ಭಾರತೀಯರ ಗೋ ಆರಾಧನೆ ಶ್ರೇಷ್ಠವಾದದ್ದು: ಲಿಯಾಖಾತ್ ಆಲಿ

KannadaprabhaNewsNetwork |  
Published : Nov 04, 2024, 12:20 AM IST
3ಗೋಪೂಜೆ | Kannada Prabha

ಸಾರಾಂಶ

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಪಂಚವರ್ಣ ಮಹಿಳಾ ಮಂಡಲದ ಮಹಿಳೆಯರು ಗೋ ಮಾತೆಗೆ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕೋಟ

ಗೋವುಗಳಿಗೆ ಭಾರತದಲ್ಲಿ ಮಹತ್ವವಾದ ಸ್ಥಾನ ನೀಡಿ ಆರಾಧನೆ ನಡೆಯುತ್ತದೆ, ಅದರಲ್ಲಿ ದೀಪಾವಳಿಗೆ ಮಹತ್ತರ ಸ್ಥಾನ ಇದೆ ಎಂದು ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಲಿಯಾಖಾತ್ ಆಲಿ ಹೇಳಿದರು.

ಅವರು ಕೋಟದ ಪಂಚವರ್ಣ ಯುವಕ ಮಂಡಲ - ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮೂಡುಗೋಪಾಡಿ ರಫೀಕ್ ಸಾಹೇಬರ ಹೈನುಗಾರಿಕಾ ಫಾರಂನಲ್ಲಿ ಹಮ್ಮಿಕೊಂಡ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸಾಮರಸ್ಯ ಸಂಸ್ಕೃತಿ ವಿಶಿಷ್ಟವಾದದ್ದು, ಇಲ್ಲಿ ಎಲ್ಲ ವರ್ಗದವರು ಗೋವುಗಳನ್ನು ಪೂಜಿಸುವ ಪಂಚವರ್ಣ ಸಂಸ್ಥೆ ಸಾಮರಸ್ಯ ಕಾರ್ಯಕ್ರಮ ಶ್ಲಾಘನೀಯ, ಈ ಮೂಲಕ ಒಂದು ಸಂಘಟನೆ ಈ ರೀತಿಯಲ್ಲೂ ಸಾಮರಸ್ಯದಿಂದ ಕಾರ್ಯನಿರ್ವಹಿಸಬಹುದು ಎಂದು ಸಮಾಜಕ್ಕೆ ತೋರಿಸಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಪಂಚವರ್ಣ ಮಹಿಳಾ ಮಂಡಲದ ಮಹಿಳೆಯರು ಗೋ ಮಾತೆಗೆ ಪೂಜೆ ನೆರವೇರಿಸಿದರು.

ಫಾರಂ ಮುಖ್ಯಸ್ಥ ರಫೀಕ್ ಸಾಹೇಬ್ ಗೋವಿನ ಹೆಸರಿನಲ್ಲಿ ಗಿಡ ನಡುವ ಮೂಲಕ ಪರಿಸರ ಜಾಗೃತಿ ಮೆರೆದರು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಪ್ರ ಮಹಿಳಾ ವೇದಿಕೆಯ ಅಧ್ಯಕ್ಷೆ ವನಿತಾ ಉಪಾಧ್ಯ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಕೋಟ, ಫಾರಂ ಪ್ರಮುಖರಾದ ಹನೀಫ್ ಸಾಹೇಬ್ ಮತ್ತಿತರರು ಇದ್ದರು. ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಹಂದಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಕ ಮಂಡಲದ ಸದಸ್ಯ ಕಾರ್ತಿಕ್ ಎನ್. ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ