.ಕೆಜಿಎಫ್‌ನಲ್ಲಿ ಸಿಆರ್‌ಪಿಎಫ್‌ ಘಟಕ

KannadaprabhaNewsNetwork |  
Published : Nov 18, 2024, 12:04 AM IST
೧೫ಕೆಜಿಎಫ್೧ಕೆಜಿಎಫ್ ತಾಲೂಕಿನ ಬಂಗಾರದ ಗಣಿ ಗ್ರಾಮದ ೧೦೦ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಭಾರತೀಯ ಮೀಸಲು ಪಡೆ. | Kannada Prabha

ಸಾರಾಂಶ

ಕೆಜಿಎಫ್‌ನ ಕೈಗಾರಿಕಾ ಟೌನ್‌ಶಿಪ್‌ನ ಬಂಗಾರದ ಗಣಿ ಗ್ರಾಮದ 100 ಎಕರೆ ಪ್ರದೇಶದಲ್ಲಿ ಭಾರತೀಯ ಮೀಸಲು ಪಡೆ ಸ್ಥಾಪಿಸುವುದರಿಂದ ಹಾಗೂ ತಮಿಳುನಾಡಿನ ಗಡಿಭಾಗದ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯ ಹಾಗೂ ನಗರ ಗಡಿ ಭಾಗದ ಸುರಕ್ಷತೆ ಉಪಲಬ್ಧಗಳಿಗೆ ತುಕಡಿಗಳನ್ನು ನಿಯೋಜಿಸಲು ಅನುಕೂಲವಾಗಿರುತ್ತದೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ನಗರದ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ತುಕಡಿ ಸ್ಥಾಪಿಸಲು ಸರ್ಕಾರದ ಹಸಿರು ನಿಶಾನೆ ತೋರಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಕೋಲಾರದ ಕೆಜಿಎಫ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವತಿ ಗ್ರಾಮದಲ್ಲಿ ಹೊಸದಾಗಿ ಸಿಆರ್‌ಪಿಎಫ್ ತುಕಡಿಗಳನ್ನು ಆರಂಭಿಸಲು ರಾಜ್ಯ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಕಾಪಾಡಲು ಹೆಚ್ಚಿನ ಶಕ್ತಿ ದೊರೆದಂತಾಗಿದೆ.ಬೆಂಗಳೂರು ಗ್ರಾಮಾಂತರ ಅವತಿ ಗ್ರಾಮದ ಕೂಡಗುರ್ಕಿ ಗ್ರಾಮದಲ್ಲಿ ಸ್ಥಾಪನೆ ಮಾಡುವುದರಿಂದ ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯ, ವಿಮಾನ ನಿಲ್ದಾಣದ ಭದ್ರತೆಗೆ, ವಿವಿಐಪಿ ಭದ್ರತೆಗೆ ಮತ್ತು ನಗರದ ಸುರಕ್ಷತೆ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ತುರ್ತಾಗಿ ತುಕಡಿಗಳ ಅಗತ್ಯವಿದ್ದಲ್ಲಿ ಸಕಾಲದಲ್ಲಿ ನಿಯೋಜಿಸಲು ಸಲಭವಾಗಲಿದೆ.

ಬಂಗಾರದ ಗಣಿ ಗ್ರಾಮ ಆಯ್ಕೆ

ಕೈಗಾರಿಕಾ ಟೌನ್‌ಶಿಪ್‌ನ ಬಂಗಾರದ ಗಣಿ ಗ್ರಾಮದ 100 ಎಕರೆ ಪ್ರದೇಶದಲ್ಲಿ ಭಾರತೀಯ ಮೀಸಲು ಪಡೆ ಸ್ಥಾಪಿಸುವುದರಿಂದ ಹಾಗೂ ತಮಿಳುನಾಡಿನ ಗಡಿಭಾಗದ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಬಂದೋಬಸ್ತ್ ಕರ್ತವ್ಯ ಹಾಗೂ ನಗರ ಗಡಿ ಭಾಗದ ಸುರಕ್ಷತೆ ಉಪಲಬ್ಧಗಳಿಗೆ ತುಕಡಿಗಳನ್ನು ನಿಯೋಜಿಸಲು ಅನುಕೂಲವಾಗಿರುತ್ತದೆ ಎಂದು ಭಾರತೀಯ ಮೀಸಲು ಪಡೆಗಳನ್ನು ಕೆಜಿಎಫ್ ತಾಲೂಕಿನಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.

ಒಂದು ಸಾವಿರ ಪೊಲೀಸರ ನೇಮಕ

ಭಾರತೀಯ ಮೀಸಲು ಬೆಟಾಲಿಯನ್ ಸ್ಥಾಪನೆ ಮಾಡಲು ಕೇಂದ್ರ-ರಾಜ್ಯ ಸರ್ಕಾರಗಳು ಶೇ.50-50 ಅನುಪಾತದಲ್ಲಿ ಖರ್ಚು, ವೆಚ್ಚಗಳನ್ನು ನೋಡಿಕೊಳ್ಳುತ್ತಿವೆ. ಒಂದು ಮೀಸಲು ಪಡೆಗೆ ಐಪಿಎಸ್ ಕಮಾಂಡರ್ ನೇಮಕ ಮಾಡಲಿದ್ದು, ಡಿವೈಎಸ್ಪಿ ದರ್ಜೆ ಮೂರು ಕಮಾಂಡರ್‌ಗಳು ಹಾಗೂ 50 ಕ್ಕೂ ಹೆಚ್ಚು ಅಧಿಕಾರಿಗಳು ಒಂದು ಸಾವಿರ ಪೊಲೀಸರ ನಿರ್ವಹಣೆ ಮಾಡಲಿದ್ದಾರೆ.

ಸ್ಥಾಪನೆಗೆ ಶಾಸಕಿ ಸ್ವಾಗತ

ಕೆಜಿಎಫ್ ಕ್ಷೇತ್ರದಲ್ಲಿ ಭಾರತೀಯ ಮೀಸಲು ಪಡೆ ಸ್ಥಾಪನೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವುದಕ್ಕೆ ಸ್ವಾಗತಿಸುವುದಾಗಿ ಶಾಸಕಿ ರೂಪಕಲಾಶಶಿಧರ್‌ ತಿಳಿಸಿದ್ದಾರೆ. ಮೀಸಲು ಪಡೆ ಘಟಕದ ಸ್ಥಾಪನೆ ಹಿನ್ನೆಲೆಯಲ್ಲಿ ಕೆಜಿಎಫ್ ನಗರವು ಆರ್ಥಿಕವಾಗಿ ಸದೃಢವಾಗಲಿದೆ. ಸ್ಥಳೀಯವಾಗಿ ನೂರಾರು ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!