ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಹುಣಸಗಿ ಪಟ್ಟಣ ಪತ್ತಿನ ಸಹಕಾರ ಸಂಘದ 8ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಷೇರುದಾರರು ಸಮಯಕ್ಕೆ ಸರಿಯಾಗಿ ಸಾಲ ಪಡೆದು ಮರುಪಾವತಿ ಮಾಡಿರುವುದು ಸಂಘದ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಸಂಘವು ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಸಭೆಯ ಆರಂಭದಲ್ಲಿ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಲಾಯಿತು. ಸಹಕಾರಿ ಪಿತಾಮಹ ಎಸ್.ಎಸ್. ಪಾಟೀಲ್ ಕಣಗಿನಾಳ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹಾಂತೇಶ ಅವರು ವಾರ್ಷಿಕ ವರದಿ ವಾಚಿಸಿ, ಪ್ರಸ್ತುತ ಸಾಲಿನಲ್ಲಿ ಲಾಭಾಂಶವನ್ನು ಕಟ್ಟಡ ನಿಧಿಗೆ ವರ್ಗಾಯಿಸುವ ಪ್ರಸ್ತಾವನೆಗೆ ಷೇರುದಾರರು ಚಪ್ಪಾಳೆ ತಟ್ಟುವ ಮೂಲಕ ಒಪ್ಪಿಗೆ ಸೂಚಿಸಿದರು. ನೀಲಕಂಠ ಹೊನಕಲ್ ಪ್ರಸ್ತಾವನೆ ಅನುಮೋದಿಸಿದರು. ಉಪಾಧ್ಯಕ್ಷ ಶಾಂತಗೌಡ ಅರಕೇರಿ, ನಿರ್ದೇಶಕರಾದ ಚಂದ್ರಶೇಖರ ದೇಸಾಯಿ, ಗುರಲಿಂಗಣ್ಣ ಸಜ್ಜನ್, ಚಂದ್ರಶೇಖರ ಬೋರಮಗುಂಡ, ಪದ್ಮಾವತಿ ದೇಶಪಾಂಡೆ, ಅಮರೇಶ ವೈಲಿ, ಶರಣಬಸವ ಬಾ.ಪಾಟೀಲ್, ಲಕ್ಷ್ಮಣ ಚವ್ಹಾಣ, ದೇವು ಬೈಚಬಾಳ ಸೇರಿದಂತೆ ಇತರರಿದ್ದರು. ಲೆಕ್ಕಿಗ ಪ್ರಭು ನೂಲಿನ್ ಸ್ವಾಗತಿಸಿದರು. ಹರೀಶ ಹಂದಿಗನೂರು ವಂದಿಸಿದರು.