ವೀರವೈಶ ಲಿಂಗಾಯತ ಸಮಾಜವನ್ನು ಒಡೆದು ಆಳಲು ನಿರಂತರ ಪ್ರಯತ್ನ: ಬಿ.ವೈ.ವಿಜಯೇಂದ್ರ ಕಿಡಿ

KannadaprabhaNewsNetwork |  
Published : Dec 21, 2025, 02:45 AM IST
20ಕೆಎಂಎನ್ ಡಿ24 | Kannada Prabha

ಸಾರಾಂಶ

ಭಾರತವನ್ನು ಭಿಕ್ಷುಕ ದೇಶವೆನ್ನುತ್ತಿದ್ದ ಕಾಲ ಬದಲಾಗಿ ಬಲಿಷ್ಠ ರಾಷ್ಟ್ರವಾಗಿ ರೂಪುಗೊಂಡಿದೆ. ಸ್ವಾಮಿ ವಿವೇಕಾನಂದರ ಕಾಲದಲ್ಲಿ ನಮ್ಮ ದೇಶದ ತತ್ವಜ್ಞಾನ ಏನೂ ಎಂಬುವುದು ಇಡೀ ವಿಶ್ವಕ್ಕೆ ಗೊತ್ತಿತ್ತು. ಆಗ ವಿದೇಶಿಗರಿಗೆ ಭಾರತ ದೇಶ ಬಲಿಷ್ಠ ಎಂಬುವುದು ಶ್ರೇಷ್ಠ ಎನ್ನುವುದು ತಿಳಿಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವೀರವೈಶ ಲಿಂಗಾಯತ ಸಮಾಜವನ್ನು ಒಡೆದು ಆಳಲು ಕೆಲವರಿಂದ ನಿರಂತರ ಪ್ರಯತ್ನಗಳು ನಡೆಯುತ್ತಿದೆ. ಆದರೆ, ಅದು ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಯಕಯೋಗಿ ಬಸವಣ್ಣ ಅವರ ಸಮ ಸಮಾಜ ನಿರ್ಮಾಣವಾಗಬೇಕಾದರೆ ವೀರವೈವ ಲಿಂಗಾಯತ ಸಮಾಜ ಎಲ್ಲ ಒಳಪಂಗಡಗಳು ವೈಮನಸ್ಸು ಮರೆತು ಒಗ್ಗೂಡಿ ಒಟ್ಟಾರೆಯಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.

ಭಾರತವನ್ನು ಭಿಕ್ಷುಕ ದೇಶವೆನ್ನುತ್ತಿದ್ದ ಕಾಲ ಬದಲಾಗಿ ಬಲಿಷ್ಠ ರಾಷ್ಟ್ರವಾಗಿ ರೂಪುಗೊಂಡಿದೆ. ಸ್ವಾಮಿ ವಿವೇಕಾನಂದರ ಕಾಲದಲ್ಲಿ ನಮ್ಮ ದೇಶದ ತತ್ವಜ್ಞಾನ ಏನೂ ಎಂಬುವುದು ಇಡೀ ವಿಶ್ವಕ್ಕೆ ಗೊತ್ತಿತ್ತು. ಆಗ ವಿದೇಶಿಗರಿಗೆ ಭಾರತ ದೇಶ ಬಲಿಷ್ಠ ಎಂಬುವುದು ಶ್ರೇಷ್ಠ ಎನ್ನುವುದು ತಿಳಿಯಿತು. ಇಡೀ ಭಾರತಕ್ಕೆ ಜಗತ್ತನ್ನು ತೆಗೆದುಕೊಂಡು ಹೋಗುವ ಶಕ್ತಿ ಭಗವಗ್ಗಿತೆಯಿಂದ ಬಂದಿದೆ. ಜಗತ್ತಿನ ಯಾವ ದೇಶಕ್ಕೂ ಹೋದರೂ ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣ ಅವರನ್ನು ನೆನೆಯುತ್ತಾರೆ ಎಂದರು.

ತಮ್ಮ ಜೀವಿತಾವಧಿಯಲ್ಲಿ ಸಮಾಜದ ಸುಧಾರಣೆಗೆ ಶ್ರಮಿಸಿದ ಶಿವರಾತ್ರೀಶ್ವರ ಶಿವಯೋಗಿಗಳ ಸೇವೆ ಅನನ್ಯ. ಸುತ್ತೂರು ಮಠ ಬಡವರಿಗೆ ಆಶ್ರಮದ ನೀಡುವ ಕೆಲಸ ಮಾಡಿಕೊಂಡು ಬಂದಿದೆ. ಶಿವರಾತ್ರೀಶ್ವರ ಶಿವಯೋಗಿಗಳ ಕಾರ್ಯವನ್ನು, ಈ ಮಠದ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸುತ್ತೂರು ಕ್ಷೇತ್ರ ತ್ರಿವಿಧ ದಾಸೋಹಕ್ಕೆ ಸೀಮಿತವಾಗದೇ ಸಮಾಜಕ್ಕೆ ಮಾನವೀಯತೆ ನೆಲೆಯಲ್ಲಿ ನೊಂದವರ ಪಾಲಿಗೆ ನೆರವಾಗಿದೆ. ಸರ್ಕಾರ ಮಾಡದ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಬಿ.ಎಸ್.‌ಯಡಿಯೂರಪ್ಪ ಸೂಚನೆಯಂತೆ ಕಾರ್ಯಕ್ರಮಕ್ಕೆ ಬಂದಿರುವೆ. ಅವರು ಮುಖ್ಯಮಂತ್ರಿಯಾಗಿದ್ದಾಗ ವೀರವೈವ, ಒಕ್ಕಲಿಗ ಸೇರಿದಂತೆ ಎಲ್ಲ ಸಮಾಜದ ಮಠಗಳ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಅನುಭವ ಮಂಟಪಕ್ಕೂ ಅನುದಾನ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೆಲವರು ಕುರ್ಚಿ ಎತ್ತಿಕೊಂಡು ತಿರುಗಾಡುತ್ತಿದ್ದ ಕಂಡು ನಾನು ಇಲ್ಲಿಯೂ ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಕಾಳಗವೇ ಎಂಬಂತೆ ಭಾಶವಾಯಿತು ಎಂದು ವಿಜಯೇಂದ್ರ ಇದೇ ವೇಳೆ ಹಾಸ್ಯ ಚಟಾಕಿ ಹಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ