ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಹೋಬಳಿಯ ಗಡ್ಡದನಾಯಕನಹಳ್ಳಿ ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ಕುಡಿತದಿಂದ ಆಗುವಂತಹ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಟುಂಬಗಳಲ್ಲಿ ಸಮಸ್ಯೆಗಳನ್ನು ಮನಸ್ಸಿಗೆ ಹಚ್ಚಿಕೊಂಡು ಮದ್ಯಪಾನ ಮಾಡಿದರೆ ಎಲ್ಲವನ್ನೂ ಮರೆತು ಹೋಗಬಹುದೆನ್ನುವ ಅಪನಂಬಿಕೆ ಬಿಟ್ಟು, ಸಮಸ್ಯೆಗಳಿಗೆ ಕುಡಿತವೊಂದೇ ಪರಿಹಾರವಲ್ಲ, ಕುಟುಂಬವೆಲ್ಲಾ ಅನ್ಯೋನ್ಯತೆಯಿಂದ ಪರಸ್ಪರ ನಂಬಿಕೆಯಿಂದ ಬದುಕಿದರೆ, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಇಲ್ಲವಾದರೆ ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡು ಜೀವಿಸಬೇಕಾಗುತ್ತದೆ. ಆದ್ದರಿಂದ ಕುಡಿತದ ಚಟದಿಂದ ಎಲ್ಲರೂ ದೂರವಿರಬೇಕು. ಧಾರ್ಮಿಕ ಕಾರ್ಯಗಳು, ಧ್ಯಾನ, ಯೋಗದಂತಹ ಕಾರ್ಯಕ್ರಮಗಳಿಂದ ಕುಡಿತದಿಂದ ಮುಕ್ತಿ ಪಡೆಯಲು ಸಾಧ್ಯ ಎಂದರು.ಪರಿವರ್ತನಾ ಕಲಾ ಸಂಸ್ಥೆಯ ಸಂಸ್ಥಾಪಕ ದೇವನಹಳ್ಳಿ ದೇವರಾಜ್ ಮಾತನಾಡಿ, ಸಮಾಜದಲ್ಲಿ ಮದ್ಯವ್ಯಸನ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕಲೆಯ ಮೂಲಕ ಜನರಲ್ಲಿ ಅರಿವು ಮೂಡಿಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಸಂಸ್ಥೆಯ ಕಲಾವಿದರು ಸೇರಿದಂತೆ ಗ್ರಾಮದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.