ವೈದ್ಯಕೀಯ ಕ್ಷೇತ್ರಕ್ಕೆ ಸಂಗೀತಗಳಿಂದ ಕೊಡುಗೆ: ಡಾ. ಅನಿತಾ ಎನ್.ರಾವ್

KannadaprabhaNewsNetwork |  
Published : Apr 19, 2024, 01:09 AM IST
ಸಂಗೀತ ಸಂಜೆ | Kannada Prabha

ಸಾರಾಂಶ

ಪರಿಸರ ಮತ್ತು ಹಿತವಾದ ಸಂಗೀತಗಳು ವೈದ್ಯಕೀಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ೧೦೦ ಔಷಧಿಗಳು ಸರಿಪಡಿಸಲಾಗದ ರೋಗವನ್ನು ಕೆಲವೊಮ್ಮೆ ಒಂದೇ ಒಂದು ಹವಾಮಾನ ಸರಿಪಡಿಸಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಡಾ. ಅನಿತಾ ಎನ್.ರಾವ್ ಹೇಳಿದರು.

ವಿಧೂಷಿ ಸಾವಿತ್ರಿ ಪ್ರಭಾಕರ್ ಮತ್ತು ಅವರ ತಂಡದಿಂದ ನಡೆದ ಸಂಗೀತ ಸಂಜೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಪರಿಸರ ಮತ್ತು ಹಿತವಾದ ಸಂಗೀತಗಳು ವೈದ್ಯಕೀಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ೧೦೦ ಔಷಧಿಗಳು ಸರಿಪಡಿಸಲಾಗದ ರೋಗವನ್ನು ಕೆಲವೊಮ್ಮೆ ಒಂದೇ ಒಂದು ಹವಾಮಾನ ಸರಿಪಡಿಸಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಡಾ. ಅನಿತಾ ಎನ್.ರಾವ್ ಹೇಳಿದರು.

ಪಟ್ಟಣದ ಹೊರವಲಯದ ಅಮ್ಮಡಿಯಲ್ಲಿನ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಕೊಪ್ಪ ಭಾರತೀಯ ವೈದ್ಯಕೀಯ ಸಂಘದ ಕೊಪ್ಪ ಶಾಖೆಯಿಂದ ಮಲೆನಾಡಿನ ಹೆಸರಾಂತ ವಿಧೂಷಿ ಸಾವಿತ್ರಿ ಪ್ರಭಾಕರ್ ಮತ್ತು ಅವರ ತಂಡದಿಂದ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವೈದ್ಯಕೀಯ ಸಂಘದ ಡಾ. ಉದಯ್ ಶಂಕರ್ ಮಾತನಾಡಿ ಮುಂಜಾನೆ ಲಯಬದ್ಧವಾಗಿರುವ ಸಂಗೀತವನ್ನು ಹಿತಮಿತವಾದ ಶಬ್ಧದಿಂದ ಆಲಿಸಿದಾಗ ಮನಸ್ಸು ಮುದಗೊಳ್ಳುವ ಮೂಲಕ ಮಾನವನ ಮಾನಸಿಕ ಸ್ಥಿತಿ ವಿಕಸನ ಗೊಳ್ಳುತ್ತದೆ ಎಂದರು. ವಿಧೂಷಿ ಸಾವಿತ್ರಿ ಪ್ರಭಾಕರ್ ತಂಡದ ಪಾವನಿ ನಾಗಸಿಂಹ, ಸೀತಾಪ್ರಜ್ಞ, ಶಾರದ, ವಿದ್ವಾನ್ ನೈಬಿ ಪ್ರಭಾಕರ್ ಮೃದಂಗ, ನಟರಾಜ್ ಗೋಗಟೆಯವರ ಕೀಬೋರ್ಡ್, ಗಾಡಿಕೆರೆ ಸತ್ಯನಾರಾಯಣ್‌ರವರ ರಿದಂಪ್ಯಾಡ್ ವಾದ್ಯಗಳೊಂದಿಗೆ ಸಂಗೀತ ಸಾಮ್ರಾಜ್ಯ ಸಂಚಾರಿನಿ ಎಂಬ ಶಾರದ ಸ್ತುತಿ ನಿರ್ಗುಣ ಪರಬ್ರಹ್ಮ, ಸ್ವರೂಪನಾದ ಶಿವಸ್ತುತಿ, ಕುವೆಂಪು ರಚನೆಯ ಇಳಿದುಬಾ ತಾಯೆ ಇಳಿದುಬಾ ಹೀಗೆ ಮಹಾನ್ ಕವಿಗಳ ಕೃತಿಗಳೊಂದಿಗೆ ಭಕ್ತಿಗೀತೆ, ಭಾವಗೀತೆಗಳು ಕೇಳುಗರ ಮನಸೂರೆಗೊಂಡಿತು. ಡಾ. ನಟರಾಜ್ ರಾವ್, ಡಾ. ರಾಮಚಂದ್ರ, ಡಾ. ಅಮರ್ ಶೇಖರ್, ಡಾ. ಶಾನುಭೋಗ್, ಡಾ. ಹೇಮಂತ್ ಕುಮಾರ್, ಡಾ. ವಿಭಾ ಹೇಮಂತ್, ರೇಖಾ ಉದಯ್ ಶಂಕರ್ ಸೇರಿದಂತೆ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು, ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!