-ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಸಚಿವ ಡಿ. ಸುಧಾಕರ್ ಕಿವಿಮಾತು
------ಕನ್ನಡಪ್ರಭ ವಾರ್ತೆ ಹಿರಿಯೂರು
ಕುಡಿತದ ಚಟ ತ್ಯಜಿಸಿ ಸುಂದರ ಮತ್ತು ಆರೋಗ್ಯವಂತ ಬದುಕು ರೂಪಿಸಿಕೊಳ್ಳಲು ಹೊರಟಿರುವ ನಿಮಗೆ ಒಳ್ಳೆಯದಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.ನಗರದ ವಾಲ್ಮೀಕಿ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿ ಪುರ ವಲಯದಿಂದ ಕಳೆದ 8 ದಿನಗಳಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅತಿಯಾದ ಮದ್ಯ ವ್ಯಸನಕ್ಕೆ ಬಿದ್ದ ವ್ಯಕ್ತಿಯು ಸಂಸಾರಗಳ ನೆಮ್ಮದಿ ಕಳೆದು ಮಕ್ಕಳ ಭವಿಷ್ಯಕ್ಕೂ ಸಹಕಾರ ನೀಡದೇ ಇರುವ ಸಾವಿರಾರು ಕುಟುಂಬಗಳು ಕಣ್ಮುಂದೆ ಇವೆ. ಚಟಗಳಿಂದಾಗಿಯೇ ದೊಡ್ಡ ದೊಡ್ಡ ಶ್ರೀಮಂತರು ಬೀದಿಗೆ ಬಿದ್ದು ಏನಕ್ಕೂ ಬರದಂತಾದ ಸ್ಥಿತಿ ತಲುಪಿದ್ದಾರೆ ಎಂದು ಎಚ್ಚರಿಸಿದರು.ಆರೋಗ್ಯ, ನೆಮ್ಮದಿ, ಹಣ, ಗೌರವ ಎಲ್ಲವನ್ನೂ ಹಾಳು ಮಾಡುವ ಮದ್ಯ ವ್ಯಸನದಿಂದ ಹೊರಬರಲು ಇಂತಹ ಶಿಬಿರಗಳು ತುಂಬಾ ಪ್ರಯೋಜನಕಾರಿ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಈ ರೀತಿಯ ಸಾವಿರಾರು ಶಿಬಿರಗಳನ್ನು ನಡೆಸಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ. ಶಿಬಿರಾರ್ಥಿಗಳು ಹೊಸ ಬದುಕು ರೂಪಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಾ ಸಮಾಜದಲ್ಲಿ ಗೌರವ ಪಡೆಯುವ ವ್ಯಕ್ತಿಗಳಾಗಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ನಗರಸಭೆ ಮಾಜಿ ಅಧ್ಯಕ್ಷ ಈ. ಮಂಜುನಾಥ್, ಶಿವರಂಜಿನಿ, ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್, ಸುವರ್ಣ, ನವಜೀವನ ಸಮಿತಿ ಸದಸ್ಯ ಕಿರಣ್ ಕುಮಾರ್, ಯೋಜನಾಧಿಕಾರಿ ನಾಗರಾಜ್ ಹಾಗೂ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬ ವರ್ಗದವರು ಹಾಜರಿದ್ದರು.-----
ಚಿತ್ರ 1,2: ನಗರದ ವಾಲ್ಮೀಕಿ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರಕ್ಕೆ ಸಚಿವ ಡಿ. ಸುಧಾಕರ್ ಭೇಟಿ ನೀಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.