ಕೆ.ವಿ.ಮನು
ಏಷ್ಯಾದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂದು ಹೆಸರುಗಳಿಸಿರುವ ಹಾರೋಹಳ್ಳಿ ಹಾಗೂ ಕನಕಪುರ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ್ ಸೇರಿ ಉತ್ತರ ಭಾರತದ ಯುವಕರು ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಅಂದಾಜು 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 8 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬಿಹಾರ್, ಅಸ್ಸಾಂ, ಉತ್ತರಪದೇಶ, ಮಣಿಪುರದವರು. ಈ ವಲಸೆ ಕಾರ್ಮಿಕರು ಬನ್ನಿಕುಪ್ಪೆ, ಹುಲೇ ಸಿದ್ದೇಗೌಡನದೊಡ್ಡಿ, ರಾಮಸಾಗರ, ಯರೇಹಳ್ಳಿ, ಗಾಣಳುದೊಡ್ಡಿ, ಹಾರೋಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿ ಗ್ರಾಮಗಳಲ್ಲಿ ಹಾಗೂ ಕನಕಪುರದಲ್ಲಿ ಮನೆಬಾಡಿಗೆ ಪಡೆದು ವಾಸವಾಗಿದ್ದಾರೆ. ಸ್ಥಳೀಯ ಮನೆ ಮಾಲೀಕರು ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿ ಯಾವುದೇ ರೀತಿ ಮಾಹಿತಿ ಪಡೆಯದೆ ಮನೆ ಬಾಡಿಗೆ ನೀಡುತ್ತಿದ್ದು, ಅಕ್ರಮಗಳು ನಡೆದರೆ ಯಾರು ಹೊಣೆ ಎಂಬತಾಗಿದೆ.ಒಂದೇ ಮನೆಯಲ್ಲಿ 10-20 ಮಂದಿ ವಾಸವಿದ್ದು, ಪಾಳಿಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಹಲವು ಕಾರ್ಖಾನೆಗಳ ಆಡಳಿತ ಮಂಡಳಿ ಒಟ್ಟಿಗೆ ಕಾರ್ಮಿಕರನ್ನು ಕರೆ ತಂದು ಬಾಡಿಗೆ ಮನೆಗಳಲ್ಲಿ ಇರುಸುತ್ತಿದ್ದು ಯಾರು ಯಾವ ಸಮಯದಲ್ಲಿ ಬರುತ್ತಾರೆ ಹೋಗುತ್ತಾರೆ ಎಂಬ ಮಾಹಿತಿಯೇ ಇರುವುದಿಲ್ಲ.ಸ್ಥಳೀಯರಲ್ಲಿ ಆತಂಕ:
ಹಲವು ಸಾಮಾಜ ಘಾತುಕ ಪ್ರಕರಣದಿಂದ ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಹಾಗೂ ಚಿಂತೆ ಶುರುವಾಗಿದೆ. ಕನಕಪುರ ಪಟ್ಟಣ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಖಾನೆ ಮಾಲೀಕರು ಹಾಗೂ ಬಾಡಿಗೆಗೆ ಮನೆ ನೀಡಿರುವ ಮಾಲೀಕರಿಗೆ ಪೊಲೀಸರು ಸೂಕ್ತ ಎಚ್ಚರಿಕೆ ನೀಡಿ ಅವರ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಬೇಕೆಂಬ ಆಗ್ರಹ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.-ಕೋಟ್-
ಜಯಸಿಂಹ, ಕನ್ನಡ ಸೇನೆ ತಾಲೂಕು ಅಧ್ಯಕ್ಷ --------------
ಕುಮಾರಸ್ವಾಮಿ, ರಾಜ್ಯ ಸಲಹೆಗಾರ ಜಯ ಕರ್ನಾಟಕ ಜನಪರ ವೇದಿಕೆ