ಕೂಚ್‌ ಬೆಹಾರ್‌ ಫೈನಲ್‌: ಮುಂಬೈ ವಿರುದ್ಧ 626 ರನ್‌ ದಾಖಲಿಸಿದ ಕರ್ನಾಟಕ

KannadaprabhaNewsNetwork | Published : Jan 15, 2024 1:46 AM

ಸಾರಾಂಶ

ಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಫೈನಲ್‌ ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ 626 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿ, 4ನೇ ದಿನಕ್ಕೆ ಆಟ ಮುಂದುವರಿಸಿದೆ. 3ನೇ ದಿನದಾಟದಲ್ಲಿ ಪ್ರಕರ್‌ ಚತುರ್ವೇದಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದು, ದ್ವಿಶತಕ ಸಿಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಫೈನಲ್‌ ಪಂದ್ಯದ ಮೂರನೇ ದಿನವಾದ ಭಾನುವಾರ ಪ್ರಕರ್‌ ಚತುರ್ವೇದಿ (256) ಅವರ ಅಮೋಘ ಬ್ಯಾಟಿಂಗ್‌ ಪ್ರದರ್ಶನದಿಂದ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

ಎರಡನೇ ದಿನ ಭರ್ಜರಿ ಬ್ಯಾಟಿಂಗ್‌ ಮೂಲಕ ಶತಕ ಬಾರಿಸಿ, ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಪ್ರಕರ್‌ ಚತುರ್ವೇದಿ ಹಾಗೂ ಹರ್ಷಿಲ್‌ ಧರ್ಮನಿ ಭಾನುವಾರವೂ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು. ಕ್ರೀಸ್‌ನಲ್ಲಿ ದೀಘಕಾಲ ಉಳಿದು, ಉತ್ತಮ ರೀತಿಯಲ್ಲಿ ಆಡುತ್ತಿದ್ದ ಹರ್ಷಿಲ್‌ ಧರ್ಮನಿ 228 ಎಸೆತಗಳಲ್ಲಿ 169 ಗಳಿಸಿ ಆಕಾಶ್ ಪವರ್‌ಗೆ ವಿಕೆಟ್‌ ನೀಡಿ ಪೆವಲಿನ್‌ ಸೇರಿದರು.

ಬಳಿಕ ಕ್ರೀಸ್‌ಗಿಳಿದ ಕೆ.ಪಿ.ಕಾರ್ತಿಕೇಯ ಉತ್ತಮ ಬ್ಯಾಟಿಂಗ್‌ ಮಾಡಿದರು. ಅವರು 107 ಎಸೆತಗಳಲ್ಲಿ 72 ರನ್‌ಗಳನ್ನು ತಂಡಕ್ಕೆ ಕಾಣಿಕೆ ನೀಡಿ ಪೆವಲಿಯನ್‌ ಸೇರಿದರು. ಅನಂತರ ಬ್ಯಾಟಿಂಗ್‌ಗೆ ಬಂದ ರಾಹುಲ್ ಡ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌ 46 ಎಸೆತಗಳಲ್ಲಿ 22 ರನ್‌ ಪೇರಿಸಿ ಔಟಾದರು. ದ್ರವ ಪ್ರಭಾಕರ್‌ (3), ನಾಯಕ ಧೀರಜ್‌ ಗೌಡ (7) ಅವರು ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ಇರಲಿಲ್ಲ.

ದ್ವಿಶತ ಬಾರಿಸಿ ಮಿಂಚಿದ ಪ್ರಕರ್‌ ಚತುರ್ವೇದಿ:

ಮೊದಲ ಇನಿಂಗ್ಸ್‌ ಆರಂಭವಾಗಿ ಕ್ರೀಸ್‌ಗಿಳಿದ ಪ್ರಕರ್‌ ಚತುರ್ವೇದಿ ಭಾನುವಾರವೂ ಅಮೋಘ ಬ್ಯಾಟಿಂಗ್‌ ಮುಂದುವರಿಸಿದರು. ಹರ್ಷಿಲ್‌ ಧರ್ಮನಿ, ಕೆ.ಪಿ.ಕಾರ್ತಿಕೇಯ ಔಟಾದ ಬಳಿಕವೂ ಉತ್ತಮ ರನ್‌ ಕಲೆ ಹಾಕಿದ ಪ್ರಕರ್‌ ಚತುರ್ವೇದಿ, ದ್ವಿಶತಕ ಬಾರಿಸುವ ಮೂಲಕ ತಂಡ ಬೃಹತ್‌ ಮೊತ್ತ ಪೇರಿಸಲು ಕಾರಣವಾದರು. ಇವರು 451 ಎಸೆತಗಳನ್ನು ಎದುರಿಸಿ, 256 ರನ್‌ ಕಲೆ ಹಾಕಿ ತ್ರಿಶತಕದತ್ತ ದಾಪುಗಾಲು ಇಟ್ಟರು.

ಬೃಹತ್‌ ಮೊತ್ತ ಕಲೆ ಹಾಕಿದ ಕರ್ನಾಟಕ:

ಮೊದಲ ಇನಿಂಗ್‌ನಲ್ಲಿ ಮುಂಬೈ ತಂಡ ನೀಡಿದ 380 ರನ್‌ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಭಾರಂಭದಲ್ಲೇ ಉತ್ತಮ ಜೊತೆ ಆಟ ಸಿಕ್ಕಿತು. ಪ್ರಕರ್‌ ಚತುರ್ವೇದಿ ಹಾಗೂ ಎಸ್‌.ಯು. ಕಾರ್ತಿಕ್‌ ಅವರ ಶತಕದ ಜೊತೆ ಆಟದ ಲಾಭ ಪಡೆದ ಕರ್ನಾಟಕ ಪ್ರಕರ್‌ ಚತುರ್ವೇದಿ (256) ಅವರ ದ್ವಿಶತಕ, ಹರ್ಷಿಲ್‌ ಧರ್ಮನಿ (169) ಅವರು ಅಮೋಘ ಶತಕದಿಂದ ತಂಡ 6 ವಿಕೆಟ್‌ ನಷ್ಟಕ್ಕೆ 626 ಬೃಹತ್‌ ಮೊತ್ತ ಪೇರಿಸಿದ್ದು, 246 ರನ್‌ಗಳ ಮುನ್ನಡೆ ಸಾಧಿಸಿದೆ. ದ್ವಿಶತಕ ಬಾರಿಸಿ ತ್ರಿಶತಕ ದತ್ತ ದಾಪುಗಾಲಿಟ್ಟುರುವ ಪ್ರಕರ್‌ ಚತುರ್ವೇದಿ ಜೊತೆ ಹಾರ್ದಿಕ್‌ ರಾಜ್‌ (5) ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

- - - ಸ್ಕೋರ್‌ ವಿವರ: ಮುಂಬೈ: ಮೊದಲ ಇನಿಂಗ್ಸ್‌ 113.5 ಓವರ್‌ಗಳಲ್ಲಿ 380 ರನ್‌

ಕರ್ನಾಟಕ: ಮೊಲದ ಇನ್ನಿಂಗ್‌ 157 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 626 ರನ್‌ (ಶನಿವಾರ ಗಳಿಸಿದ 1 ವಿಕೆಟ್‌ ನಷ್ಟಕ್ಕೆ 281ರನ್‌ನಿಂದ ಮುಂದುವರಿದೆ)

ಪ್ರಕರ್‌ ಚತುವೇದಿ: 256 (451) ರನ್‌, ನಾಟೌಟ್‌

ಎಸ್‌.ಯು. ಕಾರ್ತಿಕ್‌: 50 (67) ರನ್‌. ಸಿ ತನಿಷ್‌ ಮೆಹರ್‌, ಬಿ ಪ್ರೇಮ್‌ ದೇವ್ಕರ್‌

ಹರ್ಷಿಲ್‌ ಧರ್ಮಿಣಿ: 169 (228) ರನ್‌, ಬಿ ಆಕಾಶ್‌ ಪವರ್‌

ಕಾರ್ತಿಕೇಯ ಕೆ.ಪಿ.: 72 (107) ರನ್‌, ಎಲ್‌ಬಿಡಬ್ಲ್ಯು ಮನನ್‌ ಭಟ್‌ಸಮಿತ್‌ ದ್ರಾವಿಡ್‌: 22 (46) ರನ್‌, ಸಿ ಮನನ್ ಭಟ್‌, ಬಿ ನೂತನ್‌ ದೃವ ಪ್ರಭಾಕರ್‌: 3 (8) ರನ್‌, ಬಿ ಮನನ್ ಭಟ್‌

ಧೀರಜ್‌ ಗೌಡ: ಸಿ ಪ್ರೇಮ್‌ ದೇವ್ಕರ್‌ ಬಿ.ನೂತನ ಹಾರ್ದಿಕ್‌ ರಾಜ್‌: 5 (24) ನಾಟೌಟ್‌ - - - -14ಎಸ್‌ಎಂಜಿಕೆಪಿ05: ಪ್ರಕರ್‌ ಚತುರ್ವೇದಿ

Share this article