ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ.ಜಿಲ್ಲಾ ಬಿಜೆಪಿಯ ಏಳು ಮಂದಿ ಉಪಾಧ್ಯಕ್ಷರು, ಮೂರು ಮಂದಿ ಪ್ರಧಾನ ಕಾರ್ಯದರ್ಶಿ, ಎಂಟು ಮಂದಿ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಸೇರಿದಂತೆ 20 ಮಂದಿಯ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಎಲ್ಲ ಮಂಡಲಗಳಿಗೆ ಪ್ರಾತಿನಿಧ್ಯ ಸಿಗುವ ರೀತಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪದಾಧಿಕಾರಿಗಳ ನಿಯುಕ್ತಿ ಮಾಡಿದ್ದಾರೆ. ಅಲ್ಲದೆ ಮಹಿಳಾ ಮೋರ್ಚಾ, ಯುವ ಮೋರ್ಚಾ, ಎಸ್ಸಿ ಮೋರ್ಚಾ, ಎಸ್‌ಟಿ ಮೋರ್ಚಾ, ರೈತ ಮೋರ್ಚಾಗಳಿಗೆ ನೇಮಕ ಮಾಡಲಾಗಿದೆ.
ಜಿಲ್ಲಾ ಪದಾಧಿಕಾರಿಗಳು: ಸುನಿಲ್ ಆಳ್ವ ಮೂಲ್ಕಿ, ಜಯಂತ್ ಪೂಜಾರಿ ಬೆಳ್ತಂಗಡಿ, ತಿಲಕ್‌ರಾಜ್ ಕೃಷ್ಣಾಪುರ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ರಾಕೇಶ್ ರೈ ಕೆಡೆಂಜಿ, ಶಾಂತಿಪ್ರಸಾದ್ ಹೆಗ್ಡೆ( ಉಪಾಧ್ಯಕ್ಷರು), ಪ್ರೇಮಾನಂದ ಶೆಟ್ಟಿ ಮಂಗಳೂರು, ಯತೀಶ್ ಆರ್ವಾರ್ ಸುಳ್ಯ ಹಾಗೂ ಕಿಶೋರ್ ಬೊಟ್ಯಾಡಿ( ಪ್ರಧಾನ ಕಾರ್ಯದರ್ಶಿ), ವಿನಯ ಮುಳುಗಾಡು, ದೇವಪ್ಪ ಪೂಜಾರಿ ಬಂಟ್ವಾಳ, ಕವಿತಾ ದಿನೇಶ್ ಮೂಡುಶೆಡ್ಡೆ, ವಸಂತಿ ಕುಲಾಲ್ ಮಚ್ಚಿನ, ಪೂರ್ಣಿಮಾ, ವಿದ್ಯಾಗೌರಿ ಪುತ್ತೂರು, ದಿನೇಶ್ ಅಮ್ಟೂರ್, ಸೀತಾರಾಮ ಬೆಳಾಲ್( ಕಾರ್ಯದರ್ಶಿ), ಸಂಜಯ ಪ್ರಭು(ಕೋಶಾಧಿಕಾರಿ) ಹಾಗೂ ಅರವಿಂದ ಬೆಂಗ್ರೆ( ಕಾರ್ಯಾಲಯ ಕಾರ್ಯದರ್ಶಿ) ಇವರನ್ನು ನೇಮಕ ಮಾಡಲಾಗಿದೆ.ವಸಂತ್ ಜೆ.ಪೂಜಾರಿ ಮತ್ತು ಮನೋಹರ ಶೆಟ್ಟಿ(ಮಾಧ್ಯಮ ಪ್ರಮುಖ್), ರಾಜ್‌ಗೋಪಾಲ್ ರೈ, ಮೋಹನ್‌ರಾಜ್ ಕೆ.ಆರ್. ಹಾಗೂ ಅರುಣ್ ಶೇಟ್(ಜಿಲ್ಲಾ ವಕ್ತಾರ), ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಧಿರೇಶ್ ಕೆ., ಅಕ್ಷಯ ಆಳ್ವ ಮತ್ತು ಕಾರ್ತಿಕ್ ರಾವ್ ಗಂಜಿಮಠ ಇವರನ್ನು ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
7 ಮಂಡಲ ಅಧ್ಯಕ್ಷರು: ಬೆಳ್ತಂಗಡಿ ಮಂಡಲಕ್ಕೆ ಶ್ರೀನಿವಾಸ ರಾವ್, ಮೂಡುಬಿದಿರೆಗೆ ದಿನೇಶ್ ಪುತ್ರನ್, ಮಂಗಳೂರು ನಗರ ಉತ್ತರಕ್ಕೆ ರಾಜೇಶ್ ಕೊಟ್ಟಾರಿ, ಮಂಗಳೂರು ನಗರ ದಕ್ಷಿಣಕ್ಕೆ ರಮೇಶ್ ಕಂಡೆಟ್ಟು, ಮಂಗಳೂರಿಗೆ ಜಗದೀಶ್ ಆಳ್ವ ಕುವೆತ್ತಬೈಲ್, ಬಂಟ್ವಾಳಕ್ಕೆ ಚೆನ್ನಪ್ಪ ಕೋಟ್ಯಾನ್ ಹಾಗೂ ಸುಳ್ಯಕ್ಕೆ ವೆಂಕಟ ವಳಲಂಬೆ ಇವರನ್ನು ನೇಮಕ ಮಾಡಲಾಗಿದೆ.
ಶನಿವಾರ ಬಿಡುಗಡೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಗಳ ಮೊದಲ ಪಟ್ಟಿಯಲ್ಲಿ ಪುತ್ತೂರು ಮಂಡಲ ಅಧ್ಯಕ್ಷರ ಹೆಸರು ಪ್ರಕಟವಾಗಿಲ್ಲ. ಪಕ್ಷದ ನಾಯಕರ ಸೂಚನೆ ಮೇರೆಗೆ ತಾತ್ಕಾಲಿಕ ತಡೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.
ಇದೀಗ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪಟ್ಟಿ ಹೊರಬಿದ್ದಿದ್ದು, ಇನ್ನು ಪುತ್ತೂರು ಮಂಡಲ ಪದಾಧಿಕಾರಿಗಳ ಪಟ್ಟಿ ಪ್ರಕಟ ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಪುತ್ತಿಲ ಪರಿವಾರ ಜತೆಗಿನ ಬಿಕ್ಕಟ್ಟು ಶಮನಕ್ಕೆ ಕೊನೆ ಅವಕಾಶ ಎನ್ನಲಾಗಿದ್ದು, ಎಲ್ಲವೂ ಸರಿಹೋದರೆ, ಅರುಣ್ ಕುಮಾರ್ ಪುತ್ತಿಲರನ್ನು ಬಿಜೆಪಿಗೆ ಬರಮಾಡಿಕೊಂಡು ಪುತ್ತೂರು ಮಂಡಲದ ಜವಾಬ್ದಾರಿ ನೀಡುವ ಸಂಭವ ಇದೆ. ಅಂತಿಮ ಮಾತುಕತೆ ಮುರಿದುಬಿದ್ದರೆ, ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ಪಕ್ಷದ ಸಕ್ರಿಯರೊಬ್ಬರ ಹೆಗಲೇರಲಿದೆ ಎಂದು ಮೂಲಗಳು ತಿಳಿಸಿವೆ.