- ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯ
ಕನ್ನಡಪ್ರಭ ವಾರ್ತೆ ಕೊಡೇಕಲ್
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ನಿರಂತರ ಮಳೆಯಿಂದಾಗಿ ಸಮೀಪದ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ಪ್ರತಿನಿತ್ಯ ಒಳಹರಿವು ಬರುತ್ತಿರುವುದರಿಂದ ಶನಿವಾರ ಸಂಜೆಯ ಹೊತ್ತಿಗೆ 1.10 ಲಕ್ಷ ಕ್ಯುಸೆಕ್ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.ಕಳೆದ ಶುಕ್ರವಾರದ ಮಧ್ಯಾಹ್ನ ಬಸವಸಾಗರ ಜಲಾಶಯಕ್ಕೆ 70 ಸಾವಿರ ಕ್ಯೂಸೆಕ್ ಇದ್ದ ಒಳಹರಿವು ಸಂಜೆಯಿಂದ 90 ಸಾವಿರ ಕ್ಯೂಸೆಕ್ ಹರಿದು ಬಂದಿದೆ. ಶನಿವಾರ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿರುವುದರಿಂದ 1.10 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಬಸವಸಾಗರ ಜಲಾಶಯಕ್ಕೆ ಹರಿದು ಬಂದಿರುವುದರಿಂದ ಜಲಾಶಯದ ಎಲ್ಲಾ 30 ಗೇಟ್‌ಗಳಿಂದ 78,445 ಕ್ಯೂಸೆಕ್ ನೀರನ್ನು ಹಾಗೂ ಎಂಪಿಸಿಎಲ್‌ನಿಂದ 6 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟಾರೆಯಾಗಿ 1.10 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
===ಬಾಕ್ಸ್====
ಬಸವಸಾಗರ ಜಲಾಶದಿಂದ 1.10 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡುತ್ತಿರುವುದರಿಂದ ನಾರಾಯಣಪುರ ಸಮೀಪದ ನದಿ ತಟದಲ್ಲಿರುವ ಪುರಾಣ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನದ ಕೆಳಮೆಟ್ಟಿಲವರೆಗೆ ನೀರು ತಲುಪಿವೆ. ಜಲಾಶಯದಿಂದ ಸದ್ಯ 1ಲಕ್ಷಕ್ಕೂ ಅಧಿಕ ನೀರನ್ನು ಕೃಷ್ಣಾ ನದಿಗೆ ಬಿಡುತ್ತಿದ್ದು, ದೊಡ್ಡ ದೊಡ್ಡ ಬಂಡೆಕಲ್ಲುಗಳ ಇಕ್ಕೆಲಗಳಲ್ಲಿ ಭೋರ್ಗರೆಯುತ್ತ, ಜಲಪಾತದಂತೆ ಧುಮ್ಮಿಕ್ಕುವ ಕೃಷ್ಣಾ ಜಲಧಾರೆ ನದಿಯ ಕೆಲ ಪ್ರದೇಶಗಳಲ್ಲಿ ತೆಪ್ಪ ಹಾಗೂ ಹರಿಗೋಲುಗಳ ಮೂಲಕ ಮೀನು ಹಿಡಿಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅವರಿಗೆ ನದಿಯ ನೀರಿನ ಅಪಾಯದ ಅರಿವೆ ಇಲ್ಲದಂತೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಒಂದು ವೇಳೆ ಜಲಾಶಯದಿಂದ ಇನ್ನಷ್ಟು ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಟ್ಟದ್ದೇಯಾದಲ್ಲಿ ಅನಾಹುತ ತಪ್ಪಿದ್ದಲ್ಲ ಎಂಬ ಆತಂಕ ಉಂಟಾಗಿದೆ.
ಪ್ರವಾಹ ಮುನ್ನೆಚ್ಚರಿಕೆಗಳು
•1.50 ಲಕ್ಷ ಕ್ಯೂಸೆಕ್: ಸುರಪೂರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಬಹುದು.
•2.50 ಲಕ್ಷ ಕ್ಯೂಸೆಕ್ : ಲಿಂಗಸೂರು ತಾಲೂಕಿನ ಶೀಲಹಳ್ಳಿ & ಯರಗೋಡಿ ಸೇತುವೆಗಳು ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು.
---
492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 490.72 ಮೀ. ತಲುಪಿದ್ದು 29.70 (ಶೇ. 84.27)ಟಿಎಂಸಿ ನೀರಿನ ಸಂಗ್ರಹವಿದೆ, ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.-
28ವೈಡಿಆರ್5 : ಕೊಡೇಕಲ್ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯದ ಎಲ್ಲ 30 ಕ್ರಸ್ಟ್ಗೇಟ್‌ಗಳ ಮೂಲಕ ಶನಿವಾರ 1.10 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.-
28ವೈಡಿಆರ್6 : ನಾರಾಯಣಪುರದ ಛಾಯಾಭಗವತಿ ದೇವಸ್ಥಾನದ ಕೆಳಮಟ್ಟಿಲವರೆಗೆ ಕೃಷ್ಣಾ ನದಿಯ ನೀರು ಬಂದಿರುವುದು.