ಮಾರಿಕಾಂಬ ದೇವಿ ಜಾತ್ರೆಗೆ ಸಹಕಾರ ಅಗತ್ಯ: ಕೆ.ಗುರುರಾಜ್

KannadaprabhaNewsNetwork |  
Published : Jan 08, 2026, 01:30 AM IST
ಫೋಟೋ 7 ಎ, ಎನ್, ಪಿ 2 ಆನಂದಪುರ ಇತಿಹಾಸ ಪ್ರಸಿದ್ಧ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರೆಯ ಕ್ಯಾಲೆಂಡರ್ ನನ್ನ ಗ್ರಾ. ಪಂ. ಅಧ್ಯಕ್ಷ ಕೆ. ಗುರುರಾಜ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧ ಆನಂದಪುರ ಕಡ್ಲೆಹಂಕ್ಲು ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲು ಭಕ್ತರ ಸಹಕಾರ ಅತ್ಯಗತ್ಯವಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಕೆ.ಗುರುರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಇತಿಹಾಸ ಪ್ರಸಿದ್ಧ ಆನಂದಪುರ ಕಡ್ಲೆಹಂಕ್ಲು ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲು ಭಕ್ತರ ಸಹಕಾರ ಅತ್ಯಗತ್ಯವಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಕೆ.ಗುರುರಾಜ್ ತಿಳಿಸಿದರು.

ಅವರು ಇತಿಹಾಸ ಪ್ರಸಿದ್ಧ ಶ್ರೀ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಾಲಯದಲ್ಲಿ ಮಂಗಳವಾರ ಜಾತ್ರೆಯ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿಯ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಂಪ್ರದಾಯದಂತೆ ಶೂನ್ಯ ಮಾಸದಲ್ಲಿ ಮರ ಕಡಿಯುವ ಶಾಸ್ತ್ರದೊಂದಿಗೆ ಆರಂಭವಾಗಿದೆ, ಜಾತ್ರಾ ವ್ಯಾಪ್ತಿಗೆ ಒಳಪಡುವ ಸುತ್ತ ಮುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ವೈಭವದ ಜಾತ್ರೆಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಜಾತ್ರಾ ಸಮಿತಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಮಾರ್ಚ್ 10ರ ಮಂಗಳವಾರದಿಂದ 16ರವವರೆಗೆ 7 ದಿನಗಳ ಕಾಲ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರೆ ವೈಭವದಿಂದ ನಡೆಯಲಿದೆ. ಅಲ್ಲದೆ ಮಾರಿಕಾಂಬ ದೇವಿಯ ತವರು ಮನೆಯಲ್ಲಿ ಶಿಲಾಮಯ ದೇವಾಲಯದ ನಿರ್ಮಾಣ ಕೊನೆಯ ಹಂತಕ್ಕೆ ತಲುಪಿದೆ. ಭಕ್ತರು ತನು ಮನ ಧನದೊಂದಿಗೆ ಸಹಕರಿಸಬೇಕೆಂದರು.

ಜ. 12ರ ಸೋಮವಾರದಂದು ಜಾತ್ರಾ ಸಮಿತಿ ವತಿಯಿಂದ ಜಾತ್ರೆಯ ಅಮ್ಯೂಸ್ಕೆಂಟ್, ದೀಪಾಲಂಕಾರ, ಅಂಗಡಿ ಮಳಿಗೆಗಳು, ಹಾಗೂ ದೇವಿಯ ಮಂಟಪ ನಿರ್ಮಾಣಕ್ಕೆ ಬಹಿರಂಗ ಹರಾಜು ಕರೆಯಲಾಗಿದೆ. ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಮಿತಿ ಸದಸ್ಯ ರವಿಕುಮಾರ್ ತಿಳಿಸಿದರು. ಸಮಿತಿ ಉಪಾಧ್ಯಕ್ಷ ವೇಣಾಕ್ಷ, ಖಜಾಂಚಿ ಈರಪ್ಪ, ರಾಜೇಂದ್ರ ಗೌಡ, ಸುರೇಶ್, ಜಯಪ್ಪ, ರಾಘವೇಂದ್ರ, ನಾರಾಯಣ, ಕೃಷ್ಣಮೂರ್ತಿ, ಮಂಜುನಾಥ್ ಯಾದವ್, ಶಿವಾನಂದ, ಜಗದೀಶ್, ಗಣಪತಿ, ನಾರಿ ಲೋಕಪ್ಪ, ರಾಜು ದೇವಾಡಿಗ್, ಜನಾರ್ಧನ್, ಗುರುರಾಜ್, ಸುತ್ತಮುತ್ತಲಿನ ಗ್ರಾಮಗಳ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ