ಭದ್ರಾವತಿ: ನಗರದ ಭದ್ರಾನದಿ ಸಮೀಪದ ಅಡಕೆ ತೋಟವೊಂದರ ಕಟ್ಟಡದಲ್ಲಿ ಅಪಾರ ಪ್ರಮಾಣದ ಗೋವಿನ ಮೂಳೆಗಳು ಪತ್ತೆಯಾಗಿರುವ ಘಟನೆ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಹಿತಿ ಆಧಾರದ ಮೇರೆಗೆ ಪಿಎಸ್ ಐ ಶರಣಪ್ಪ ಹಾಂದ್ರಗಲ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿಯಲ್ಲಿ ಅಪಾರ ಪ್ರಮಾಣದ ಗೋಮಾಂಸ ಹಾಗೂ ಒಂದು ಕೊಠಡಿಯಲ್ಲಿ ದನಗಳ ಬುರುಡೆ, ಗೋವಿನ ತಲೆ, ಕೊಂಬು, ಚರ್ಮ, ಎಲುಬುಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಅಂದಾಜು ₹20 ಸಾವಿರ ಮೌಲ್ಯದ 2ರಿಂದ 3 ಟನ್ ತೂಕದ ಗೋವಿನ ಮೂಳೆ ಭಾಗಗಳು, ಮಾಂಸ ಮಾರಾಟ ಮಾಡಿದ್ದು ತಿಳಿದುಬಂದಿದೆ. ₹600 ನಗದು ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹಳೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.- - - -ಡಿ3-ಬಿಡಿವಿಡಿ3: