ತನ್ಮಯ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಎ .ಷಣ್ಮುಗಂ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ವೆಂಕಟೇಶ್, ಕಾರ್ಯದರ್ಶಿ ಜವರಾಜು, ಹಿರಿಯ ವಕೀಲ ಜಿ.ಎಸ್.ಮಧುಸೂದನ್, ವಿಜಯ ಗ್ಯಾಸ್ ಮಾಲೀಕ ದೊರೆಸ್ವಾಮಿ, ಆಹಾರ ಶಿರಸ್ತೇದಾರ್ ಅರವಿಂದ, ಆಹಾರ ನಿರೀಕ್ಷಕಿ ಪೂರ್ಣಿಮ ಸೇರಿದಂತೆ ಹಲವರಿದ್ದರು.---