ಕುಕನೂರು: ಸ್ವಾತಂತ್ರ್ಯ ಪೂರ್ವದಲ್ಲಿ ವೃತ್ತಿ ರಂಗಭೂಮಿಯ ಕೊಡುಗೆ ಅಪಾರವಾಗಿದ್ದು, ರಂಗಭೂಮಿ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ರಂಗಭೂಮಿ ನಾಟಕ ನಿರ್ದೇಶಕ ಹಾಗೂ ಕಲಾವಿದ ಜೇವರಗಿ ರಾಜಣ್ಣ ಹೇಳಿದರು.
ಆದರೆ, ನಾನು ರಚನೆ ಮಾಡಿದ ನಾಟಕಗಳು ಮಹಿಳೆಯರು ಸೇರಿದಂತೆ ಕುಟುಂಬಸ್ಥರು ಬಂದು ನೋಡುವಂತೆ ಪ್ರದರ್ಶನ ಮಾಡುತ್ತಿದ್ದು, ಗಂಗಿ ಮನಿಯಾಗ ಗೌರಿ ಹೊಲದಾಗ ನಾಟಕವು ಹೆಚ್ಚು ನಾಟಕ ಪ್ರಿಯರನ್ನು ರಂಗಭೂಮಿಯತ್ತ ಬರುವಂತೆ ಮಾಡಿದೆ. ಶೇ.೭೦ ಮಹಿಳೆಯರು ನಾಟಕ ನೋಡಲು ಆಗಮಿಸುತ್ತಿದ್ದು, ಇದರಿಂದ ಕಲಾವಿದರಿಗೂ ಹೆಚ್ಚು ಪ್ರೋತ್ಸಾಹ ದೊರೆತಿದೆ ಎಂದರು.
೫೦ನೇ ನಾಟಕ ಪ್ರದರ್ಶನ ಕಾಣುತ್ತಿದೆ. ರಾಜ್ಯದಲ್ಲಿ ೨೪ ನಾಟಕ ಕಂಪನಿಗಳಿದ್ದು, ೧೨ ಕಂಪನಿಗಳು ನಿರಂತರ ನಾಟಕ ಪ್ರದರ್ಶನ ನೀಡುತ್ತಿವೆ. ಸರ್ಕಾರಗಳು ಕೂಡ ರಂಗಭೂಮಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತವೆ ಎಂದರು.ಬಿಎಸ್‌ಆರ್ ನಾಟಕ ಸಂಘದ ಕಂಪನಿ ಮಾಲೀಕರಾದ ಸುಜಾತ ಗುಬ್ಬಿ ಮಾತನಾಡಿ, ಕುಕನೂರು ಪಟ್ಟಣದಲ್ಲಿ ಇಂದಿಗೆ ಗಂಗಿ ಮನಿಯಾಗ, ಗೌರಿ ಹೊಲದಾಗ ನಾಟಕವು ೫೦ನೇ ಪ್ರದರ್ಶನ ಕಾಣುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದು ನಾಟಕ ನೋಡುತ್ತಿದ್ದಾರೆ. ಇದರಿಂದ ಕಲಾವಿದರಿಗೂ ಹೆಚ್ಚು ಪ್ರೋತ್ಸಾಹ ದೊರೆಯುತ್ತಿದೆ. ಈ ಭಾಗದಲ್ಲಿ ಗುಣಮಟ್ಟದ ನಾಟಕಕ್ಕೆ ಕಲಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾರೆ. ರಂಗ ಭೂಮಿಗೆ ಹೆಚ್ಚಿನ ಸಂಖ್ಯೆ ಜನರು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.