ಟನ್‌ ಕಬ್ಬಿಗೆ 5500 ರು. ಬೆಲೆ ನಿಗದಿಗೆ ಮಾಡುವಂತೆ ಆಗ್ರಹ

KannadaprabhaNewsNetwork |  
Published : Oct 29, 2026, 01:30 AM IST
ಮುದ್ದನಘಟ್ಟ ಮಹಾಲಿಂಗೇಗೌಡ | Kannada Prabha

ಸಾರಾಂಶ

ಬೀಜ, ಗೊಬ್ಬರ, ನೀರಾವರಿ, ಕೂಲಿ, ಕುಟುಂಬದ ಶ್ರಮ ಮತ್ತು ಬಂಡವಾಳದ ವೆಚ್ಚವನ್ನು ಪರಿಗಣಿಸಿ ರೈತರಿಗೆ ನ್ಯಾಯಯುತ ಪ್ರತಿಫಲವನ್ನು ಖಚಿತಪಡಿಸಬೇಕು. ಘೋಷಿತ ಬೆಲೆ, ಕಟಾವು-ಸಾಗಣೆ ವೆಚ್ಚ ಹಾಗೂ ರೈತನ ಕೈಗೆ ದೊರೆಯುವ ನಿವ್ವಳ ಮೊತ್ತವನ್ನು ಸ್ಪಷ್ಟಪಡಿಸಿ, ಅನಧಿಕೃತ ಕಡಿತಗಳನ್ನು ತಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬಿನ ಸಮಗ್ರ ಉತ್ಪಾದನಾ ವೆಚ್ಚ ಆಧರಿಸಿ ಪ್ರತಿ ಟನ್‌ಗೆ ಕನಿಷ್ಠ 5,500 ರು. ವೈಜ್ಞಾನಿಕ ಹಾಗೂ ಲಾಭದಾಯಕ ಬೆಲೆ ನಿಗದಿಪಡಿಸಬೇಕು ಎಂದು ಎಂ.ಎಂ.ಫೌಂಡೇಷನ್‌ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಬ್ಬಿನ ಕಟಾವು-ಸಾಗಣೆ ವೆಚ್ಚ ನಿಯಂತ್ರಣ, ಬಾಕಿ ಹಣವನ್ನು ಬಡ್ಡಿ ಸಹಿತ ಪಾವತಿಸುವುದು, ತೂಕ ಮತ್ತು ಸಕ್ಕರೆ ಇಳುವರಿ ಪರೀಕ್ಷೆಯಲ್ಲಿ ಪಾರದರ್ಶಕತೆ ಹಾಗೂ ಕಬ್ಬು ಬೆಳೆಗಾರರಿಗೆ ವಿಶೇಷ ನೆರವು ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದು, ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೀಜ, ಗೊಬ್ಬರ, ನೀರಾವರಿ, ಕೂಲಿ, ಕುಟುಂಬದ ಶ್ರಮ ಮತ್ತು ಬಂಡವಾಳದ ವೆಚ್ಚವನ್ನು ಪರಿಗಣಿಸಿ ರೈತರಿಗೆ ನ್ಯಾಯಯುತ ಪ್ರತಿಫಲವನ್ನು ಖಚಿತಪಡಿಸಬೇಕು. ಘೋಷಿತ ಬೆಲೆ, ಕಟಾವು-ಸಾಗಣೆ ವೆಚ್ಚ ಹಾಗೂ ರೈತನ ಕೈಗೆ ದೊರೆಯುವ ನಿವ್ವಳ ಮೊತ್ತವನ್ನು ಸ್ಪಷ್ಟಪಡಿಸಿ, ಅನಧಿಕೃತ ಕಡಿತಗಳನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಹಣವನ್ನು ತಕ್ಷಣ ಬಿಡುಗಡೆಗೊಳಿಸಿ, ಪಾವತಿ ವಿಳಂಬಕ್ಕೆ ಅನ್ವಯಿಸುವ ಬಡ್ಡಿಯನ್ನು ದೊರಕಿಸಬೇಕು. ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿ ಪರೀಕ್ಷೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕು. ಪಕ್ವಗೊಂಡ ಕಬ್ಬಿನ ಸಕಾಲಿಕ ಕಟಾವು, ಸಾಗಣೆ ಮತ್ತು ನುರಿಸುವಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಅರ್ಹ ರೈತರಿಗೆ ಕಟಾವು-ಸಾಗಣೆ ಸಹಾಯಧನ, ಬೆಳೆಸಾಲ ಮರುಪಾವತಿ ಅವಧಿ ವಿಸ್ತರಣೆ, ಬಡ್ಡಿ ಸಹಾಯಧನ ಹಾಗೂ ಬೆಳೆಹಾನಿ ಪರಿಹಾರ ಒಳಗೊಂಡ ವಿಶೇಷ ನೆರವು ಪ್ಯಾಕೇಜ್ ಘೋಷಿಸಬೇಕು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ತುರ್ತು ಸಭೆ ನಡೆಸಿ, ಕಾಲಮಿತಿಯ ಕಾರ್ಯಯೋಜನೆ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.

ಅ.೩೦ರಂದು ಸಮಾಜಸೇವೆ- ಶೈಕ್ಷಣಿಕ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘದಿಂದ ಅ.೩೦ರಂದು ಸಂಜೆ ೪ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ೮ನೇ ವರ್ಷದ ಸಿ. ಗೌರಮ್ಮ ಚಿಕ್ಕಣ್ಣ ಸಮಾಜ ಸೇವಾ ಪ್ರಶಸ್ತಿ ಹಾಗೂ ೩ನೇ ವರ್ಷದ ಸಿ. ಸುವರ್ಣ ಎಂ. ಪುಟ್ಟಸ್ವಾಮಿ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಜಯರಾಂ ಕೋಣನಹಳ್ಳಿ ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅವರು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ. ಬಸವರಾಜು ಅವರಿಗೆ ಸಿ. ಗೌರಮ್ಮ ಚಿಕ್ಕಣ್ಣ ಸಮಾಜ ಸೇವಾ ಪ್ರಶಸ್ತಿ ೨೫ ಸಾವಿರ ನಗದು ಪುರಸ್ಕಾರದೊಂದಿಗೆ ಗೌರವಿಸಲಾಗುವುದು ಹಾಗೂ ಶಾಲಾ ಶಿಕ್ಷಣ ಇಲಾಖೆ ನಿವೃತ್ತ ಸಹ ನಿರ್ದೇಶಕ ಎಂ.ಶಿವಮಾದಪ್ಪ ಅವರಿಗೆ ಸಿ. ಸುವರ್ಣ ಎಂ. ಪುಟ್ಟಸ್ವಾಮಿ ಶೈಕ್ಷಣಿಕ ಪ್ರಶಸ್ತಿ ೨೧ ಸಾವಿರ ನಗದು ಪುರಸ್ಕಾರದೊಂದಿಗೆ ಪ್ರದಾನ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೌಡಯ್ಯನದೊಡ್ಡಿ ಚಿಕ್ಕಣ್ಣ, ಸಿ.ಕೃಷ್ಣೇಗೌಡ, ನಿವೃತ್ತ ಪ್ರಾಂಶುಪಾಲ ಎಂ. ಪುಟ್ಟಸ್ವಾಮಿ ಅವರು ಸಮಾರಂಭದಲ್ಲಿ ಭಾಗವಹಿಸುವರು ಎಂದರು.ಸಂಘದ ಪದಾಧಿಕಾರಿಗಳಾದ ತಗ್ಗಹಳ್ಳಿ ವೆಂಕಟೇಶ್, ಎಚ್.ಡಿ.ಸೋಮಶೇಖರ್, ಯರಹಳ್ಳಿ ಕೃಷ್ಣೇಗೌಡ ಅವರು ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್