ಎಐಟಿ ಕಾಲೇಜಿನ ಆಂಪಿ ಥಿಯೇಟರ್‌ನಲ್ಲಿ ಸಿರಿಧಾನ್ಯ ಹಬ್ಬ- 2023,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹೆಚ್ಚು ಇಳುವರಿಗಾಗಿ ರಾಸಾಯನಿಕ ಗೊಬ್ಬರ, ಕೀಟ ನಾಶಕ ಬಳಸುತ್ತಿರುವುದರಿಂದ ನಮ್ಮ ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತಿದೆ. ರಾಸಾಯನಿಕ ಮುಕ್ತ ಸಿರಿ ಧಾನ್ಯ ಬಳಸುವುದರಿಂದ ಆರೋಗ್ಯ ವೃದ್ಧಿಸಿ ಕೊಳ್ಳಬಹುದಾಗಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.ನಗರದ ಎಐಟಿ ಕಾಲೇಜಿನ ಆಂಪಿ ಥಿಯೇಟರ್ ನಲ್ಲಿ ಶನಿವಾರ ನಡೆದ ಸಿರಿಧಾನ್ಯ ಹಬ್ಬ - 2023ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿರಿ ಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ. ಗ್ರಾಹಕರೂ ಕೂಡ ಹೆಚ್ಚು ಸಿರಿಧಾನ್ಯ ಬಳಸುವ ಮೂಲಕ ಬೆಳೆಯುವವರಿಗೆ ಉತ್ಸಾಹ ಕೊಡಬೇಕು ಎಂದು ಮನವಿ ಮಾಡಿದರು. ಸಿರಿಧಾನ್ಯ ಹೆಚ್ಚು ಬಳಸುವುದರಿಂದ ಲಾಭವಾಗುವುದು ಅದನ್ನು ಬಳಸುವವರಿಗೆ. 40 ವರ್ಷಗಳ ಹಿಂದಿನ ಜನರ ಆರೋಗ್ಯ ಹಾಗೂ ಅವರ ಜೀವನ ಶೈಲಿ ನೋಡಿದರೆ ಇಂದು ಸಿರಿಧಾನ್ಯಕ್ಕೆ ಹೆಚ್ಚು ಮಹತ್ವ ಕೊಡ ಬೇಕಿದೆ ಎನ್ನುವುದು ತಿಳಿಯಲಿದೆ ಎಂದರು.ಕಡಿಮೆ ಮಳೆ ಬರುವ ಪ್ರದ್ರೇಶದಲ್ಲಿ, ಕಡಿಮೆ ಖರ್ಚಿನಲ್ಲಿ ಬೆಳೆಯುವ ಪದಾರ್ಥಗಳೆಂದರೆ ಸಿರಿಧಾನ್ಯ ಬೆಳೆ ಗಳಾಗಿವೆ. ರಾಗಿಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಸಕ್ಕರೆ ಖಾಯಿಲೆ ಬಳಿಗೂ ಸುಳಿಯು ತ್ತಿರಲಿಲ್ಲ, ಕೃಷಿಯನ್ನೇ ಅವಲಂಭಿಸಿದ ಏಕೈಕ ದೇಶ ಇದ್ದರೆ ಅದು ಭಾರತ. ದೇಶದಲ್ಲಿ ಸತತವಾಗಿ 2 ವರ್ಷ ಬರಗಾಲ ಬಂದರೂ ದೇಶದ ಜನ ಎಂದೂ ಉಪವಾಸ ಇರಲ್ಲ. ಆ ಒಂದು ಶಕ್ತಿ ನಮ್ಮ ದೇಶದ ರೈತರಿಗಿದೆ ಎಂದು ಹೇಳಿದರು.ಸರ್ಕಾರದಿಂದ ರೈತರಿಗೆ ಸಹಾಯಧನದಡಿ ವಿತರಣೆ ಮಾಡುವ ಯಂತ್ರೋಪಕರಣ ಕೊಡುವ ಮೊದಲು ಅವುಗಳ ಗುಣಮಟ್ಟವನ್ನೊಮ್ಮೆ ಅಧಿಕಾರಿಗಳು ಪರಿಶೀಲಿಸಿ ವಿತರಣೆ ಮಾಡಿ. ಸಿರಿಧಾನ್ಯದ ಬಗ್ಗೆ ಗ್ರಾಹರಿಗೆ ತಿಳುವಳಿಕೆ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಸಿರಿಧಾನ್ಯ ಬಳಕೆ ಯಿಂದ ನಮಗೆ ಮೂರು ರೀತಿಯ ಉಪಯೋಗವಿದೆ. ಸಿರಿಧಾನ್ಯ ಒಂದು ಆರೋಗ್ಯ ಕರ ಪದಾರ್ಥ. ಹವಾಮಾನ ವೈಪರೀತ್ಯದಲ್ಲೂ ರೈತರ ಕೈ ಹಿಡಿಯುವ ಬೆಳೆಯಾಗಿದೆ. ಪ್ರಪಂಚದಾದ್ಯಂತ ಆರೋಗ್ಯ ಕ್ಕಾಗಿ ಬೆಲೆಗೆ ಮಹತ್ವ ಕೊಡದೆ ಖರೀದಿಸುವ ಪದಾರ್ಥ ಎಂದರು. ಇಂತಹ ಸಿರಿಧಾನ್ಯ ಪದಾರ್ಥಗಳು ಡಯಾಬಿಟಿಕ್ ಇರುವವರಿಗೆ ಬಹಳ ಉಪಯುಕ್ತವಾಗಿರುವುದರಿಂದ ಸಿರಿಧಾನ್ಯ ಬಳಕೆ ಪ್ರಮಾಣ ಹೆಚ್ಚಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಮಾಡುವ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲುಪಬೇಕು ಎಂದು ಹೇಳಿದರು.ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಲ್ ಸುಜಾತ, ಎಐಟಿ ಪ್ರಾಂಶುಪಾಲ ಡಾ. ಸಿ.ಟಿ ಜಯದೇವ್, ರೈತ ಮುಖಂಡರಾದ ಬಿ.ಸಿ ನರೇಂದ್ರ, ಗುರುಶಾಂತಪ್ಪ, ಎಸ್.ಕೊಪ್ಪಲು ಮಂಜುನಾಥ್, ಗುರುಶಾಂತಪ್ಪ ಉಪಸ್ಥಿತರಿದ್ದರು.
30 ಕೆಸಿಕೆಎಂ 5ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಆಂಪಿ ಥಿಯೇಟರ್‌ನಲ್ಲಿ ಶನಿವಾರ ನಡೆದ ಸಿರಿಧಾನ್ಯ ಹಬ್ಬ- 2023 ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಡಾ.ಸಿ.ಟಿ. ಜಯದೇವ್, ಸುಜಾತ ಇದ್ದರು.
ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಆಂಪಿ ಥಿಯೇಟರ್‌ನಲ್ಲಿ ಶನಿವಾರ ನಡೆದ ಸಿರಿಧಾನ್ಯ ಹಬ್ಬ- 2023 ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಜಿಪಂ ಸಿಇಓ ಡಾ. ಗೋಪಾಲಕೃಷ್ಣ, ಡಾ.ಸಿ.ಟಿ. ಜಯದೇವ್, ಸುಜಾತ ಇದ್ದರು.