ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೊಡುಗೆ ಅಪಾರವಾದದ್ದು: ನಿತಿನ್‌ ವೆಂಕಟೇಶ್‌

KannadaprabhaNewsNetwork | Published : Jan 26, 2024 1:49 AM

ಸಾರಾಂಶ

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಬೆಟ್ಟದಪುರ ಮತ್ತು ಕಿತ್ತೂರು ವಲಯದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೆಪಿಸಿಸಿ ಸದಸ್ಯ ನಿತಿನ್‌ ವೆಂಕಟೇಶ್ ಉದ್ಘಾಟನೆ. ಉತ್ತಮ ಬದುಕು ನಡೆಸಲು ಆರ್ಥಿಕ ಸ್ವಾವಲಂಬಿಗಳಾಗಲು ಸಂಘಗಳು ಬಹಳ ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ರಾವಂದೂರುಮಹಿಳೆಯರು ಆರ್ಥಿಕ ಸ್ವಾವಲಂಬಿ ಬದುಕು ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೊಡುಗೆ ಬಹಳ ಅಪಾರವಾದದ್ದು ಎಂದು ಕೆ.ಪಿ.ಸಿ.ಸಿ. ಸದಸ್ಯ ನಿತಿನ್‌ ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಗೌರಮ್ಮನವರ ಕಲ್ಯಾಣಮಂಟಪದಲ್ಲಿ ಬೆಟ್ಟದಪುರ ಮತ್ತು ಕಿತ್ತೂರು ವಲಯದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಅಭಿವೃದ್ಧಿಗೆ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದರೂ ಅಪಾರ ಕೊಡುಗೆ ಧರ್ಮಸ್ಥಳ ಸಂಸ್ಥೆಯದ್ದೆ ಹೆಚ್ಚು ಪಾಲಿದ್ದು, ಧರ್ಮಸ್ಥಳ ಸ್ವಸಹಾಯ ಗುಂಪುಗಳಿಂದ ಮಹಿಳೆಯರು ತಮ್ಮ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸ್ವಸ್ತ ಸಮಾಜದ ಬದುಕು ನಡೆಸಲು ಸಹಕಾರಿಯಾಗಿದ್ದು, ಧರ್ಮಸ್ಥಳ ವೀರೇಂದ್ರ ಹೆಗಡೆಯವರ ಕೊಡುಗೆ ಬಹಳ ಅಪಾರವಾಗಿದೆ ಎಂದು ತಿಳಿಸಿದರು.

ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಉತ್ತಮ ಬದುಕು ನಡೆಸಲು ಆರ್ಥಿಕ ಸ್ವಾವಲಂಬಿಗಳಾಗಲು ಸಂಘಗಳು ಬಹಳ ಮುಖ್ಯವಾಗಿದೆ. ಮಹಿಳೆಯರು ಹೆಚ್ಚು ಹೈನುಗಾರಿಕೆಗೆ ಉತ್ತೇಜನ ನೀಡುವ

ಮೂಲಕ ಆರ್ಥಿಕ ಸಬಲೀಕರಣವಾಗುವುದರ ಜೊತೆಗೆ ಉತ್ತಮ ಬದುಕನ್ನು ಸಾಗಿಸುವಲ್ಲಿ ಯಶಸ್ವಿಯಾಗಿದ್ದು, ಮಹಿಳೆಯರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವುದರ ಜೊತೆಗೆ ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು.

ಕೊಡಗು ಜಿಲ್ಲಾ ಧರ್ಮಸ್ಥಳ ಸಂಸ್ಥೆಯ ನಿರ್ದೇಶಕಿ ಮಾತನಾಡಿದರು.

ಶ್ರೀ ಶ್ರೀಕಂಠಾರಾಧ್ಯರವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಹಾಗೂ ವೃದ್ಧಾಪ್ಯ ವೇತನ, ಸೋಲಾರ್ ದೀಪ, ಸಾಲ ಸೌಲಭ್ಯದ ಚೆಕ್ ಅನ್ನು ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಆರ್.ಎಸ್. ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಎಸ್. ವಿಜಯಕುಮಾರ್, ನಿವೃತ್ತ ಯೋಧ ಶಿವು ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಸುಜಾತ ವಾಸು, ತಾಪಂ ಮಾಜಿ ಸದಸ್ಯ ಚಿಕ್ಕೇಗೌಡ, ಎಂ.ಕೆ. ಕೃಷ್ಣೇಗೌಡ, ಡಿ.ಎಸ್. ನಂದೀಶ್, ಆರ್.ಎಂ. ವೀರಪ್ಪ, ಇಮ್ರಾನ್‌ ಷರೀಫ್, ರಾಜ್‌ಮೂರ್ತಿ, ಸ್ವಾಮಿಗೌಡ, ಹೇಮಂತ್ ಇದ್ದರು.

Share this article