ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ತಾಲೂಕಿನ ಕೆಂಪನಕೊಪ್ಪಲು ಗ್ರಾಮದ ಪ್ರಗತಿಪರ ರೈತ ಕೆ.ಪಿ. ಜಗದೀಶ್ ಅವರ ಕಾಳೇನಹಳ್ಳಿ ಗ್ರಾಮದ ಜಮೀನಿನಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ, ಜಿಪಂ ಮತ್ತು ಕೆ.ಆರ್. ನಗರ ತಾಲೂಕು ಅರ್ಕೇಶ್ವರಸ್ವಾಮಿ ರೈತ ಉತ್ಪಾದಕರ ಸಂಸ್ಥೆಯ ಸಹಯೋಗದಲ್ಲಿ ನಡೆದ ಅಪ್ರಧಾನ ಹಣ್ಣುಗಳ ಬೇಸಾಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ರೈತರು ವಾಣಿಜ್ಯ ಬೆಳೆಯಾಗಿ ಬೆಳೆಯುವ ಹಣ್ಣುಗಳನ್ನು ಅಪ್ರಧಾನ ಹಣ್ಣುಗಳು ಎಂದು ಕರೆಯಲಿದ್ದು, ಈ ವಿಚಾರದಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನ ಪಡೆದು ತಮ್ಮ ಜಮೀನಿನಲ್ಲಿ ಹೆಚ್ಚುವರಿಯಾಗಿ ಇವುಗಳನ್ನು ಬೆಳೆಯಬೇಕೆಂದು ಸಲಹೆ ನೀಡಿದರು.ಮಣ್ಣಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆ ಬೆಳೆದರೆ ಲಾಭ ಗಳಿಸಲು ಸಾಧ್ಯವಾಗುವುದರ ಜತೆಗೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ತಪ್ಪಲಿದ್ದು, ಇದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.
ವಿಶ್ವದ ಆಗ್ನೇಯ ಏಷ್ಯಾ, ಆಫ್ರಿಕಾ, ಅಮೇರಿಕಾದ ದಕ್ಷಿಣಿ, ಉತ್ತರ ಮತ್ತು ಮಧ್ಯಭಾಗಗಳಲ್ಲಿ ಡ್ರಾಗನ್ ಪ್ರ್ಯೂಟ್ಸ್ ಬೆಳೆಯನ್ನು ಹೆಚ್ಚಾಗಿದ್ದು, ಅದು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಉತ್ತಮ ಎಂದು ಸಂಶೋಧನೆಯಿಂದ ತಿಳಿದು ಬಂದಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ರಾಜ್ಯದ ರೈತರು ಹವಮಾನಕ್ಕೆ ಅನುಗುಣವಾಗಿ ಇಲ್ಲಿಯು ಬೆಳೆಯಬೇಕೆಂದು ಹೇಳಿದರು.
ದೊಡ್ಡೇಕೊಪ್ಪಲು ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಬಲರಾಮು, ಮಾಜಿ ಅಧ್ಯಕ್ಷ ಮಮತಾ ಜಗದೀಶ್, ನಂಜುಂಡ, ಅರ್ಕೇಶ್ವರಸ್ವಾಮಿ ರೈತ ಉತ್ಪಾದಕರ ಸಂಸ್ಥೆಯ ಕೆ.ಎಂ. ಶ್ರೀನಿವಾಸ್, ರೈತ ಮುಖಂಡರಾದ ಎಂ.ಎಸ್. ನಟರಾಜು, ಕೆಂಪೇಗೌಡ, ಮಹದೇವ್, ವೆಂಕಟೇಗೌಡ, ಬಲರಾಮು, ಸಣ್ಣಮಾಲೇಗೌಡ, ವೆಂಕಟರಾಮು, ಹೆಬ್ಬಾಳು ರವಿ, ಜಗದೀಶ್, ಕೃಷ್ಣೇಗೌಡ, ಶಂಕರ್ ರಾವ್ ಬಾಂಗೆ, ಅಂಬರೀಶ್, ರೈತರು ಭಾಗವಹಿಸಿದ್ದರು.