ಸಮಾಜ ಸೇವೆಗೆ ಸಿಎಸ್‌ಆರ್‌ ನಿಧಿ ಬಳಸಲಿ: ವಿಧಾನಪರಿಷತ್‌ ಸದಸ್ಯ

KannadaprabhaNewsNetwork |  
Published : Jan 15, 2024, 01:46 AM IST
೧೪ಕೆಎಲ್‌ಆರ್-೭ಕೋಲಾರದ  ರಂಗಮಂದಿರದಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಫ್ ವಿತರಣೆ ಕಾರ್ಯಕ್ರಮ ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅನೇಕ ಪ್ರತಿಷ್ಠಿತ ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಸಿ.ಎಸ್.ಆರ್ ನಿಧಿಯನ್ನು ಸಮಾಜ ಸೇವೆ, ಅಭಿವೃದ್ದಿ ಕಾರ್ಯಗಳಿಗೆ ಬಳಸಬೇಕು. ಆದರೆ ಅವುಗಳು ಯಾವುದಕ್ಕೆ ವಿನಿಯೋಗಿಸುತ್ತಿದೆ ಎಂಬ ಮಾಹಿತಿ ಇಲ್ಲ. ಈ ಕುರಿತು ಜಿಲ್ಲಾಧಿಕಾರಿ ಬಳಿ ಮಾಹಿತಿ ಪಡೆಯಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರ

ಸಮಾಜ ನಮಗೆ ಏನು ನೀಡಿದೆ ಎಂದು ನಿರೀಕ್ಷಿಸುವ ಬದಲು ಸಮಾಜಕ್ಕೆ ನಮ್ಮ ಕೊಡುಗೆ ಏನೆಂದು ಪ್ರತಿಯೊಬ್ಬರು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಹೇಳಿದರು.

ನಗರದ ರಂಗಮಂದಿರದಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಮಲಬಾರ್ ಚಾರಿಟಬಲ್ ಟ್ರಸ್ಟ್ ಇಂದು ತಮ್ಮ ನಿವ್ವಳಲಾಭದಲ್ಲಿ ಶೇ.೫ರಷ್ಟು ಲಾಭಾಂಶದಲ್ಲಿ ೬೧೫ ವಿದ್ಯಾರ್ಥಿನಿಯರಿಗೆ ೫೫.೫ ಲಕ್ಷ ರೂ ಶೈಕ್ಷಣಿಕ ಶುಲ್ಕ ವಿತರಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಸಮಾಜ ಸೇವೆಗೆ ಸಿಎಸ್‌ಆರ್‌ ನಿಧಿ

ನಮ್ಮ ಜಿಲ್ಲೆಯಲ್ಲಿ ಅನೇಕ ಪ್ರತಿಷ್ಠಿತ ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಸಿ.ಎಸ್.ಆರ್ ನಿಧಿಯನ್ನು ಸಮಾಜ ಸೇವೆ, ಅಭಿವೃದ್ದಿ ಕಾರ್ಯಗಳಿಗೆ ಬಳಸಬೇಕು. ಆದರೆ ಅವುಗಳು ಯಾವುದಕ್ಕೆ ವಿನಿಯೋಗಿಸುತ್ತಿದೆ ಎಂಬ ಮಾಹಿತಿ ಇಲ್ಲ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿ ಮುಂದಿನ ದಿನಗಳಲ್ಲಿ ಇಂಥಹ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ವಿನಿಯೋಗಿಸಿದರೆ ಶಾಶ್ವತವಾದ ನೆನಪುಗಳಾಗಿ ಉಳಿಯಲಿದೆ ಎಂದು ಹೇಳಿದರು.

ಸರ್ಕಾರಿ ಕಾಲೇಜಿನಲ್ಲಿ ಬಹುತೇಕ ಶೇ.೮೦ರಷ್ಟು ಕೃಷಿಕರ ಮಕ್ಕಳೆ ಇದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಲ್ಯಾಬ್, ಸ್ಮಾಟ್ ಕ್ಲಾಸ್, ಲ್ಯಾಪ್ ಟಾಪ್ ಮುಂತಾದ ಸೌಲಭ್ಯಗಳು ಕೊರತೆ ಇದ್ದು ಟ್ರಸ್ಟ್‌ನಿಂದ ಕೋಲಾರ ಜಿಲ್ಲೆಗೆ ಹೆಚ್ಚಿನ ಸಿ.ಎಸ್.ಆರ್. ನಿಧಿ ವಿನಿಯೋಗಿಸಿ ಶೈಕ್ಷಣಿಕವಾಗಿ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿಕೊಂಡರು.ಸಂಪಾದನೆ ಸದ್ಬಳಕೆಯಾಗಬೇಕು

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಮನುಷ್ಯ ಜೀವನದಲ್ಲಿ ಸಂಪಾದಿಸುವುದು ಮುಖ್ಯವಲ್ಲ ಅದನ್ನು ಸದ್ಬಳಿಸಿ ಕೊಳ್ಳುವುದು ಮುಖ್ಯ ಎಂಬುವುದಕ್ಕೆ ಮಲಬಾರ್ ಚಾರಿಟಬಲ್ ಟ್ರಸ್ಟ್ ಉದಾಹರಣೆ, ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವುದು ಬಹುತೇಕ ಗ್ರಾಮೀಣ ಪ್ರದೇಶದ ಬಡ ಪ್ರತಿಭೆಗಳೇ ಆಗಿರುತ್ತಾರೆ, ಸಿ.ಎಸ್.ಆರ್. ನಿಧಿ ಶೈಕ್ಷಣಿಕಕ್ಕೆ ವಿನಿಯೋಗಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಕೃಷಿ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು, ಜಾತಿ ಮತ ತೊರೆದು ಮಾನವರೆಲ್ಲರೂ ಒಂದೇ ನಾವೆಲ್ಲಾ ಭಾರತೀಯರು ಎಂಬ ಭಾವನೆ ಅಳವಡಿಸಿ ಕೊಳ್ಳಬೇಕು, ನಾನು ಸಹ ಸಾವಿರಾರು ಮಂದಿಯ ಶಿಕ್ಷಣಕ್ಕೆ ನೆರವು ನೀಡಿದ್ದೇನೆ. ಅದೇ ರೀತಿ ಮಲ್‌ಬಾರ್ ಚಾಲರಿಟಬಲ್ ಟ್ರಸ್ಟ್ ಎಲೆಯ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು,

ಟ್ರಸ್ಟ್‌ನಿಂದ ₹೨೧೫ ಕೋಟಿ ವಿನಿಯೋಗ

ಮಲಬಾರ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಶಪೋರದ್ದೀನ್ ಪ್ರಸ್ತಾವಿಕ ನುಡಿಗಳಾಡಿ, ಕಳೆದ ೧೯೯೯ರಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ ಕಲ್ಕತ್ತದಲ್ಲಿ ಪ್ರಥಮವಾಗಿ ಪ್ರಾರಂಭಿಸಿದ್ದು, ಇಂದು ೧೭ ರಾಷ್ಟ್ರಗಳಲ್ಲಿ ತನ್ನ ಶಾಖೆ ಹೊಂದಿದ್ದು ಸುಮಾರು ೮೦೦ ಜಾಗಗಳಲ್ಲಿ ತನ್ನು ಮಳಿಗೆಗಳನ್ನು ಪ್ರಾರಂಭಿಸಿದೆ. ಸಿ.ಎಸ್.ಆರ್. ನಿಧಿ ೨೧೫ ಕೋಟಿ ವಿನಿಯೋಗಿಸಿದೆ. ಈವರೆಗೆ ೭೭ ಸಾವಿರ ವಿದ್ಯಾರ್ಥಿಗಳಿಗೆ, ಕರ್ನಾಟಕದಲ್ಲಿ ೭೭ ಕಾಲೇಜುಗಳಲ್ಲಿ ೨೨ ಸಾವಿರ ವಿದ್ಯಾರ್ಥಿಗಳಿಗೆ, ಜಿಲ್ಲೆಯ ೧೫ ಕಾಲೇಜುಗಳಲ್ಲಿ ೬೧೫ ಮಂದಿ ವಿದ್ಯಾರ್ಥಿಗಳಿಗೆ ೫೫.೫೦ ಲಕ್ಷ ರೂ ವಿದ್ಯಾರ್ಥಿ ವೇತನವನ್ನು ಹಂಚಿಕೆ ಮಾಡುತ್ತಿದೆ ಎಂದು ವಿವರಿಸಿದರು.

ಡಿಡಿಪಿಯು ರಾಮಚಂದ್ರಪ್ಪ, ಸರ್ಕಾರಿ ಮಹಿಳಾ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಬಂಗಾರಪೇಟೆ ಕಾಲೇಜಿನ ಪ್ರಾಂಶುಪಾಲ ಸುಬ್ರಮಣ್ಯಂ, ಕೆ.ಜಿ.ಎಫ್. ಕಾಲೇಜಿನ ಪ್ರಾಂಶುಪಾಲ ಮುನಿರತ್ನ, ಮಲಬಾರ್ ಚಾರಿಟಬಲ್ ಟ್ರಸ್ಟ್ ಶಾಖೆಯ ವ್ಯವಸ್ಥಾಪಕ ಸಂತೋಷ್, ಜೀತೇಶ್, ಕ.ಸಾ.ಪ. ಮಾಜಿ ಅಧ್ಯಕ್ಷರಾದ ಜೆ.ಜಿ.ನಾಗರಾಜ್, ನಾಗನಂದ ಕೆಂಪರಾಜ್, ಟ್ರಸ್ಟ್ ಶಾಖೆಯ ಸಿಬ್ಬಂದಿಗಳಾದ ಸಾಧಿಕ್, ರಾಘವೇಂದ್ರ ಇದ್ದರು. ಉಪನ್ಯಾಸಕಿ ಸುಜಾತ ನಿರೂಪಿಸಿ, ಉಪನ್ಯಾಸಕ ಅಶ್ವಥ್‌ಗೌಡ ಸ್ವಾಗತಿಸಿದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು