ರಂಗಭೂಮಿ ಜ್ಞಾನ ವೃದ್ದಿಗೆ ಸಹಕಾರಿ: ನಟ ವಿನೋದ್ ರಾಜ್

KannadaprabhaNewsNetwork |  
Published : Apr 10, 2026, 01:45 AM IST
ಪೋಟೋ 1 : ದಾಬಸ್‍ಪೇಟೆ ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆ ಹಾಗೂ ಉಲ್ಲಾಸ್ ಮಕ್ಕಳ ರಂಗಭೂಮಿ ಶಾಲೆಯ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜೂನಿಯರ್ ಡ್ರಾಮಾ ಕ್ಯಾಂಪ್ ಗೆ ಚಿತ್ರ ನಟ ವಿನೋದ್ ರಾಜ್ ಚಾಲನೆ ನೀಡಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ರಂಗಭೂಮಿ ಜ್ಞಾನ ಹಾಗೂ ಸಂಸ್ಕಾರ ವೃದ್ಧಿಗೆ ಸಹಕಾರಿ ಎಂದು ಚಿತ್ರ ನಟ ವಿನೋದ್ ರಾಜ್ ತಿಳಿಸಿದರು

ದಾಬಸ್‍ಪೇಟೆ: ರಂಗಭೂಮಿ ಜ್ಞಾನ ಹಾಗೂ ಸಂಸ್ಕಾರ ವೃದ್ಧಿಗೆ ಸಹಕಾರಿ ಎಂದು ಚಿತ್ರ ನಟ ವಿನೋದ್ ರಾಜ್ ತಿಳಿಸಿದರು.

ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆ ಹಾಗೂ ಉಲ್ಲಾಸ್ ಮಕ್ಕಳ ರಂಗಭೂಮಿ ಶಾಲೆಯ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜೂನಿಯರ್ ಡ್ರಾಮಾ ಕ್ಯಾಂಪ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಲೆ ಇನ್ನಷ್ಟು ಬೆಳೆಯಬೇಕು. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿದ್ದು ಮಕ್ಕಳಿಗೆ ರಂಗಭೂಮಿಯೇ ಮೆಟ್ಟಿಲು ಇಲ್ಲಿ ಕಲಿತ ಕಲೆ ಮುಂದೆ ಬೆಳ್ಳಿ ತೆರೆ ಹಾಗೂ ಕಿರುತೆರೆ ಮೇಲೆ ರಂಜಿಸುವಂತಾಗಲಿ ಎಂದರು.

ಕರ್ನಾಟಕ ಸಿನಿಮಾ ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್ ಮಾತನಾಡಿ, ಕನ್ನಡ ಸಿನೆಮಾ ರಂಗ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಸಂಪಾದಿಸಿದ್ದು, ಹೆಸರು ಗಳಿಸಿರುವ ನಟರ ಮೂಲ ರಂಗಭೂಮಿಯೇ ಆಗಿದೆ, ಮಗು ಒಂದು ನಾಟಕವನ್ನು ನೆನಪಿಟ್ಟುಕೊಂಡು ಅಭಿನಯಿಸಿದರೆ ಮುಂದೆ ಶೈಕ್ಷಣಿಕವಾಗಿಯೂ ನೆನಪಿನ ಶಕ್ತಿ ಹೆಚ್ಚಾಗಿ ಜ್ಞಾನವೃದ್ಧಿ ಜೊತೆಗೆ ಕೀಳರಿಮೆ ಹೋಗಲಾಡಿಸಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಂತಹ ಕ್ಯಾಂಪ್‍ಗಳು ಸಹಕಾರಿಯಾಗುತ್ತವೆ ಎಂದರು.

ಶಾಲಾ ಸಂಸ್ಥಾಪಕ ಅಂಚೆಮನೆ ರಾಜಶೇಖರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ವಿದ್ಯಾರ್ಥಿಗಳು ಆಸಕ್ತಿ ವಹಿಸಲು ವಿಜ್ಞಾನ ವಸ್ತು ಪ್ರದರ್ಶನ, ಕ್ರೀಡೋತ್ಸವದಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವಾನಂದ ಸಿಂದಗಿ, ಶಾಲಾ ಕಾರ್ಯದರ್ಶಿ ಸ್ವಣಾಂಬ ರಾಜಶೇಖರ್, ಪ್ರಾಂಶುಪಾಲೆ ಶಿಲ್ಪ ಸೇರಿದಂತೆ ಶಿಕ್ಷಕರು, ಪೋಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮೂಹಿಕ ವಿವಾಹ, ಸ್ವರ್ಗದಲ್ಲಿ ಮದುವೆ ಆದಂತೆ: ಗುರುಮಹಾಂತ ಶ್ರೀ
ಪುಟ...2ಕ್ಕೆ ಆಂಕರ್ ಪಕ್ಕಪ್ರಜಾಸೇವೆಯಲ್ಲಿ ಸಮಸ್ಯೆಗಳಿಗೆ ತಕ್ಷಣ ಪರಿಹಾರ: ಶಾಸಕ ವೈದ್ಯ