ಸಾಲು ರಜೆ ನಡುವೆ ಶೃಂಗೇರಿಗೆ ಜನಸಾಗರ

KannadaprabhaNewsNetwork |  
Published : Dec 25, 2023, 01:32 AM IST
ೇ | Kannada Prabha

ಸಾರಾಂಶ

ಶೃಂಗೇರಿಯಲ್ಲಿ ಬೆಳಿಗ್ಗೆಯಿಂದ ಶ್ರೀ ಶಾರದಾಂಬೆ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.ಶ್ರೀಮಠದ ಆವರಣ, ಶ್ರೀ ಶಾರದಾಂಬಾ ದೇಗುಲ, ಶ್ರೀ ಶಂಕರಾಚಾರ್ಯ, ಶ್ರೀ ತೋರಣ ಗಣಪತಿ ದೇವಾಲಯಗಳಲ್ಲಿ ಭಕ್ತರು ತುಂಬಿದ್ದರು. ಶ್ರೀಮಠದ ಬೋಜನಾ ಶಾಲೆ,ನರಸಿಂಹವನ ಎಲ್ಲೆಡೆ ಭಕ್ತಗಣವೇ ತುಂಬಿತ್ತು.

ಶೃಂಗೇರಿ: ವೀಕೆಂಡ್‌, ಇಯರ್‌ ಎಂಡ್‌, ಕ್ರಿಸ್ಮಸ್‌ ಹೀಗೆ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಶೃಂಗೇರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಭಾನುವಾರ ಶೃಂಗೇರಿ ಪಟ್ಟಣ, ಶ್ರೀಮಠದಲ್ಲಿ ಜನಸಾಗರವೇ ಕಂಡುಬಂದಿತು.ಶ್ರೀಮಠದ ಆವರಣದಲ್ಲಿ ಭಾನುವಾರ ಭಕ್ತಸಾಗರವೇ ಹರಿದು ಬಂದಿತ್ತು. ಬೆಳಿಗ್ಗೆಯಿಂದ ಶ್ರೀ ಶಾರದಾಂಬೆ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.ಶ್ರೀಮಠದ ಆವರಣ, ಶ್ರೀ ಶಾರದಾಂಬಾ ದೇಗುಲ, ಶ್ರೀ ಶಂಕರಾಚಾರ್ಯ, ಶ್ರೀ ತೋರಣ ಗಣಪತಿ ದೇವಾಲಯಗಳಲ್ಲಿ ಭಕ್ತರು ತುಂಬಿದ್ದರು. ಶ್ರೀಮಠದ ಬೋಜನಾ ಶಾಲೆ,ನರಸಿಂಹವನ ಎಲ್ಲೆಡೆ ಭಕ್ತಗಣವೇ ತುಂಬಿತ್ತು. ದೇಶದ,ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಲೇ ಇದ್ದಾರೆ. ಪ್ರತೀ ವರ್ಷ ಡಿಸೆಂಬರ್‌ ಕೊನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಶೃಂಗೇರಿ ಪಟ್ಟಣ, ಬಸ್‌ ನಿಲ್ದಾಣ, ಗಾಂಧಿ ಮೈದಾನ ಸೇರಿದಂತೆ ಎಲ್ಲೆಲ್ಲೂ ಜನಜಂಗುಳಿ ಕಂಡುಬರುತ್ತಿದೆ. ಎಲ್ಲಾ ವಸತಿ ಗೃಹಗಳು ತುಂಬುತ್ತಿವೆ. ಪಟ್ಟಣದ ಭಾರತೀ ಬೀದಿ, ಗಾಂದಿ ಮೈದಾನ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳವೇ ಇಲ್ಲದಂತಾಗಿದೆ. ಭಾನುವಾರ ಸಂಜೆಯವರೆಗೂ ಜನಜಂಗುಳಿಇತ್ತು.24 ಶ್ರೀ ಚಿತ್ರ 4-

ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಭಾನುವಾರ ಕಂಡು ಬಂದ ಜನಸಾಗರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು