ನಿರಂತರ ಕಲಿಕೆಯಿಂದ ವೃತ್ತಿಯ ಘನತೆ ವೃದ್ಧಿ: ಸಿ.ರಮ್ಯ

KannadaprabhaNewsNetwork |  
Published : Mar 22, 2025, 02:05 AM IST
21ಕೆಎಂಎನ್ ಡಿ14 | Kannada Prabha

ಸಾರಾಂಶ

ಶಿಕ್ಷಕರು ನಿರಂತರವಾಗಿ ಕಲಿಯಬೇಕು. ಹೊಸ ವಿಷಯಗಳ ಬಗ್ಗೆ ಅಧ್ಯಯನ ಮಾಡಿದರೇ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ದಿನ ಪತ್ರಿಕೆಗಳು ಸೇರಿದಂತೆ ಪುಸ್ತಕಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆರಳಸಿ ಕೊಂಡರೇ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗಿದರೆ ವೃತ್ತಿಯ ಘನತೆ ಮತ್ತಷ್ಟು ವೃದ್ಧಿಗೊಳ್ಳುತ್ತದೆ ಎಂದು ಭಾರತೀ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ಪ್ರಾಂಶುಪಾಲೆ ಸಿ.ರಮ್ಯ ಅಭಿಪ್ರಾಯಪಟ್ಟರು.

ಭಾರತೀ ಶಿಕ್ಷಣ ಮಹಾ ವಿದ್ಯಾಲಯದಿಂದ ಕುವೆಂಪು ಸಭಾಗಣದಲ್ಲಿ ಆಯೋಜಿಸಿದ್ದ ಬಾಂಧವ್ಯ-2025 ಕಾರ್ಯಕ್ರಮದಲ್ಲಿ ಪ್ರಥಮ ಬಿಇ.ಡಿ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಕರು ನಿರಂತರವಾಗಿ ಕಲಿಯಬೇಕು. ಹೊಸ ವಿಷಯಗಳ ಬಗ್ಗೆ ಅಧ್ಯಯನ ಮಾಡಿದರೇ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ದಿನ ಪತ್ರಿಕೆಗಳು ಸೇರಿದಂತೆ ಪುಸ್ತಕಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆರಳಸಿ ಕೊಂಡರೇ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಕ ವೃತ್ತಿ ಪ್ರತಿಯೊಬ್ಬರು ಗೌರವಿಸುವ ಪ್ರವಿತ್ರ ವೃತ್ತಿ. ಶಿಕ್ಷಕರು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಹಾಗೂ ಸದೃಡ ಸಮಾಜ ಕಟ್ಟಿ ಉತ್ತಮ ಪ್ರಜೆಗಳನ್ನು ಸೃಷ್ಟಿ ಮಾಡುತ್ತದೆ. ಇದಕ್ಕೆ ಕಳಂಕ ಬಾರದ ರೀತಿ ಕಾರ್ಯನಿರ್ವಹಿಸಿ ಎಂದರು.

ಮಕ್ಕಳ ಭೌತಿಕ ಮಟ್ಟಕ್ಕೆ ಇಳಿದು ಬೋಧನೆ ಮಾಡಿದಾಗ ಮಾತ್ರ ಬೋಧನೆ ಮಾಡಿದ ವಿಷಯವು ವಿದ್ಯಾರ್ಥಿಗಳ ಮನಸ್ಸನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಜತೆಗೆ ಮಕ್ಕಳು ಕಲಿಕೆಯಲ್ಲಿ ಮನಸ್ಸನ್ನು ಕೇಂದ್ರೀರಿಕರಿಸಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಲ್. ಸುರೇಶ್ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ನಾವು ಏನನ್ನು ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡು ಬಿಇಡಿ ಗೆ ಪ್ರವೇಶ ಪಡೆದಿದ್ದು, ಆ ಗುರಿಯನ್ನು ಈಡೇರಿಸುವ ಕೌಶಲ್ಯ ಮತ್ತು ಆಯಾಮಗಳನ್ನು ತಿಳಿದುಕೊಂಡು ತಮ್ಮ ವೃತ್ತಿ ಜೀವನಲ್ಲಿ ಅಳವಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಈ ಗಂಗೇಗೌಡ, ಡಿ.ಎನ್. ಕಿರಣ್, ಎಚ್.ಡಿ. ಜ್ಯೋತಿ, ಡಿ.ಎಂ. ಶ್ವೇತಾ, ಬಿ.ಡಿ. ಶಶಿಕಲಾ, ಡಾ,ವೀಣಾಕ್ಷಿ, ರಮ್ಯ, ತಾರ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ