ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕೂಚ್ ಬೆಹಾರ್ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನವಾದ ಶನಿವಾರ ಪ್ರಕರ್ ಚತುರ್ವೇದಿ (110), ಹರ್ಷಿಲ್ ಧರ್ಮನಿ (102) ಅವರ ಶತಕದ ನೆರವಿನಿಂದ ಕರ್ನಾಟಕ ತಂಡ ಪಂದ್ಯವನ್ನು ಬಿಗಿಹಿಡಿತ ಸಾಧಿಸಿದೆ.ಮೊದಲ ದಿನ ಭರ್ಜರಿ ಬ್ಯಾಟಿಂಗ್ ಮಾಡಿದ ಮುಂಬೈ ತಂಡ 6 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತು. ಶನಿವಾರ ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ಎರಡನೇ ದಿನ 52 ರನ್ ಗಳಿಸಿ, ಉಳಿದ 4 ವಿಕೆಟ್‌ಗಳನ್ನು ಕಳೆದುಕೊಂಡು 380ಕ್ಕೆ ಆಲೌಟ್ ಆಯಿತು.
ಬಳಿಕ ಬ್ಯಾಟಿಂಗ್‌ಗೆ ಆಗಮಿಸಿದ ಕರ್ನಾಟಕ ತಂಡದ ಆರಂಭಿಕರಾದ ಪ್ರಕರ್ ಚತುರ್ವೇದಿ ಹಾಗೂ ಕಾರ್ತಿಕ್ ಎಸ್.ಯು. ಶತಕದ ಜೊತೆಯಾಟ ಆಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ತಂಡದ ಮೊತ್ತ 109 ಆಗಿದ್ದಾಗ ಅರ್ಧ ಶತಕ ಬಾರಿಸಿದ್ದ ಕಾರ್ತಿಕ್ ಕ್ಯಾಚ್ ನೀಡಿ, ಹೊರನಡೆದರು. ಬಳಿಕ ಬ್ಯಾಟಿಂಗ್‌ಗೆ ಆಗಮಿಸಿದ ಹರ್ಷಿಲ್ ಧರ್ಮನಿ, ಪ್ರಖರ್ ಚತುರ್ವೇದಿ ಅವರಿಗೆ ಉತ್ತಮ ಸಾಥ್ ನೀಡಿದರು.ಬಿರುಸಿನ ಆಟ, ಶತಕಗಳು:
ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿದ ಇವರಿಬ್ಬರೂ ಲಂಚ್ ಬ್ರೇಕ್ ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಒಟ್ಟು 187 ಎಸೆತಗಳನ್ನು ಎದುರಿಸಿದ ಪ್ರಕರ್ ಚತುವೇದಿ 14 ಬೌಂಡರಿ ಮೂಲಕ 110 ರನ್ ಪೇರಿಸಿದರು. ಹರ್ಷಿಲ್ ಧರ್ಮನಿ ಕೂಡ 135 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್, 10 ಬೌಂಡರಿ ಸಹಿತ 102 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು.ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 1 ವಿಕೆಟ್ ನಷ್ಟಕ್ಕೆ 281 ಗಳಿಸಿದೆ. ಶತಕ ಬಾರಿಸಿ ಮಿಂಚಿದ ಹರ್ಷಿಲ್ ಧರ್ಮಣಿ, ಪ್ರಕರ್ ಚತುವೇದಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- - - ಸ್ಕೋರ್ ವಿವರ:ಮುಂಬೈ: ಮೊದಲ ಇನಿಂಗ್ಸ್ 113.5 ಓವರ್‌ಗಳಲ್ಲಿ 380ಕರ್ನಾಟಕ: ಮೊದಲ ಇನ್ನಿಂಗ್ 64 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 281
ಪ್ರಕರ್ ಚತುವೇದಿ: 110 (187) ನಾಟೌಟ್ಎಸ್.ಯು. ಕಾರ್ತಿಕ್: 50 (67) ಸಿ ತನಿಷ್ ಮೆಹರ್, ಬಿ ಪ್ರೇಮ್ ದೇವ್ಕರ್
ಹರ್ಷಿಲ್ ಧರ್ಮಿಣಿ: 102 (135) ನಾಟೌಟ್- - -
-13ಎಸ್‌ಎಂಜಿಕೆಪಿ10: ಪ್ರಕರ್ ಚತುರ್ವೇದಿ-13ಎಸ್‌ಎಂಜಿಕೆಪಿ11: ಹರ್ಷಿಲ್ ಧರ್ಮನಿ