ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಮೋಘ ಬ್ಯಾಟಿಂಗ್ ಪ್ರದರ್ಶನ ಹಾಗೂ ಶಿಸ್ತುಬದ್ಧ ಬೌಲಿಂಗ್ ನೆರವಿನೊಂದಿಗೆ ಅಂಡರ್-19 ಕೂಚ್ ಬಿಹಾರ್ ಟ್ರೋಫಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ (ಎಂಪಿಸಿಎ) ತಂಡವನ್ನು ಮಣಿಸಿ ಕರ್ನಾಟಕ ತಂಡ ಗೆಲುವಿನ ನಗೆ ಬೀರಿತು.ಇಲ್ಲಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಪಂದ್ಯದ ಕೊನೆಯಲ್ಲಿ ಮಧ್ಯಪ್ರದೇಶ ತಂಡ 40 ರನ್‌ಗಳ ಟಾರ್ಗೆಟ್ ನೀಡಿತ್ತು. ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ 7.1 ಓವರ್‌ಗೆ 41 ರನ್ ಪೇರಿಸಿ ಗೆಲವು ಸಾಧಿಸಿತು. ಆರಂಭಿಕ ಬ್ಯಾಟರ್ ಪ್ರಕಾರ ಚತುರ್ವೇದಿ 29 (26) ಹಾಗೂ ಹರಿ ರಾಜೀವ 6 (4) ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿದರು. ಈ ಮಧ್ಯೆ ವಿಷ್ಣು ಭರದ್ವಾಜ್ ಬೌಲಿಂಗ್ ದಾಳಿಯಲ್ಲಿ ಆರಂಭಿಕ ಆಟಗಾರ ಕೃಶಿವ ಬಜಾಟ್ 5 ರನ್ ಗಳಿಸಿ ಔಟಾದರು.
ಮೊದಲ ಇನ್ಸಿಂಗ್‌ನಲ್ಲಿ 147 ರನ್ ಮುನ್ನಡೆ ಸಾಧಿಸಿದ್ದ ಕರ್ನಾಟಕ ತಂಡದ ಸವಾಲು ಬೆನ್ನಟ್ಟಿ ಭಾನುವಾರ ಇನ್ಸಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ತಂಡ ದಿನದಾಟದ ಅಂತ್ಯಕ್ಕೆ 38 ಒವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಪೇರಿಸಿತ್ತು. ಸೋಮವಾರ ಆಟ ಮುಂದುವರಿಸಿದ ತಂಡ ಆಲ್‌ಔಟ್ ಆಗಿ 187 ಗಳಿಸಿ ಕೇವಲ 40 ರನ್‌ಗಳ ಟಾರ್ಗೆಟ್ ನೀಡಿತ್ತು. ಇದಕ್ಕೂ ಪೂರ್ವದಲ್ಲಿ ನಡೆದ ಮೊದಲ ಇನ್ಸಿಂಗ್‌ನಲ್ಲಿ ಧೀರಜ್ ಗೌಡ (182 ಎಸೆತಗಳಲ್ಲಿ 157 ರನ್) ಶತಕದ ನೆರವಿನೊಂದಿಗೆ ಕರ್ನಾಟಕ ತಂಡ 416 ರನ್ ಬಾರಿಸಿತ್ತು.ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್‌ನಲ್ಲಿ ಮಧ್ಯ ಪ್ರದೇಶ ತಂಡ 101.1 ಒವರ್‌ಗಳಲ್ಲಿ 269 ರನ್, ಎರಡನೇ ಇನಿಂಗ್ಸ್‌ನಲ್ಲಿ 63.4 ಒವರ್‌ನಲ್ಲಿ 187 ರನ್ ಕಲೆ ಹಾಕಿತ್ತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡ 129.3 ಒವರ್‌ಗೆ 416 ರನ್, ಎರಡನೇ ಇನಿಂಗ್ಸ್‌ನಲ್ಲಿ 7.1 ಒವರ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 41 ರನ್.