ಕನ್ನಡಪ್ರಭ ವಾರ್ತೆ ಮುಳಬಾಗಿಲುಸ್ಥಗಿತವಾಗಿರುವ ನರೇಗಾ ಕಾಮಗಾರಿ ಮುಂದುವರೆಸಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಜೊತೆಗೆ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತ ಕ್ರಮ ವಹಿಸಿ, ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ರೈತ ಸಂಘದಿಂದ ತಾಪಂ ಅಧಿಕಾರಿ ರವಿಕುಮಾರ್‌ಗೆ ಮನವಿ ಸಲ್ಲಿಸಲಾಯಿತು.ಲಕ್ಷಾಂತಾರ ರೈತ ಕೂಲಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ಕೊಟ್ಟಿರುವ ಮಹಾತ್ಮಗಾಂಧಿ ನರೇಗಾ ಕಾಮಗಾರಿ ಕೇಂದ್ರ-ರಾಜ್ಯ ಸರ್ಕಾರ ನಾಮ ಬದಲಾವಣೆ ಹೆಸರಿನಲ್ಲಿ ಹಗ್ಗಜಗ್ಗಾಟ ಮಾಡಿಕೊಂಡು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವುದು ನ್ಯಾಯವಲ್ಲವೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರವನ್ನು ಪ್ರಶ್ನಿಸಿದರು.ಕೂಲಿ ಕಾರ್ಮಿಕರ ಹೆಸರಿನಲ್ಲಿ ಜಾಬ್ ಕಾರ್ಡ್ ಸೃಷ್ಠಿಸಿ ದುಡಿಯುವ ಕೈಗೆ ಕೆಲಸ ನೀಡದೇ ಬಡವರ ಹೆಸರಿನಲ್ಲಿ ಗುತ್ತಿಗೆದಾರರು ಅಧಿಕಾರಿಗಳು ವೆಂಡರ್‌ಗಳು ಹಾಗೂ ಇಂಜಿನಿಯರ್‌ಗಳು ಜೆಸಿಪಿಗಳ ಮುಖಾಂತರ ಕಾಮಗಾರಿ ಮಾಡಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ನರೇಗಾದಲ್ಲಿ ಲಕ್ಷ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದೆ ಎಂದು ಕೇಂದ್ರ ಸರ್ಕಾರ ಆರೋಪ ಮಾಡುವ ಜೊತೆಗೆ ಮಹಾತ್ಮ ಗಾಂಧಿ ಹೆಸರನ್ನು ಬದಲಾವಣೆ ಮಾಡಿ ರಾಮಜೀ ಹೆಸರನ್ನು ನಾಮಕರಣ ಮಾಡಿರುವುದು ಕ್ರಾಂಗೇಸ್ ವಿರೋಧ ಮಾಡುತ್ತಿದ್ದು ಇಬ್ಬರ ಜಗಳದಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಹಳ್ಳಿಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿ ತಾಪಂ ಅಧಿಕಾರಿ ರವಿಕುಮಾರ್, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ ನರೇಗಾ ಕಾಮಗಾರಿ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವ ಭರವಸೆ ನೀಡಿದರು. ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾಧ್ಯಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರೂಕ್ ಪಾಷ, ಈಕಂಬಳ್ಳಿ ಮಂಜುನಾಥ, ಮುಖಂಡರಾದ ಹೆಬ್ಬಣಿ ಆನಂದರೆಡ್ಡಿ, ಶಿವ, ಸುನಿಲ್ ಕುಮಾರ್, ನಾಗರಾಜ್, ಶ್ರೀನಿವಾಸ, ಶಂಕರ, ಆಂಜಿನಪ್ಪ, ಸತೀಶ, ವಿಜಯ್, ಉದಯಕುಮಾರ್, ಚಲಪತಿ, ಗಿರೀಶ್, ಸುಪ್ರೀಂ ಚಲ, ವೇಣು, ಕೇಶವ, ಧರ್ಮ, ನಾಗೇಶ ಇದ್ದರು.