ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಂದುವರಿದ ಪ್ರತಿಭಟನೆ

KannadaprabhaNewsNetwork | Published : Aug 14, 2024 12:54 AM

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಕಿರಿಯ ಸ್ಥಾನೀಯ ವೈದ್ಯರ ಮನವಿಯನ್ನು ಸಕರಾತ್ಮಕವಾಗಿ ಸ್ಪಂದಿಸಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ಅಧಿಕವಿದೆ. ಹೆಚ್ಚು ಪ್ರವೇಶ ಶುಲ್ಕ ಪಡೆದು, ಕಡಿಮೆ ಶಿಷ್ಯವೇತನ ನೀಡುವ ಮೂಲಕ ವಂಚಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಸ್ಪತ್ರೆಯಲ್ಲಿ ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 2ನೇ ದಿನವು ಮುಂದುವರಿಯಿತು.

ಮಂಗಳವಾರ ಅಖಿಲ ಕರ್ನಾಟಕ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘವು ಬೆಂಬಲ ಸೂಚಿಸಿ ಪಾಲ್ಗೊಂಡಿತು. ಈ ವೇಳೆ ಮಾತನಾಡಿದ ಅಖಿಲ ಕರ್ನಾಟಕ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ.ಯೋಗೇಂದ್ರಕುಮಾರ್, ಸ್ಥಾನೀಯ ವೈದ್ಯರು ಶಿಷ್ಯ ವೇತನ ಹೆಚ್ಚಿಳಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದೆ. ಆಸ್ಪತ್ರೆಗಳಲ್ಲಿ ಬೇಸಿಕ್ ಪಿಲ್ಲರ್‌ಗಳಾಗಿ ಕೆಲಸ ನಿರ್ವಹಿಸುವ ಸ್ಥಾನೀಯ ವೈದ್ಯರ ಮನವಿಗೆ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಕಿರಿಯ ಸ್ಥಾನೀಯ ವೈದ್ಯರ ಮನವಿಯನ್ನು ಸಕರಾತ್ಮಕವಾಗಿ ಸ್ಪಂದಿಸಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ಅಧಿಕವಿದೆ. ಹೆಚ್ಚು ಪ್ರವೇಶ ಶುಲ್ಕ ಪಡೆದು, ಕಡಿಮೆ ಶಿಷ್ಯವೇತನ ನೀಡುವ ಮೂಲಕ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯೆ ವಿದ್ಯಾರ್ಥಿ ಮೇಲಿನ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಕೂಡಲೇ ತುರ್ತು ಕ್ರಮ ಕೈಗೊಂಡು ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಾ.ಚೇತನ್, ಡಾ ರೋಹನ್ ಸೇರಿದಂತೆ ಮಿಮ್ಸ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯರು ಭಾಗಿಯಾಗಿದ್ದರು.ಆ.16ರಂದು ವರಮಹಾಲಕ್ಷ್ಮಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

ಮಂಡ್ಯ:ನಗರದ ಪೇಟೆಬೀದಿ 2ನೇ ಕ್ರಾಸ್‌ನಲ್ಲಿರುವ ಶ್ರೀಮಹಾಲಕ್ಷ್ಮಿದೇವಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆ.16ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಅಂದು ಬೆಳಗ್ಗೆ 6 ಗೆಂಟೆಗೆ ಪಂಚಾಮೃತ ಅಭಿಷೇಕ, ವೈವಿಧ್ಯಮಯ ಅಲಂಕಾರ ಸೇವೆ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ 8 ರಿಂದ 10.30ರವರೆಗೆ ಎಂ.ವೈ.ಕುಮಾರ ಮತ್ತು ಯುವರಾಜ್ ತಂಡದಿಂದ ಸ್ಯಾಕ್ಸೋಫೋನ್ ಕಚೇರಿ, ಯೋಗೇಶ್ ನಂದೀಶ್ ವೆಂಕಟೇಶ್ ತಂಡದಿಂದ ಸ್ಯಾಕ್ಸೋಪೋನ್ ವಾದನ, ಸಂಜೆ 5 ಗಂಟೆಗೆ ಸಿ.ಪಿ.ಶ್ರೀನಿವಾಸ್ ಅವರಿಂದ ಕ್ಲಾರಿಯೋನೆಟ್ ವಾದನ ಬಳಿಕ ಚಿಣ್ಯ ಮಂಜುನಾಥ್ ಅವರಿಂದ ದಾಸವಾಣಿ ನಡೆಯಲಿದೆ. ಪಿಟೀಲು ಗುರುಮೂರ್ತಿ, ತಬಲ ವೆಂಕಟೇಶ್, ಕುಮಾರಸ್ವಾಮಿ, ಕೀಬೋರ್ಡ್‌ನಲ್ಲಿ ಉಮಾಶಂಕರ್ ಪಕ್ಕವಾದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಹಾಲಕ್ಷ್ಮಿ ದೇವಿ ದೇವಸ್ಥಾನ ಟ್ರಸ್ಟ್‌ನ ಸೇವಾ ಸಮಿತಿ ತಿಳಿಸಿದೆ.

Share this article