ಹರಿಹರ: ತುಂಗಭದ್ರಾ ನದಿ ಬುಧವಾರ ಸಂಜೆಯಿಂದ ಎರಡೂ ತಟಗಳನ್ನು ತೆಕ್ಕೆಗೆ ಪಡೆದು ಮೈದುಂಬಿ ಹರಿಯುತ್ತಿದೆ. ನಗರದ ರಾಘವೇಂದ್ರ ದೇವಸ್ಥಾನದ ಹಿಂಭಾಗ ತುಂಗಾರತಿಗಾಗಿ ನಿರ್ಮಿಸಲಾದ ಶಿವನ ಮೂರ್ತಿಯ ಪಾದ ಸೋಕಲು ಅಲೆಗಳು ಹಾತೊರೆಯುವ ದೃಶ್ಯ ಮನಮೋಹಕವಾಗಿದೆ.
ಸಾರ್ವಜನಿಕರು ವಾಹನಗಳನ್ನು ಹರಿಹರ- ರಾಣೇಬೆನ್ನೂರು ಸೇತುವೆ ಮೇಲೆ ಅಡ್ಡಾದಿಡ್ಡಿ ನಿಲ್ಲಿಸಿ ವಾಹನ ಸಂಚಾರಕ್ಕೆ ಕಿರಿಕಿರಿ ತಂಡೊದ್ದಿದ್ದರು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ನದಿ ಸಮೀಪ ಹೋಗದಂತೆ ಬ್ಯಾರಿಕೇಡ್ ನಿರ್ಮಿಸಿ, ಬಂದೋಬಸ್ತ್ ಕಲ್ಪಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಪಾನಿಪೂರಿ, ಗೋಲ್‌ಗಪ್ಪ, ಹುರಿದ ಶೇಂಗಾ, ಹುರುಗಡಲೆ, ಐಸ್ ಕ್ರೀಂ, ಸೌತೆಕಾಯಿ ಮುಂತಾದವುಗಳ ಮಾರಾಟದ ಅಂಗಡಿಗಳಲ್ಲಿ ಕೊಂಚ ವ್ಯಾಪಾರ ಜೋರಾಗಿತ್ತು.
- - - -೩೧ಎಚ್‌ಆರ್‌ಆರ್ ೧a: