ಆ. 2 ರಂದು ಸಹಕಾರ ಸಂಘದ ರಜತ ಮಹೋತ್ಸವ

KannadaprabhaNewsNetwork |  
Published : Jul 29, 2026, 01:15 AM IST
4 | Kannada Prabha

ಸಾರಾಂಶ

ನಗರದ ಹೊರಪೇಟೆಯ ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂಭ ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಏರ್ಪಾಟಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರುನಗರದ ಹೊರಪೇಟೆಯ ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂಭ ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಏರ್ಪಾಟಾಗಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ಟಿ.ಎಚ್. ಶಿವಾನಂದ್ ಅವರು, 2001 ರಲ್ಲಿ ಆರಂಭವಾದ ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ 25ವರ್ಷತುಂಬಿದೆ.ಈ ಅವಧಿಯ ಲ್ಲಿ ಹಂತಹಂತವಾಗಿ ಪ್ರಗತಿ ಸಾಧಿಸುತ್ತಾ ಸಂಘ ಬೆಳವಣಿಗೆ ಕಂಡಿದೆ.11ಲಕ್ಷ ಷೇರು ಮೊತ್ತ ಹಾಗೂ 31 ಲಕ್ಷರು.ಪ್ರಾಥಮಿಕ ಬಂಡವಾಳದಿಂದ ಸಂಘ ಆರಂಭವಾಯಿತು ಎಂದರು. ರಜತ ಮಹೋತ್ಸವಸಮಾರಂಭದಲ್ಲಿ ಕುರುಹಿನಶೆಟ್ಟಿ ಸಮಾಜದ ಹುಬ್ಬಳ್ಳಿಯ ನೀಲಕಂಠಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ, ಮಾಜಿ ಸಚಿವ ಗಂಗಾವತಿಯ ಮಲ್ಲಿಕಾರ್ಜುನ ನಾಗಪ್ಪ, ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯಕೇಶವಪ್ರಸಾದ್, ಕುರುಹಿನಶೆಟ್ಟಿಕೇಂದ್ರ ಸಂಘದಅಧ್ಯಕ್ಷ ಬಿ.ಲಿಂಗೇಶ್ ಅತಿಥಿಗಳಾಗಿ ಭಾಗವಹಿಸುವರುಎಂದು ತಿಳಿಸಿದರು. ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದಉಪಾಧ್ಯಕ್ಷಎಸ್.ಎನ್, ಬಸವರಾಜು, ನಿರ್ದೇಶಕರಾದ ಬಿ.ಎನ್. ಜಯಚಂದ್ರ, ಬಿ.ಎಲ್. ಗೋವಿಂದಶೆಟ್ಟಿ, ಎನ್.ಎಸ್. ಕೃಷ್ಣಮೂರ್ತಿ, ಟಿ.ಆರ್.ದಿನೇಶ್‌ಕುಮಾರ್, ಎಸ್.ಎಸ್. ಸೋಮಶೇಖರ್, ಟಿ.ಆರ್.ಮುಕ್ತಾಂಭ ಪತ್ರಿಕಾಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಿಗೈಲಿ ಮಲಗುಂಡಿ ಸ್ವಚ್ಛತೆ: ಕ್ರಮಕ್ಕೆ ಡಿಎಸ್ಸೆಸ್ ಒತ್ತಾಯ
ಕೌಶಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ದಾವಿವಿ ಒತ್ತು