ತಾಲೂಕು ಶಾಮಿಯಾನ ಸಪ್ಲಾಯರ್ಸ್ ಸಂಘದ 6ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಗುರುವಾರ ಬೆಳಗ್ಗೆ ಕಪ್ಪತ್ತಗುಡ್ಡದಲ್ಲಿ ಬೀಜ ಬಿತ್ತುವ ಕಾರ್ಯಕ್ರಮದ ನಂತರ ಸಂಜೆ 4 ಗಂಟೆಗೆ ಬಾಗೇವಾಡಿ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.
ಮುಂಡರಗಿ: ಗದಗ ಜಿಲ್ಲಾ ಶ್ಯಾಮಿಯಾನ್ ಸಪ್ಲಾಯರ್ಸ್ ಸಂಘ ಹಾಗೂ ಮುಂಡರಗಿ ತಾಲೂಕು ಶಾಮಿಯಾನ ಸಪ್ಲಾಯರ್ಸ್ ಸಂಘದಿಂದ ಜೂ. 11ರಂದು ಬೆಳಗ್ಗೆ 8 ಗಂಟೆಗೆ ತಾಲೂಕಿನ ಬಾಗೇವಾಡಿ ವ್ಯಾಪ್ತಿಯ ಕಪ್ಪತ್ತಗುಡ್ಡದಲ್ಲಿ ಕೋಟಿ ಬೀಜ ಬಿತ್ತುವ ಹಸಿರೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ತಾಲೂಕು ಶಾಮಿಯಾನ್ ಸಪ್ಲಾಯರ್ಸ್ ಸಂಘದ ಅಧ್ಯಕ್ಷ ರಾಜು ಹಟ್ಟಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಶಾಮಿಯಾನ ಸಪ್ಲಾಯರ್ಸ್ ಸಂಘದ 6ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಗುರುವಾರ ಬೆಳಗ್ಗೆ ಕಪ್ಪತ್ತಗುಡ್ಡದಲ್ಲಿ ಬೀಜ ಬಿತ್ತುವ ಕಾರ್ಯಕ್ರಮದ ನಂತರ ಸಂಜೆ 4 ಗಂಟೆಗೆ ಬಾಗೇವಾಡಿ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.
ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ತಾಲೂಕು ಶಾಮಿಯಾನ ಸಪ್ಲಾಯರ್ಸ್ ಸಂಘದ ಅಧ್ಯಕ್ಷ ರಾಜು ಹಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಪೊಲೀಸಪಾಟೀಲ, ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ, ತಹಸೀಲ್ದಾರ್ ಎರ್ರಿಸ್ವಾಮಿ, ಸಿಪಿಐ ಅಯ್ಯನಗೌಡ ಪಾಟೀಲ, ಉತ್ತರ ಕರ್ನಾಟಕ ಶಾಮಿಯಾನ ಸಪ್ಲಾಯರ್ಸ್ ಸಂಘದ ಅಧ್ಯಕ್ಷ ಅಮರೇಶ್ವರ ಹಿರೇಮಠ ಚೆನ್ನಬಸವ ಗಸ್ತಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಗದಗ: 110 ಕೆವಿ ಲಕ್ಷ್ಮೇಶ್ವರ, 110 ಕೆವಿ ಬಾಗೇವಾಡಿ ಹಾಗೂ 110 ಕೆವಿ ಬೆಳ್ಳಟ್ಟಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಜೂ. 11ರಂದು ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.110 ಕೆವಿ ಲಕ್ಷ್ಮೇಶ್ವರ, 110 ಕೆವಿ ಬಾಗೇವಾಡಿ ಹಾಗೂ 110 ಕೆವಿ ಬೆಳ್ಳಟ್ಟಿ ಉಪಕೇಂದ್ರಗಳಿಂದ ಪೂರೈಕೆಯಾಗುವ ಹಾಗೂ 33 ಕೆವಿ ಎಂಎಂಸಿಎಲ್ ಗಾಳಿಯಂತ್ರ ಘಟಕ ಮತ್ತು 33 ಕೆವಿ ಸೊಮೇಶ್ವರ ಸ್ಪಿನ್ನಿಂಗ್ ಮಿಲ್, ಸೋಲಾರ್-1, ಸೋಲಾರ್-2 ಹಾಗೂ 110 ಕೆವಿ ಎನಾರಕಾನ್, 110 ಕೆವಿ ಆದಿತ್ಯ ಬಿರ್ಲಾ ಸೋಲಾರ್, 33 ಕೆವಿ ಜಾಲವಾಡಗಿ ನೀರು ಸರಬರಾಜು ಉಪಕೇಂದ್ರ, 33 ಕೆವಿ ಸೂರಣಗಿ ಉಪಕೇಂದ್ರ ಮತ್ತು 33 ಕೆವಿ ಹೊಳೆಇಟಗಿ ಉಪಕೇಂದ್ರ 110 ಕೆವಿ ಬಾಗೇವಾಡಿ ಉಪಕೇಂದ್ರದ ವ್ಯಾಪ್ತಿಗೆ ಬರುವ ಸೋಲಾರ್, ಎನ್‌ಜೆವೈಗಳಿಂದ ಪೂರೈಸುವ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳ 11 ಕೆವಿ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.