ಪರಿಷತ್‌ ಎಲೆಕ್ಷನ್‌: ಸುಶಿಕ್ಷಿತರಿಂದ್ಲೇ ಬೇಕಾಬಿಟ್ಟಿ ಮತದಾನ

KannadaprabhaNewsNetwork |  
Published : Oct 29, 2026, 01:45 AM IST
ಬಿಜೆಪಿ ವಿಜಯೋತ್ಸವ | Kannada Prabha

ಸಾರಾಂಶ

ವಿಧಾನ ಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದ್ದು, ಒಟ್ಟು ನಾಲ್ಕೂ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ 34,051 ಮತಗಳು ತಿರಸ್ಕೃತಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ವಿಧಾನ ಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದ್ದು, ಒಟ್ಟು ನಾಲ್ಕೂ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ 34,051 ಮತಗಳು ತಿರಸ್ಕೃತಗೊಂಡಿವೆ.

ಈ ಚುನಾವಣೆಯಲ್ಲಿ ಶಿಕ್ಷಕರು, ಪದವೀಧರರೇ ಮತದಾರರಾಗಿದ್ದು, ಬ್ಯಾಲೆಟ್‌ ಪೇಪರ್‌ನಲ್ಲಿ ಮತ ಚಲಾಯಿಸಲಾಗಿದೆ. ಪ್ರಜ್ಞಾವಂತ, ವಿದ್ಯಾವಂತ ಮತದಾರರು ಚಲಾಯಿಸಿರುವ ಮತಗಳ ಪೈಕಿ ಈ ಪ್ರಮಾಣದಲ್ಲಿ ಮತಗಳು ಅಮಾನ್ಯವಾಗಿರುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಕರು ಮತ್ತು ಪದವೀಧರರೇ ಮತ ಚಲಾವಣೆಯಲ್ಲಿ ಈ ರೀತಿ ಎಡವಟ್ಟು ಮಾಡಿದರೆ, ಸಾಮಾನ್ಯ ಜನರ ಕಥೆಯೇನು ಎಂಬ ಪ್ರಶ್ನೆ ಉದ್ಭವಿಸಿದೆ.

ಬ್ಯಾಲೆಟ್‌ ಪೇಪರ್‌ ಮತದಾನ ಹೊಸ ಪದ್ಧತಿ ಏನಲ್ಲ. ಆದರೂ ಪದವೀಧರ ಮತ್ತು ಶಿಕ್ಷಕಕ ಮತದಾರರು ಮತ ಚಲಾವಣೆ ಮಾಡುವಾಗ ತಪ್ಪು ಮಾಡುತ್ತಿರುವುದು ಅವಮಾನಕರವಾಗಿದೆ. ಮತದಾನದ ಹಕ್ಕು ಪಡೆಯಲು ಎಷ್ಟೋ ಜನ ಹೋರಾಟವನ್ನೇ ಮಾಡುತ್ತಾರೆ. ಆದರೆ, ತಮಗಿರುವ ಹಕ್ಕನ್ನು ಸರಿಯಾಗಿ ಚಲಾಯಿಸುವಲ್ಲಿ ಬುದ್ಧಿವಂತರು ಎಂದು ಕರೆಸಿಕೊಳ್ಳುವ ಪದವೀಧರರು ಹಾಗೂ ಶಿಕ್ಷಕರು ಪ್ರಮಾದ ಎಸಗುತ್ತಿರುವುದು ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.

ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ 97,398 ನೋಂದಾಯಿತ ಮತದಾರರ ಪೈಕಿ 73,658(ಶೇ.75.62)ಮತಗಳು ಚಲಾವಣೆಯಾಗಿವೆ. ಈ ಪೈಕಿ 10,245 ಮತಗಳು ಅಸಿಂಧುಗೊಂಡಿವೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 34,784 ನೋಂದಾಯಿತ ಮತದಾರರ ಪೈಕಿ 30,250 (ಶೇ.86.97) ಮತಗಳು ಚಲಾವಣೆಯಾಗಿವೆ. ಈ ಪೈಕಿ 1,873 ಮತಗಳು ತಿರಸ್ಕೃತಗೊಂಡಿವೆ.

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ 1,83,888 ನೋಂದಾಯಿತ ಮತದಾರರ ಪೈಕಿ 1,35,321(ಶೇ.73.58) ಮತಗಳು ಚಲಾವಣೆಯಾಗಿವೆ. ಈ ಪೈಕಿ 20,076 ಮತಗಳು ಅಸಿಂಧುಗೊಂಡಿವೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 27,405 ನೋಂದಾಯಿತ ಮತದಾರರ ಪೈಕಿ 22,468 (ಶೇ.81.98) ಮತಗಳು ಚಲಾವಣೆಯಾಗಿವೆ. ಈ ಪೈಕಿ 1,857 ಮತಗಳು ಅಮಾನ್ಯಗೊಂಡಿವೆ.

-ಬಾಕ್ಸ್‌-ಕ್ಷೇತ್ರವಾರು ಅಸಿಂಧುಗೊಂಡ ಮತಗಳ ಮಾಹಿತಿ:

ಕ್ಷೇತ್ರಚಲಾವಣೆಯಾದ ಮತಅಸಿಂಧು ಮತ

ಆಗ್ನೇಯ ಪದವೀಧರ1,35,32120,076

ಪಶ್ಚಿಮ ಪದವೀಧರ73,65810,245

ಈಶಾನ್ಯ ಶೀಕ್ಷಕ30,2501,873

ಬೆಂಗಳೂರು ಶಿಕ್ಷಕ22,4681,857

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್